ನಕಮಜಲು, ಪೆರ್ನಾಜೆ ಭಾಗದಲ್ಲಿ ಕೃಷಿ ತೋಟಕ್ಕೆ ಕಾಡಾನೆ ಲಗ್ಗೆ
ಸುಳ್ಯ:ಸುಳ್ಯ ತಾಲೂಕಿನ ಕನಕಮಜಲು ಸಮೀಪದ ಪೆರ್ನಾಜೆ ಭಾಗಗಳಲ್ಲಿ ಕೃಷಿ ತೋಟಕ್ಕೆ ಕಾಡಾನೆ ಲಗ್ಗೆ ಇಟ್ಟು ಕೃಷಿ ಹಾನಿ ಮಾಡಿರುವ ಘಟನೆ ನಡೆದಿದೆ.
ಕೆಲ ದಿನಗಳಿಂದ ಪುತ್ತೂರು, ಸುಳ್ಯ, ಕಾಸರಗೋಡು ಗಡಿ ಭಾಗದಲ್ಲಿ ನಿರಂತರ ಕಾಡಾನೆ ಓಡಾಟ ನಡೆಸುತ್ತಾ, ಕೃಷಿ ತೋಟಕ್ಕೆ ಲಗ್ಗೆ ಇಡುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕನಕಮಜಲಿನ ಪೆರ್ನಾಜೆಯ ಕೃಷ್ಣಪ್ಪ ಎಂಬವರ ಕೃಷಿ ತೋಟಕ್ಕೆ ಲಗ್ಗೆ ಇಟ್ಟಿರುವ ಕಾಡಾನೆ ತೆಂಗು, ಅಡಿಕೆ, ಬಾಳೆ ಗಿಡಗಳನ್ನು ಹಾನಿ ಮಾಡಿದೆ. ಹಾಗೂ ಸಮೀಪದ ಅರಣ್ಯ ಪ್ರದೇಶದಲ್ಲೂ ಆಹಾರಕ್ಕಾಗಿ ಮರಗಳನ್ನು ಬೀಳಿಸಿ ಹಾಕಿರುವುದು ಕಂಡುಬಂದಿದೆ. ಈ ಭಾಗದಲ್ಲಿ ಕೆಲ ದಿನಗಳಿಂದ ನಿರಂತರ ಕಾಡಾನೆಗಳು ಲಗ್ಗೆ ಇಡುತ್ತಿದೆ. ಮನೆಯ ಅಂಗಲಕ್ಕೂ ಕಾಡಾನೆ ಬಂದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.