ಅಲಕ್ಷಿತರು ಸೃಜಿಸಿದ ಸಾಹಿತ್ಯ ಮುನ್ನೆಲೆಗೆ ಬರಬೇಕು : ಪ್ರೊ. ಚಿತ್ತಯ್ಯ ಪೂಜಾರ
ಕಲಬುರಗಿ:ಏ.6:ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮಾಚರಣೆ ಸರಣಿ ಉಪನ್ಯಾಸ ಮಾಲೆ-7 ಅಲಕ್ಷಿತ ಸಮುದಾಯಗಳ ಸೃಜಸಿದ ಸಾಹಿತ್ಯ ಎಂಬ ವಿಷಯ ಕುರಿತು ಪ್ರೊ. ಚಿತ್ತಯ್ಯ ಪೂಜಾರ ಅವರು ಮಾತನಾಡುತ್ತಾ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ಅಭಿನಂದನಾರ್ಹ ಕಾರ್ಯವನ್ನು ಮಾಡುತ್ತಿರುವುದು. ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ಅಭಿಪ್ರಾಯಪಟ್ಟರು.
Golden age and Golden Time ಸೂತ್ರವನ್ನಿಟ್ಟುಕೊಂಡು ಅಧ್ಯಾಯನದಲ್ಲಿ ತಲ್ಲಿನರಾಗಬೇಕು. ನಮ್ಮ ಜೀವನೋಪಾಯಕ್ಕೆ ಬೇಕಾದ ಅಗತ್ಯತೆ ಸಬಲಿಕಣರಕ್ಕಾಗಿ ಚಳುವಳಿಗಳು ನಡೆಸಬೇಕಾದ ಅನಿವಾರ್ಯತೆಯಿದೆ. ಸಾಹಿತ್ಯವನ್ನು ಪ್ರವೇಶ ಮಾಡದೆ ಇರುವ ಅಲಕ್ಷಿತ ಸಮುದಾಯಗಳ ಸಂವಹನ ನಡೆಯಬೇಕಿದೆ. ಸಾಹಿತ್ಯವನ್ನು ಪುನರಾವಲೋಕನ ಮಾಡಬೇಕಿದೆ ಎಂದು ಚಿತ್ತಯ್ಯ ಪೂಜಾರ ಅಭಿಪ್ರಾಯಪಟ್ಟರು. ಕೋರೊನಾ ಕಾಲಘಟ್ಟದಿಂದ ಕೆಟ್ಟು ಪಟ್ಟಣ ಸೇರು ಎಂಬುದನ್ನು ಬಿಟ್ಟು ಜೀವನ ಉಳಿವಿಗಾಗಿ ಊರು ಸೇರಬೇಕಾಗಿದೆ ಎಂದರು. ಇಂದಿನ ಬದುಕಿನಲ್ಲಿ ಬದಲಾವಣೆಗಳು ಆಗು ಮಾಡಿಕೊಳ್ಳಬೇಕಿದೆ ಗ್ರಾಮೀಣ ಜಗತ್ತು ಜ್ಞಾನದ ಕಣಜ. ದೇಸಿಯ ಶ್ರಮ ಮೂಲದಿಂದ ಹುಟ್ಟಿದ ಅನುಭವ ಜನ್ಯ ಸಾಹಿತ್ಯ ಅವಲೋಕನ ನಡೆಯಬೇಕಿದೆ. ಜಾಗತಿಕರಣದ ಕರಿನೆರಳಿನಲ್ಲಿ ನರುಳುತ್ತಿರುವ ಜಗತ್ತು ಬದಲಾವಣೆಗೆ ಒಡ್ಡಿಕೊಳ್ಳಬೇಕು ನಮ್ಮ ಸಮಾಜದಲ್ಲಿ ಅದೆಷ್ಟೊ ಜನಸಮುದಾಯಗಳು ಅಲೆಮಾರಿಯಾಗಿ ನೆಲೆ ಇಲ್ಲದೆ ತಿರುಗುತ್ತಿರುವ ಸಮುದಾಯಗಳ ಸಂಕಟ, ಸಮಸ್ಯೆ, ಸಂಸ್ಕøತಿಗಳನ್ನು ದಾಖಲಿಸಬೇಕಾಗಿದೆ ಎಂದರು. ಅವರ ಕಷ್ಟ-ಕಾರ್ಪಣ್ಯ-ನೋವು ನಲಿವಿನ ಕುರಿತು ಗಮನ ತತ್ವಪದ, ದಾಸರು, ಸಂತರು, ಕೀರ್ತನೆಕಾರರು, ಸೂಫಿಗಳು, ಅವಧೂತರು, ಸುಡಗಾಡÀು ಸಿದ್ದರು ಇವರೆಲ್ಲರು ಮುಖ್ಯವಾಹಿನಿಗೆಯೇ ಬಂದ ರೀತಿಯಲ್ಲಿ ನೋಡಿಕೊಂಡ ಇವರೆಲ್ಲರೂ ಸಮಸಮಾಜ ನಿರ್ಮಾಣಕ್ಕಾಗಿಯೇ ಶ್ರಮಿಸಿದವರು ಇವರಾಗಿದ್ದಾರೆ. ಸಾಹಿತ್ಯದಲ್ಲಿ ಬಳಕೆಗೊಳ್ಳುದ ವಿಷಯ ವಸ್ತುವನ್ನು ಬಳಸಿಕೊಂಡು ದೇಸಿ ನೆಲೆಯಲ್ಲಿ ಕಟ್ಟಿಕೊಡಬೇಕಾಗಿದೆ. ಪ್ರಾಚೀನ ಕಾಲದಿಂದಲೂ ಅಲಕ್ಷಕ್ಕೆ ಒಳಗಾದ ಕುಲಕಸಬ, ವೃತ್ತಿ, ಶಿಲ್ಪಿ ನೀರಘಂಟಿ, ಮಡಿವಾಳ, ಕಂಬಾರ, ಕುಂಬಾರ ವಿಷಯ ಚಿಂತನೆಗಳನ್ನು ಮುನ್ನೆಲೆಗೆ ತರುವ ಪ್ರಯತ್ನ ಮಾಡಬೇಕೆಂದರು.
ನಗರಗಳ ನವನಾಗರಿಕತೆಗೆ ಮರುಳಾಗಿದೆ ಸ್ಥಳೀಯ ಅಲಕ್ಷಿತ ಸಾಹಿತ್ಯದ ಕುರಿತಾದ ಚಿಂತನ ಮಂಥನ ನಡೆಯಬೇಕು. ಅಜ್ಞಾನ ಸ್ಥಿತಿಯಲ್ಲಿರುವ ಅನುಭವಜನ್ಯ ಜ್ಞಾನದ ಕುರಿತು ತುರ್ತಾದ ಅಧ್ಯಯನ ನಡೆಯಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪೆÇ್ರ. ಎಚ್.ಟಿ. ಪೆÇೀತೆ ಅವರು ಮಾತನಾಡುತ್ತ ಕತ್ತಲೆಯುಗದಲ್ಲೂ ಕೂಡ ತತ್ವಪದಕಾರರು, ಸ್ವರವಚನ, ಕೀತರ್ನಕಾರರು ಮೌಲಿಕ ಸಾಹಿತ್ಯ ರಚನೆ ಮಾಡಿದರು. ಇದು ಹೀಗೆ ಕತ್ತಲೆಯುಗ ಹೇಗೆ ಎಂಬುದನ್ನು ಪ್ರಶ್ನಿಸಬೇಕಿದೆ. ಅಲಕ್ಷಿತನದಿಂದ ದೂರ ಉಳಿದ ವಿಚಾರ ಹಾಗೂ ಚಿಂತನೆಗಳನ್ನು ಸಂಶೋಧಕರು ಪ್ರಚಾರ ಪಡಿಸಬೇಕಂದು ಹೇಳಿದರು. ಅಲಕ್ಷಿತ ಸಮುದಾಯದ ಕಲೆ, ಸಾಹಿತ್ಯ, ಸಂಸ್ಕøತಿ, ರಾಜಕೀಯ, ಸಮಾಜಿಕತೆಯನ್ನು ಅನಾವರಣ ಮಾಡಬೇಕಿದೆ ಎಂದು ಹೇಳಿದರು. ಈ ಭಾಗದಲ್ಲಿರುವ ಬರಹಗಾರರು, ಸೂಕ್ಷ್ಮಗ್ರಹಿಕೆಯ ಮನೋಭಾವದಿಂದ ಅಧ್ಯಯನಕ್ಕೆ ಒಳಗಾಗಬೇಕು. ಅಲ್ಪಸಂಖ್ಯಾತ ಸಮುದಾಯ ಬಹುಸಂಖ್ಯಾತರ ಸಂಸ್ಕøತಿ, ಜ್ಞಾನವನ್ನು ಅಲ್ಲಗಳೆಯುತ್ತಾ, ಭೇದ ಸೃಷ್ಟಿಸಿದ ವ್ಯವಸ್ಥೆಯನ್ನು ಕಿತ್ತೆಸೆದು ಉಪಯುಕ್ತ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಪೆÇ್ರ. ಎಚ್.ಟಿ. ಪೆÇೀತೆ ಹೇಳಿದರು. ಕಾರ್ಯಕ್ರಮದಲ್ಲಿ ಡಾ. ನಾಗಪ್ಪ ಟಿ. ಗೋಗಿ ಹಾಗೂ ಕನ್ನಡ ಅಧ್ಯಯನ ಸಂಸ್ಥೆಯ ಅತಿಥಿ ಉಪನ್ಯಾಸಕರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಡಾ. ಸಂತೋಷಕುಮಾರ ಎಸ್. ಕಂಬಾರ ಸ್ವಾಗತಿಸಿದರು. ಸ್ನಾತಕೋತ್ತರ ವಿದ್ಯಾರ್ಥಿನಿ ಪವಿತ್ರ ವಂದಿಸಿದರು. ಅಣವೀರ ನಿರೂಪಿಸಿದರು.