ಜ್ಞಾನಕ್ಕೆ ಸಮಾನವಾದದ್ದು ಬೇರೆ ಯಾವುದೂ ಇಲ್ಲ: ಡಾ.ಗಾಂಧೀಜಿ ಮೋಳಕೆರೆ
ಕಲಬುರಗಿ,ಏ.6-ಜ್ಞಾನಕ್ಕೆ ಸಮಾನವಾದದ್ದು ಬೇರೆ ಯಾವುದೂ ಇಲ್ಲ ಎಂದು ಡಾ.ಅಂಬೇಡ್ಕರ್ ಪದವಿ ಮಹಾವಿದ್ಯಾಲಯದ ಇತಿಹಾಸ ಉಪನ್ಯಾಸಕ ಡಾ.ಗಾಂಧೀಜಿ ಮೋಳಕೆರೆ ಹೇಳಿದರು.
ನಗರದ ಜೇವರ್ಗಿ ಕಾಲೋನಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಎಂ.ಎ. ಇತಿಹಾಸದ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ತೃತೀಯ ಸೆಮಿಸ್ಟರ್ ವಿದ್ಯಾರ್ಥಿಗಳು ಏರ್ಪಡಿಸಿದ
ಸ್ವಾಗತ ಸಮಾರಂಭÀದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ನಿರಂತರ ಅಧ್ಯಯನ ಮಾಡಬೇಕು. ಏಕೆಂದರೆ ಇತಿಹಾಸ ಓದುಗರಿಗೆ ತುಂಬಾ ಅನುಕೂಲವಾಗಿದೆ. ನೈತಿಕ
ತಿಳುವಳಿಕೆ ಹೆಚ್ಚಿಸುತ್ತದೆ ಸಮಾಜದಲ್ಲಿ ಉತ್ತಮ ನಾಗರಿಕನಾಗಿ ರೂಪಿಸುತ್ತದೆ. ವಿದ್ಯಾರ್ಥಿಗಳು ಮೊಬೈಲ್ ನೋಡಿದರೆ ಜೀವನ ಹಾಳು ಪುಸ್ತಕ ಓದಿದರೆ ಜೀವನ ಬಾಳು ಅದಕ್ಕಾಗಿ ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಅವರು ದಿನದ 24 ಗಂಟೆಗಳಲ್ಲಿ 18 ಗಂಟೆಗಳ ಕಾಲ ಅಧ್ಯಯನ ಮಾಡಿ ಜಗತ್ತಿನ ಶ್ರೇಷ್ಠ ಜ್ಞಾನಿಯಾಗಿದ್ದಾರೆ ನೀವು ನಿರಂತರ ಅಧ್ಯಯನ ಅಧ್ಯಾಪನದಲ್ಲಿ ತೊಡಗಿಸಿಕೊಂಡು ಒಳ್ಳೆ ನಾಗರೀಕರಾಗಬೇಕು ಸುಂದರ ಹೂವಿನ ಆಯುಷ ಒಂದು ದಿನ ಮನುಷ್ಯನ ಆಯುಷ್ಯ 50ರಿಂದ 100 ವರ್ಷ ಅದಕ್ಕಾಗಿ ಜಗತ್ತಿಗೆ ನನ್ನ ಕೊಡುಗೆ ಏನು? ದೇಶಕ್ಕಾಗಿ ಪಂಚವಾರ್ಷಿಕ ಯೋಜನೆಯ ಹಾಗೇ ನಮ್ಮ ಬದುಕಿಗೆ ನಾವು ಯೋಜನೆಗಳನ್ನು ಹಾಕಿಕೊಳ್ಳಬೇಕು ಅಂದಾಗ ಮಾತ್ರ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬದುಕಿ ಕಾಲೇಜಿಗೂ ಮತ್ತು ತಂದೆ ತಾಯಿಗಳಿಗೂ ಕೀರ್ತಿ ತರಲು ಸಾಧ್ಯವಾಗುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಡಾ.ಪ್ರಕಾಶ ಮುರಗೆ ಅವರು ಮಾತನಾಡುತ್ತ, ನಮ್ಮ ಕಾಲೇಜಿನ ಇತಿಹಾಸ ವಿಭಾಗವು ಈ ಭಾಗದ ಇತಿಹಾಸವನ್ನು ಸಂಶೋಧನೆ ಮಾಡುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತಿದೆ ಅದಕ್ಕಾಗಿ ವಿದ್ಯಾರ್ಥಿನಿಯರು ಒಳ್ಳೆಯ ಅಧ್ಯಯನ ಮಾಡಿ ಕಾಲೇಜಿನ ಪ್ರಾಧ್ಯಾಪಕರಿಗೆ ಹಾಗೂ ನಿಮ್ಮ ತಂದೆ ತಾಯಿಗಳ ಕೀರ್ತಿಯನ್ನು ಹೆಚ್ಚಿಸಬೇಕೆಂದರು.
ಇತಿಹಾಸ ವಿಭಾಗದ ಸಂಯೋಜಕರಾದ ಡಾ. ಮಲ್ಲಿಕಾರ್ಜುನ್ ಶೆಟ್ಟಿ ಅವರು ಪ್ರಾಸ್ತಾವಿಕ ಮಾತನಾಡುತ್ತಾ ಇತಿಹಾಸ ನಿಂತ ನೀರಲ್ಲ ಸದಾ ಹರಿಯುತ್ತಿರುವ ನೀರು ಕಲ್ಯಾಣ ಕರ್ನಾಟಕವು ಜಗತ್ತಿಗೆ ಪ್ರಜಾಪ್ರಭುತ್ವದ ಕೊಡುಗೆ ನೀಡಿದೆ ಅದಕ್ಕಾಗಿ ವಿದ್ಯಾರ್ಥಿನಿಯರು ಈ ನಾಡಿನ ಇತಿಹಾಸವನ್ನು ಪುನರ್ ನಿರ್ಮಾಣ ಮಾಡುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು.
ಸಮಾರಂಭದಲ್ಲಿ ಕಾಲೇಜಿನ ನ್ಯಾಕ್ ಸಂಯೋಜಕರಾದ ಡಾ.ಶರಣಪ್ಪ ಚಿಕ್ಕಳ್ಳಿ ,ಡಾ. ಪ್ರಕಾಶ ಬಡಿಗೇರ, ಡಾ. ಅಶೋಕ ಕುಮಾರ ಮಾಡಿಯಾಳ, ಪ್ರಕಾಶ್ ಪಾಟೀಲ್ ಉಪಸ್ಥಿತರಿದ್ದರು.
ಎಂ.ಎ. ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿ ನಿಯರಿಗೆ ನೆನಪಿನ ಕಾಣಿಕೆ ಮತ್ತು ಹೂಗುಚ್ಛ ಕೊಡುವುದರ ಮೂಲಕ ಸ್ವಾಗತ ಕೋರಲಾಯಿತು. ಈ ಕಾರ್ಯಕ್ರಮಕ್ಕೆ ಬಂದಿರುವ ಅತಿಥಿಗಳನ್ನು ವಿದ್ಯಾರ್ಥಿಯರಾದ ಕುಮಾರಿ
ಮಂದಾಕಿನಿ ನಿರೂಪಿಸಿದ್ದಳು. ಕುಮಾರಿ ಮಮತಾ ಸ್ವಾಗತಿಸಿದಳು .ವಿದ್ಯಾರ್ಥಿನಿಯರಾದ ಕುಮಾರಿ ಸುಧಾರಾಣಿ ಮತ್ತು ಕುಮಾರಿ ವಿಜಯಲಕ್ಷ್ಮಿ ಪ್ರಾರ್ಥನೆ ಗೀತೆ ಹಾಡಿದರು ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾಕ್ಟರ್ ಭೀಮಣ್ಣ ಘನತೆ ಅವರು ವಂದಿಸಿದರು.