ಸದೃಢ ಭಾರತ ನಿರ್ಮಾಣಕ್ಕಾಗಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ
ಕಲಬುರಗಿ:ಏ.6: ನಗರ ಪ್ರದೇಶದ ಜನರು ಹೆಚ್ಚಾಗಿ ಮತದಾನ ಮಾಡುವುದಿಲ್ಲ ಎಂದು ಆರೋಪವನ್ನು ದೂರ ಮಾಡಲು ನಗರ ಪ್ರದೇಶದ ವಿದ್ಯಾವಂತ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕು. ಚುನಾವಣಾ ಆಯೋಗವು ಪ್ರತಿ ಚುನಾವಣೆಯಲ್ಲೂ ಸುಧಾರಣೆ ಮಾಡಿ ಮತದಾನ ಮಾಡವುದು ಸುಲಭ ಮಾಡಿದೆ. ಸದೃಢ ಭಾರತ ನಿರ್ಮಾಣಕ್ಕೆ ಈ ಬಾರಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಕಲಬುರಗಿ ಮಹಾನಗರಪಾಲಿಕೆ ಸ್ವೀಪ್ ನೋಡಲ್ ಅಧಿಕಾರಿ ಅಬ್ದುಲ್ ರಹೆಮಾನ್ ಅವರು ಮತದಾನ ಮಹತ್ವ ಕುರಿತು ಪ್ರತಿಜ್ಞಾವಿಧಿ ಬೋಧಿಸಿ ಹಾಗೂ ಸ್ವೀಪ್ ಜಾಗೃತಿಯ ಕಾಲ್ನಡಿಗೆ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಂದಾಯ ಅಧಿಕಾರಿ ಸಂತೋಷ ಅನಿಶಟ್ಟರ್, ಆರೋಗ್ಯ ನಿರೀಕ್ಷಕರಾದ ಶರಣು ತೆಂಗಳಿ, ರಾಜಪ್ಪಾ ಕಟ್ಟಿಮನಿ, ಬಸವರಾಜ ಪಾಣೆಗಾಂವ, ಕಂದಾಯ ನಿರೀಕ್ಷಕರಾದ ಜಗದೇವ ಸ್ವಾಮಿ, ರಾಘವೇಂದ್ರ ಕುಲಕರ್ಣಿ, ಮಹೇಶ ವಾಗ್ದಾಳೆ, ಬಿ.ಎಲ್.ಓ. ಸೂಪರವೇಜರ್ ದತ್ತು, ಕರವಸೂಲಿಗಾರರಾದ ಶ್ಯಾಮರಾವ ಜೀವಣಗಿ, ಮಲ್ಲಿನಾಥ ಸಾಗನೂರ ಹಾಗೂ ಪಾಲಿಕೆ ಸಿಬ್ಬಂದಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.