ಕಲಬೇರಕೆ ಸೆಂಧಿ ಜಪ್ತಿ
ಯಾದಗಿರಿ : ಏ.06 : ಭಾರತ ಚುನಾವಣಾ ಆಯೋಗವು ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ಘೋಷಿಸಿ 2024ರ ಮಾರ್ಚ್ 16 ರಿಂದ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಚುನಾವಣೆ ಶಾಂತಿಯುತವಾಗಿ ನಿಷ್ಪಕ್ಷಪಾತವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮವಹಿಸಲು ಜಿಲ್ಲೆಯ ವ್ಯಾಪ್ತಿಯಲ್ಲಿ ನಕಲಿ ಮದ್ಯ, ಅಕ್ರಮ ಮದ್ಯ, ಕಲಬೆರಕೆ ಸೇಂದಿ, ಕಳ್ಳಭಟ್ಟಿ ಸಾರಾಯಿ ಹಾಗೂ ಇತರೆ ಅಬಕಾರಿ ಅಕ್ರಮ ಪದಾರ್ಥಗಳ ತಯಾರಿಕೆ ಸಾಗಾಣಿಕೆ ಸಂಗ್ರಹಣೆ ಹಾಗೂ ಮಾರಾಟಗಳಂತಹ ಅಕ್ರಮ ಚಟುವಟಿಕೆಗಳು ನಡೆಯದಂತೆ ಚುನಾವಣಾ ಆಯೋಗದ ನಿರ್ದೇಶನದಂತೆ ಕ್ರಮ ಕೈಗೊಂಡಿರುವ ಮಾಹಿತಿ ಸಲ್ಲಿಸಲಾಗಿದೆ ಎಂದು ಯಾದಗಿರಿ ಅಬಕಾರಿ ಉಪ ಆಯುಕ್ತೆ ಶಾರದಾ ಸಿ.ಕೋಲಕಾರ ಅವರು ತಿಳಿಸಿದ್ದಾರೆ.
ಪ್ರಕರಣ ಸಂ.02,2024ರ ಏಪ್ರಿಲ್ 05 ರಂದು ಮಾನ್ಯ ಅಬಕಾರಿ ಅಪರ ಆಯುಕ್ತರು (ಜಾರಿ ಮತ್ತು ಅಪರಾಧ) ಕೇಂದ್ರ ಸ್ಥಾನ ಬೆಳಗಾವಿ ಅವರು ನಿರ್ದೇಶನ ಮೇರೆಗೆ ಹಾಗೂ ಮಾನ್ಯ ಅಬಕಾರಿ ಜಂಟಿ ಆಯುಕ್ತರು (ಜಾ ಮತ್ತು ತ) ಕಲಬುರಗಿ ವಿಭಾಗ ಕಲಬುರಗಿ ಅವರು ಮತ್ತು ಮಾನ್ಯ ಅಬಕಾರಿ ಉಪ ಆಯುಕ್ತರು, ಯಾದಗಿರಿ ಜಿಲ್ಲೆ ಯಾದಗಿರಿ ಅವರು ಆದೇಶದಂತೆ, ಶ್ರೀ ಆನಂದ ಉಕ್ಕಲಿ, ಅಬಕಾರಿ ಉಪ ಅಧೀಕ್ಷಕರು, ಉಪ ವಿಬಾಗ ಶಹಾಪುರ ಅವರು ನೇತೃತ್ವದಲ್ಲಿ, ಶ್ರೀ ಶರಣಗೌಡ ಬಿರಾದಾರ ಅಬಕಾರಿ ನಿರೀಕ್ಷಕರು ಹಾಗೂ ಶ್ರೀ ಸುರೆಶ ಕುಮಾರ ಮಳೇಕರ, ಅಬಕಾರಿ ಉಪ ನಿರೀಕ್ಷಕರು, ಉಪ ವಿಭಾಗ ಶಹಾಪುರ್ ಹಾಗೂ ಶ್ರೀಶೈಲ್ ಒಡೆಯರ್, ಅಬಕಾರಿ ನಿರೀಕ್ಷಕರು, ಶ್ರೀ ಬಸವರಾಜ ರಾಜಣ್ಣವರ್ ಅಬಕಾರಿ ಉಪ ನಿರೀಕ್ಷಕರು, ಜಿಲ್ಲಾ ವಿಚಕ್ಷಣದಳ ಯಾದಗಿರಿ, ಅಬಕಾರಿ ಮುಖ್ಯ ಪೇದೆಯಾದ ಶ್ರೀ ಅನಿಲ್ ಕುಮಾರ, ಅಬಕಾರಿ ಪೇದೆಯಾದ ಶ್ರೀ ಪ್ರವೀಣ ಕುಮಾರ ರಜಪೂತ್, ವಾಹನ ಚಾಲಕರಾದ ಶ್ರೀ ವೆಂಕಟೇಶ ಮತ್ತು ಶ್ರೀ ದೊಂಡಿಬಾ ಜಾಧವ, ಗೃಹ ರಕ್ಷಕದಳ ಸಿಬ್ಬಂದಿಯಾದ ಅರ್ಜುನ ಜಾಧವ ಮತ್ತು ಶಿವುಕುಮಾರ ಸಿಬ್ಬಂದಿಯವರೊAದಿಗೆ ಯಾದಗಿರಿ ಪಟ್ಟಣದ ರೈಲ್ವೆ ಸ್ಟೇಷನ್ ಫ್ಲಾಟ್ ಫಾರಂ ನಂಬರ್-2ರ ನೇದ್ದರ ಮೇಲ್ ಸೇತುವೆ ಹತ್ತಿರ ಸಿಬ್ಬಂದಿಯೊAದಿಗೆ ಗಸ್ತು ಮಾಡುತ್ತಾ ಅಬಕಾರಿ ದಾಳಿ ನಡೆಸಿದಾಗ ದಾಳಿ ಸಮಯದಲ್ಲಿ ಅಕ್ರಮವಾಗಿ ತಯಾರಿಸಿ ಮಾರಾಟ ಮಾಡುವ ಸಾಗಾಟ ಮಾಡುತ್ತಿರುವಾಗ ಸಿಕ್ಕಿದ್ದು ಒಟ್ಟು 75 ಲೀಟರ್ ಕಲಬೇರಕೆ ಸೆಂಧಿ ಜಪ್ತಿ ಪಡಿಸಿಕೊಂಡು ಆರೋಪಿಯಾದ ಂ-1 ಭೀಮಪ್ಪ ತಂದೆ ರಾಮಣ್ಣ, ಂ-2 ಮೀನಾಕ್ಷಿ ಗಂಡ ಸುರೇಶ್, ಸದರಿ ಎ-1 ಆರೋಪಿಯನ್ನು ಮಾನ್ಯ ನ್ಯಾಯಾಲಯ ಒಪ್ಪಿಸಿ ಎ-2 ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಬೇಕಾಗಿದೆ, ಸದರಿ ಆರೋಪಿತರ ವಿರುದ್ಧ ಪ್ರಕರಣವನ್ನು ಅಬಕಾರಿ ಉಪ ನಿರೀಕ್ಷಕರು ಉಪ ವಿಭಾಗ ಶಹಾಪುರ ಅವರು ಪ್ರಕರಣವನ್ನು ದಾಖಲಿಸಿಕೊಂಡಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.