ಕೃಷ್ಣಾ ಕಾಲುವೆಯಿಂದ ಭೀಮೆಗೆ ನೀರು
ಇಂಡಿ :ಏ.6:ಕೃಷ್ಣಾ ಮುಖ್ಯ ಕಾಲುವೆಯಿಂದ ಭೀಮೆಗೆ ನೀರು ಹರಿಯ ಬಿಡಲಾಗಿದೆ ಎಂದು ಕೆ.ಬಿ.ಜೆ.ಎನ್ ಎಲ್ ಅಧೀಕ್ಷಕ ಅಭಿಯಂತರ ಮನೋಜಕುಮಾರ ಗಡಬಳ್ಳಿ ತಿಳಿದ್ದಾರೆ.
ಕೃಷ್ಣಾ ಕಾಲುವೆಯಿಂದ ತೆಗ್ಗೆಳ್ಳಿ ಹಳ್ಳ, ಮಾರ್ಸನಳ್ಳಿ,ಅರ್ಜುಣಗಿ, ಹಂಚನಾಳ,ಮಿರಗಿ ಹಳ್ಳಗಳಿಗೆ ನೀರು ಹರಿಯುತ್ತಿದೆ.
ನಂತರ ಮಿರಗಿ ಹಳ್ಳದಿಂದ ಭೀಮಾ ನದಿಗೆ ಸೇರುತ್ತದೆ. ಈ ನೀರು ಜನ ಜಾನುವಾರುಗಳಿಗೆ ಗ್ರಾಮದ ಜನರಿಗೆ, ಅಡವಿ ವಸ್ತಿ ಜನರಿಗೆ ಕುಡಿಯಲು ಉಪಯೋಗವಾಗುತ್ತದೆ ಎಂದು ಗಡಬಳ್ಳಿ ತಿಳಿಸಿದ್ದಾರೆ.
ಸಹಾಯಕ ಅಭಿಯಂತರ ಸುಧಾಕರ ಶಿರಗಣ್ಣನವರ, ಭೀರಪ್ಪ ಪೂಜಾರಿ,ಕಿರಿಯ ಅಭಿಯಂತರ ಸಾಧಿಕ ಹೊನ್ನಟಗಿ ಮತ್ತಿತರಿದ್ದರು.