ನಾಳೆ ದೇಶ ಉಳಿಸಿ ಸಂಕಲ್ಪಯಾತ್ರೆ
ವಿಜಯಪುರ,ಏ.6:ಏ. 7ರಂದು ದೇಶ ಉಳಿಸಿ ಸಂಕಲ್ಪಯಾತ್ರೆ ನಡೆಯಲಿದೆ ಎಂದು ದಲಿತ ವಿದ್ಯಾರ್ಥಿ ಪರಿಷತ್ ಸಂಸ್ಥಾಪಕ ಅಧ್ಯಕ್ಷÀ ಶ್ರೀನಾಥ ಪೂಜಾರ ಅವರು ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆವರು, ಅಂದು ವಿಜಯಪುರ ನಗರದ ಸಿದ್ದೇಶ್ವರ ದೇವಸ್ಥಾನದಿಂದ ರ್ಯಾಲಿ ಆರಂಭಗೊಂಡು ಗಾಂಧಿ, ಬಸವೇಶ್ವರ ವೃತ್ತದ ಮಾರ್ಗವಾಗಿ ಅಂಬೇಡ್ಕರ ವೃತ್ತದ ವರೆಗೊ ರ್ಯಾಲಿ ನಡೆಯಲಿದೆ ಎಂದು ತಿಳಿಸಿದರು.
ಬರಲಿರುವ ಲೋಕಸಭಾ ಚುನಾವಣೆಗಳು ಮುಂದಿನ 5 ವರ್ಷಗಳ ಕಾಲ ನಮ್ಮನ್ನು ಯಾರು ಆಳಬೇಕು ಎಂಬುದನ್ನು ತೀರ್ಮಾನಿಸುವ ಚುನಾವಣೆ ಮಾತ್ರವಾಗಿರದೆ, ಈ ದೇಶ ಪ್ರಜಾತಂತ್ರ ವ್ಯವಸ್ಥೆಯಡಿಇರಬೇಕಾ?, ಸರ್ವಾಧಿಕಾರಕ್ಕೆ ಒಳಗಾಗಬೇಕಾ? ಎಂಬುದನ್ನು ನಿರ್ಧರಿಸುವ ಚುನಾವಣೆಯಾಗಿದೆ ಎಂದು ಪೂಜಾರಿ ಹೇಳಿದರು.
ದೇಶ ಅವನತಿಯ ಅಂಚಿಗೆ ಬಂದು ನಿಂತಿದೆ. ಈ ಅವನತಿಯಿಂದ ದೇಶವನ್ನು ಸಂರಕ್ಷಿಸಿಕೊಳ್ಳಲು ಸಂಕಲ್ಪ ಜಾಥಾ ಪ್ರಾರಂಭವಾಗಿದೆ, ಈ ಯಾತ್ರೆಯ ವಿವರ, ಗುರಿ, ಉದ್ದೇಶಗಳ ಬಗ್ಗೆ ಅತಿ ಹೆಚ್ಚಿನ ಪ್ರಚಾರ ನೀಡಬೇಕೆಂದು ಮನವಿ ಮಾಡಿದರು.
ಕರ್ನಾಟಕದ ಸಮಸ್ತ ಜನಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಏಪ್ರಿಲ್ 1ರಿಂದ ಚಾಲನೆ ಪಡೆದಿರುವ ದೇಶ ಉಳಿಸಿ ಸಂಕಲ್ಪಯಾತ್ರೆ, ಮೂರು ವಾಹನಗಳಲ್ಲಿ, ಮೂರು ಮಾರ್ಗಗಳಲ್ಲಿ ಚಲಿಸಿ, ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಹಾಯ್ದು ಏಪ್ರಿಲ್ 8 ರಂದು ಬೆಳಗಾವಿ ತಲುಪಲಿದೆ. ಅಲ್ಲಿ ದೇಶ ಉಳಿಸಿ ಸಂಕಲ್ಪ ಸಮಾವೇಶ ಜರುಗಲಿದೆ. ಅದರಲ್ಲಿ ನಾಡಿನ ಎಲ್ಲಾ ಸಂಘಟನೆಗಳ, ಸಮುದಾಯಗಳ, ಸಾಹಿತ್ಯ – ಸಾಂಸ್ಕøತಿಕ ವಲಯದ ಮುಂದಾಳುಗಳು ಸಮಾಗಮಗೊಳ್ಳಲಿದ್ದಾರೆ. ಈ ದೇಶವನ್ನು ಸರ್ವಾಧಿಕಾರದಿಂದ, ದ್ವೇಷ ರಾಜಕಾರಣದಿಂದ ಸುಲಿಗೆಕೋರ ನೀತಿಗಳಿಂದ ಕಾಪಾಡಿಕೊಳ್ಳುವ ಪಣ ತೊಡಲಾಗುತ್ತದೆ.
ರಾಜ್ಯದ ಸಾಹಿತಿ, ಚಿಂತಕರು, ಹೋರಾಟಗಾರರ ನಡುವೆ ಜನವರಿ, ಫೆಬ್ರವರಿ ತಿಂಗಳುಗಳಲ್ಲಿ ಹಲವು ಸಮಾಲೋಚನಾ ಸಭೆಗಳು ನಡೆದವು. ಬರಲಿರುವ ಚುನಾವಣೆಗಳ ಗಂಭೀರತೆಯ ಬಗ್ಗೆ,, ಈ ಚುನಾವಣೆಗಳಲ್ಲಿ ನಾಗರಿಕ ಸಮಾಜದ ಪಾತ್ರದ ಬಗ್ಗೆ ಆಳವಾದ ಮಂಥನಗಳು ನಡೆದವು. ರಾಜ್ಯವ್ಯಾಪಿಯಾಗಿ ವಿವಿಧ ಸಂಘಟನೆ ಮತ್ತು ವೇದಿಕೆಗಳಡಿ ಸಂವಿಧಾನರಕ್ಷಣೆಗಾಗಿ, ಸಹಬಾಳ್ವೆಯ ಮರುಸ್ಥಾಪನೆಗಾಗಿ ಅನೇಕ ಪ್ರಯತ್ನಗಳು ನಡೆಯುತ್ತಿವೆ. ಈ ಎಲ್ಲಾಜೀವಪರ ಧಾರೆಗಳ ನಡುವೆ ತಳಮಟ್ಟದಲ್ಲೂ ಸಮರ್ಥ ಸಮನ್ವಯ ರೂಪಗೊಳ್ಳಬೇಕು. ನಾವೆಲ್ಲರೂ ಕೂಡಿ ಒಕ್ಕೊರಲ ಸಂಕಲ್ಪ ತೊಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಎಲ್ಲಾ ಜನಪರ ಶಕ್ತಿಗಳ ನಡುವೆ ಸಮನ್ವಯವನ್ನು ಸಂಬಂಧವನ್ನು ಗಟ್ಟಿಗೊಳಿಸುವ ಸಲುವಾಗಿ ಸಂಕಲ್ಪಯಾತ್ರೆ ನಡೆಯುತ್ತಿದೆ. ಜನಪರ ಶಕ್ತಿಗಳ ಐಕ್ಯ ನಿಲುವಿನ ಘೋಷಣೆಗಾಗಿ ಏಪ್ರಿಲ್ 8 ರಂದು ಬೆಳಗಾವಿಯಲ್ಲಿ ಸಂಕಲ್ಪ ಸಮಾವೇಶ ಜರುಗಲಿದೆ ಎಂದರು.
ಕರ್ನಾಟಕದಲ್ಲಿ ಅನೇಕ ಜನ ಚಳವಳಿಗಳು, ಸಂಘಟನೆಗಳು, ವೇದಿಕೆಗಳು ಇದ್ದರೂ ನಮ್ಮೆಲ್ಲರ ಗುರಿ ಒಂದೇ ಆಗಿದೆ. ಬರಲಿರುವ ಚುನಾವಣೆಗಳಲ್ಲಿ ಸಂವಿಧಾನ ವಿರೋಧಿ, ಧಮಾರ್ಂಧ, ಸುಲಿಗೆಕೋರ ಬಿಜೆಪಿಯನ್ನು ಸೋಲಿಸುವುದು. ಬಣ್ಣ ಬಣ್ಣದ ಕನಸುಗಳ ಮಹಾಪೂರ ಹರಿಸಿ ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ಕಳೆದ 10 ವರ್ಷಗಳಲ್ಲಿ ತನ್ನ ನಿಜ ಬಣ್ಣವನ್ನು ತೋರಿಸಿಕೊಂಡಿದೆ, ದೇಶದ ಪರಿಸ್ಥಿತಿಯನ್ನು ಅಧೋಗತಿಗೆ ತಂದಿಟ್ಟಿದೆ. ಜನಸಾಮಾನ್ಯರ ಬದುಕನ್ನು ಪಾತಾಳಕ್ಕೆ ತುಳಿದಿದೆ. ಬೆಲೆ ಏರಿಕೆ, ಕೃಷಿ ಬಿಕ್ಕಟ್ಟು, ನಿರುದ್ಯೋಗ, ಭ್ರμÁ್ಟಚಾರ ಕಂಪನಿಗಳ ಲೂಟಿ ಜನಸಾಮಾನ್ಯರ ಸುಲಿಗೆ, ಅನ್ಯಾಯ ಹೆಚ್ಚುತ್ತಿರುವ ಹಿಂಸೆ ದಮನ, ದೌರ್ಜನ್ಯ, ಧಾರ್ಮಿಕ ದೇಶದ ಬೆಳವಣಿಗೆಗಳಾಗಿವೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಸ್ಲಂ ಅಭಿವೃದ್ಧಿ ಸಮಿತಿಯ ಜಿಲ್ಲಾ ಮಾಜಿ ಅಧ್ಯಕ್ಷ ಅಕ್ರಂ ಮಾಶಾಳಕರ, ಜಮಾತೆಇಸ್ಲಾಂ ಸ್ಥಾನಿಕ ಅಧ್ಯಕ ಐ.ಎನ್. ಹುಲಿಕಟ್ಟಿ, ಎದ್ದೇಳು ಕರ್ನಾಟಕ ಜಿಲ್ಲೆಯ ಕೋ ಆರ್ಡಿನೇಟರ್ ಮಹಮ್ಮದ್‍ಅಬ್ದುಲ್ ಖದಿರ್, ಸ್ಲಂ ಅಭಿವೃದ್ಧಿ ನಗರ ಸಮಿತಿ ಅಧ್ಯಕ್ಷÀ ಮುತ್ತಣ್ಣ ಭೋವಿ ಇತರರು ಇದ್ದರು.