ಜಗಜೀವನ ರಾಂ ಅವರ ಆದರ್ಶಗಳು ನಮ್ಮದಾಗಬೇಕು:ನಾಯಕ
ಸೈದಾಪುರ:ಏ.6:ಡಾ.ಬಾಬು ಜಗಜೀವನ ರಾಂ ಅವರ ಆದರ್ಶಗಳನ್ನು ನಮ್ಮದಾಗಿಸಿಕೊಂಡು ಸಮಾಜದಲ್ಲಿ ಅಭಿವೃದ್ಧಿ ಸಾಧಿಸಬೇಕು ಎಂದು ಮುಖ್ಯಗುರು ಲಿಂಗಾರೆಡ್ಡಿ ನಾಯಕ ಅಭಿಪ್ರಾಯಪಟ್ಟರು.
ಪಟ್ಟಣದ ವಿದ್ಯಾ ವರ್ಧಕ ಸಂಘದ ವಿವಿಧ ವಿಭಾಗಗಳ ವತಿಯಿಂದ ಹಮ್ಮಿಕೊಂಡ ಡಾ.ಬಾಬು ಜಗಜೀವನರಾಂ ರವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಉಪ ಪ್ರಧಾನಿಗಳಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಸಮಾಜ ಸೇವಕರಾಗಿ ಅವರು ಮಾಡಿದ ಕಾರ್ಯ ದೇಶಕ್ಕೆ ಮಾದರಿಯಾಗಿದೆ. ಅವರ ತತ್ವ ಸಿದ್ಧಾಂತಗಳು ಉತ್ತಮ ಸಮಾಜ ಕಂಡುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು. ಸಂಸ್ಥೆಯ ಕೋಶಾಧ್ಯಕ್ಷ ಮುಕುಂದಕುಮಾರ ಅಲಿಝಾರ, ಪ್ರಾಂಶುಪಾಲರಾದ ಜಿ.ಎಂ.ಗುರುಪ್ರಸಾದ, ಕರಬಸಯ್ಯ ದಂಡಿಗಿಮಠ, ಸಾಬಯ್ಯ ರಾಯಪ್ಪನೋರ, ರಾಜಶೇಖರ ಪಾಟೀಲ, ಹಣಮರೆಡ್ಡಿ ಮೋಟ್ನಳ್ಳಿ, ಆನಂದ ಪಾಟೀಲ ಸೇರಿದಂತೆ ಇತರರಿದ್ದರು.