ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಮ
ಇಂಡಿ: ಏ.6:ಡಾ,ಬಾಬುಜಗಜೀವನರಾಮ ಸ್ವಾತಂತ್ರ್ಯ ಹೋರಾಟರರಷ್ಟೇ ಅಲ್ಲದೆ ಸಮಾಜ ಸೇವಕರು ನೆಹರು ಮಂತ್ರಿ ಮಂಡಲದ ಸಚಿವರಾಗಿದ್ದು ದೇಶದ ಆರ್ಥಿಕ ಸುಭದ್ರತೆ ನಿರ್ಮಿಸಿದ ನಾಯಕರು ಎಂದು ಕಂದಾಯ ಉಪವಿಭಾಗಾಧಿಕಾರಿ ಅಬೀದ ಗದ್ಯಾಳ ಹೇಳಿದರು.
ತಾಲೂಕಾ ಆಡಳಿತ ವತಿಯಿಂದ ಹಮ್ಮಿಕೊಂಡ ಡಾ.ಬಾಬುಜಗಜೀವನರಾಮ ಜಯಂತಿ ಸರಳ ಸಮಾರಂಭದಲ್ಲಿ ಮಾತನಾಡಿದ ಅವರು ಬಾಬುಜಗಜೀವನರಾಮ ಬಾಬೂಜೀ ಎಂದೇ ಖ್ಯಾತರಾಗಿದ್ದರು. ಹಸಿರು ಕ್ರಾಂತಿಯ ಹರಿಕಾರ ರಾಷ್ಟ್ರನಾಯಕ ಹಾಗೂ ಭಾರತದ ಉಪಪ್ರಧಾನಿ ಈ ದೇಶ ಬರಗಾಲದ ಸಂಧರ್ಬದಲ್ಲಿ ಹಸಿರು ಕ್ರಾಂತಿಯಿಂದ ಬಡವರಿಗೆ ಆಹಾರ ಕೊರತೆ ನೀಗಿಸಿದ ಧೀಮತ ನಾಯಕ ಬಾಬೂಜಿ ಸಮಾಜದ ಕಟ್ಟಕಡೆಯ ವ್ಯಕ್ತಿಯ ಜೀವನಕ್ಕೆ ಆದ್ಯತೆ ಕೊಟ್ಟಿದ್ದರಿಂದ ಇಂದು ಆಹಾರ ಪದಾರ್ಧ ಕೊರತೆಯಿಲ್ಲ. ಭಾರತ ಕೃಷಿ ಪ್ರಧಾನ ದೇಶ ಹಸಿವಿನಿಂದ ಮುಕ್ತ ಮಾಡುವ ಕನಸು ಹೊತ್ತ ರಾಷ್ಟ್ರ ನಾಯಕ, ಇವರು ಅಸ್ಪಶ್ಯತೆ ನಿವಾರಣೆಗಾಗಿ ಹೋರಾಟ ಮಾಡಿದ್ದಾರೆ ಸಾಮಾಜಿಕ ನ್ಯಾಯದ ಪರವಾಗಿ ಧ್ವನಿ ಎತ್ತಿದ ಒಳ್ಳೇಯ ಸಂಸದಿಯಪಟು ಸಂವಿಧಾನ ರಚನಾ ಸಮೀತಿಯ ಸದಸ್ಯರಾಗಿ ಉಪಪ್ರಧಾನಿಯಾಗಿ ಈ ದೇಶಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ.
ತಹಶೀಲ್ದಾರ ಶ್ರೀಮಂತಿ ಮಂಜುಳಾ ನಾಯಕ, ಸಮಾಜ ಕಲ್ಯಾಣಾಧಿಕಾರಿ ಬಿ.ಜೆ ಇಂಡಿ ,ಲ್ಯಾಂಡ ಆರ್ಮಿ ಎಇ, ರಾಜೇಶ ಹೂಗಾರ, ಪಿ.ಆರ್.ಇ.ಡಿ ಅಧಿಕಾರಿ ಎಸ್ .ಆರ್ ರುದ್ರವಾಡಿ, ಲೋಕೋಪಯೋಗಿ ಇಲಾಖೆಯ ದಯಾನಂದ ಮಠ,ತಾಲೂಕಾ ಪಂಚಾಯತ ಯೋಜನಾಧಿಕಾರಿ ಸಂಜೇಯ ಖಡಗೇಕರ್, ಮುಖಂಡ ಚಂದ್ರಶೇಖರ ಹೊಸಮನಿ ಸೇರಿದಂತೆ ಅನೇಕರಿದ್ದರು