ಡಾ. ಬಾಬು ಜಗಜೀವನರಾಮ್ ಅವರ 117ನೇ ಜಯಂತಿ ಆಚರಣೆ
ಅಥಣಿ:ಏ.6: ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ಹಸಿರು ಕ್ರಾಂತಿಯ ಹರಿಕಾರ ಭಾರತದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಮ್ ಅವರ 117 ನೇ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಸರಳ ರೀತಿಯಲ್ಲಿ ಆಚರಿಸಲಾಯಿತು
ಬಾಬೂಜಿ ಎಂದೇ ಖ್ಯಾತರಾದ ಡಾ.
ಜಗಜೀವನರಾಮ್ ಅವರು ರಾಷ್ಟ್ರೀಯ ಮಹಾನ್ ನಾಯಕರು, ಸ್ವಾತಂತ್ರ್ಯ ಹೋರಾಟಗಾರ, ಸಾಮಾಜಿಕ ನ್ಯಾಯದ ಹರಿಕಾರರು, ಶೋಷಿತ ಸಮುದಾಯಗಳ ಆಶಾಕಿರಣವಾಗಿದ್ದರು. ದೀನ ದಲಿತರ ಪರವಾಗಿ ಹಗಲಿರುಳು ಹೋರಾಡಿದ ಮಹಾನ್ ನಾಯಕ ಇಂದು ಅವರ 117ನೇ ಜಯಂತಿಯನ್ನು ಆಚರಿಸಲಾಯಿತು
ಇದೇ ಸಂದರ್ಭದಲ್ಲಿ ಮುಖಂಡರುಗಳಾದ ಮಲ್ಲಪ್ಪ ಮಾದರ. ಶ್ರೀಶೈಲ್ ಮಾದರ. ಸುರೇಶ ಮಾದರ. ಕೃಷ್ಣಪ್ಪ ಮಾದರ. ಪುಂಡಲೀಕ ಮಾದರ. ಸಿದ್ದು ಮಾಂಗ. ಚಂದ್ರವ್ವ ಮಾದರ. ರಮಾ ಮಾದರ. ಜರಿನಾ ಮಾದರ. ಸಮಾಜದ ಮುಖಂಡರುಗಳು ಭಾಗವಹಿಸಿದ್ದರು