ಬಳ್ಳಾರಿ  ಗ್ರಾಮಾಂತರ ಮಂಡಲ ದಲ್ಲಿಬಿಜೆಪಿ ಸಂಸ್ಥಾಪನಾ ದಿನಾಚರಣೆ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.6: ತಾಲೂಕಿನ ಯರ್ರಗುಡಿ ಗ್ರಾಮದಲ್ಲಿ ಬಿಜೆಪಿ ಬಳ್ಳಾರಿ ಗ್ರಾಮಾಂತರ ಮಂಡಲದಿಂದ ಇಂದು ಬಿಜೆಪಿ ಸ್ಥಾಪನ ದಿವಸ ಆಚರಿಸಲಾಯ್ತು.
ಬೂತ್ ಮಟ್ಟದ  ಕಾರ್ಯಕರ್ತರು  ಗ್ರಾಮದ ಬಸ್ ನಿಲ್ದಾಣದಿಂದ ಬೆಣಕಲ್ ರಸ್ತೆಯವರೆಗೆ ಪಕ್ಷದ ಧ್ಜ ಹಿಡಿದು ಪಾದಯಾತ್ರೆ ನಡೆಸಿ ಪಕ್ಷದ ಘೋಷಣೆಗಳನ್ನು ಕೂಗಲಾಯ್ತು.
ಕಾರ್ಯಕ್ರಮದಲ್ಲಿ ಬಳ್ಳಾರಿ ಗ್ರಾಮಾಂತರ ಮಂಡಲ ಅಧ್ಯಕ್ಷ ಎಚ್. ಆರ್. ಮಲ್ಲಿಕಾರ್ಜುನಗೌಡ,  ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಡಿ. ಪ್ರಕಾಶ್ ,  ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸಿ ಲೋಕೇಶ್ ರೆಡ್ಡಿ, ಭೋಗರಾಜ್ ಹಾಗೂ ಹೇಮಣ್ಣ ಕೆ ತಿಮ್ಮಪ್ಪ. ಶ್ರೀನಿವಾಸ ಗ್ರಾಮದ ಮುಖಂಡರಾದ ಸೂರ್ಯಕಾಂತ್ ರೆಡ್ಡಿ. ಟೀ ತುಳಸಪ್ಪ. ಜಿ ಹುಲಗಪ್ಪ. ಎಚ್ ಚಂದ್ರಶೇಖರ್. ಎಸ್ ಈರಣ್ಣ. ಜಿ ಮುದ್ದಪ್ಪ. ಮತ್ತು ಗ್ರಾಮದ ಬಿಜೆಪಿ ಮುಖಂಡರು ಹಾಗೂ ಸುತ್ತಮುತ್ತಲಿನ ಗ್ರಾಮದ ಬಿಜೆಪಿ ಮುಖಂಡರು  ಭಾಗವಹಿಸಿದ್ದರು.