ನಿಮ್ಮ ಬೆಂಬಲಕ್ಕೆ ನಾವೀದ್ದೇವೆ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.06: ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ತಯಾಗಿ ಸ್ಪರ್ಧೆ ಮಾಡಲಿರುವ ಬಿ.ಶ್ರೀರಾಮುಲು ಮೊನ್ನೆ ಸಂಜೆ ನಗರದ ಖಾಸಗಿ ಹೊಟೇಲ್ ನಲ್ಲಿ ಲಿಂಗಾಯತ ಸಮುದಾಯದ ಮುಖಂಡರ ಸಭೆ ಕರೆದಿದ್ದರು.
ಪಕ್ಷದ ಮುಖಂಡ ರವಿ ಕುಮಾರ್, ವರ್ತಕರ ಸಂಘದ ಅಧ್ಯಕ್ಷ ಅಂದ್ರಾಳ್ ಚಿದಾನಂದಪ್ಪ, ಕಂಡಕ್ಟರ್ ಹನುಂಮತಪ್ಪ ಮೊದಲಾದ ಮುಖಂಡರು ಇದ್ದರು.
ಈ ವೇಳೆ ಮಾತನಾಡಿದ ಶ್ರೀರಾಮುಲು ನಿಮ್ಮ ಸಮುದಾಯದ ಬೆಂಬಲಕ್ಕೆ ನಾನು ಇದ್ದೇನೆಂದು ಹೇಳಿದರೆ.  ಜನತಾ ಬಜಾರ್ ನ ಜಿ.ನೀಲಕಂಠಪ್ಪ ಅವರು ಶ್ರೀರಾಮುಲು ಮತ್ತು ಸೋಮಶೇಖರ ರೆಡ್ಡಿ ಅವರ ಬೆಂಬಲದಿಂದಲೇ ನಾನು ಜನತಾ ಬಜಾರ್ ಅಧ್ಯಕ್ಷರಾಗಲು ಸಹಕಾರಿಯಾಯ್ತು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.