ನಗರದಲ್ಲಿ ತುಕರಾಂ ಪತ್ನಿಯಿಂದಲೂ ಪ್ರಚಾರ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.06:  ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ತುಕಾರಾಂ  ಅವರ ಪತ್ನಿ ಅನ್ನಪೂರ್ಣ ಮಹಿಳಾ ಮುಖಂಡರ ಜೊತೆ ಇಂದು ನಗರದ ವಿವಿಧಡೆ ಸಂಚರಿಸಿ ಮತಯಾಚನೆ ಮಾಡಿದರು.
ಅಲ್ಲದೆ ಏ.12 ರಂದು ತುಕರಾಂ ಅವರು ನಾಮ ಪತ್ರ ಸಲ್ಲಿಸುತ್ತಿದ್ದು ಅಂದು ಎಲ್ಲರೂ ಆಗಮಿಸಿ ಅಭ್ಯರ್ಥಿ ಗೆಲುವಿಗೆ ಬೆಂಬಲಿಸಬೇಕೆಂದು ಕೋರಿದರು. ಮಾಜಿ  ಮೇಯರ್  ರಾಜೇಶ್ವರಿ, ಮಾಜಿ ಉಪ ಮೇಯರ್ ಮೊದಲಾದವರು ಜೊತೆಗಿದ್ದರು.