ನಗರದಲ್ಲಿ ಏ. 23 ವಿಪಶ್ಯನ ಜಿಪ್ಸಿ ಶಿಬಿರ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.06: ನಗರದಲ್ಲಿ ಏ.23 ರಿಂದ ಹತ್ತು ದಿನಗಳ ವಿಪಶ್ಯನ ಧ್ಯಾನ ಶಿಬಿರವನ್ನು  19 ವರ್ಷಗಳ ಮೇಲ್ಪಟ್ಟ ಹೊಸ ಮತ್ತು ಹಳೆಯ  ಪುರುಷ ಮತ್ತು ಮಹಿಳಾ ವಿದ್ಯಾರ್ಥಿಗಳಿಗೆ {ಭಾರತದ ನಿವಾಸಿಗಳಿಗೆ ಮಾತ್ರ} ಆಯೋಜಿಸಲಾಗಿದೆ.
ತಾಳೂರು ರಸ್ತೆಯ ಬಾಲ ಭಾರತಿ ಕೇಂದ್ರೀಯ ವಿದ್ಯಾಲಯದಲ್ಲಿ ಈ ಶಿಬಿರ ಇಂಗ್ಲೀಷ್ ಮತ್ತು ಕನ್ನಡ ಭಾಷೆಯಲ್ಲಿ ಇರಲಿದೆ.
 ಆಸಕ್ತರು ಧಮ್ಮಾ ಸೇವೆ ಮತ್ತು ಶಿಬಿರದಲ್ಲಿ ಭಾಗವಹಿಸಲು ಇಚ್ಚಿಸಿರುವವರು  94480 35548,  9483915548 ನಂಬರ್ ಗೆ ಸಂಪರ್ಕಿಸಬಹುದು.
ನಿಯಮಗಳು:
ವಿಪಶ್ಯನ ಧ್ಯಾನವನ್ನು ಕಲಿಸಲಾಗುತ್ತದೆ. ಸಾಧಕರು ಶಿಬಿರದಲ್ಲೇ ವಾಸವಾಗಿರಬೇಕು. ಒಂಭತ್ತು ದಿನಗಳ ಕಾಲ ಸಹಧ್ಯಾನಾರ್ಥಿಗಳ ಜೊತೆ ಯಾವುದೇ ಸಂವಹನ ಮಾಡದೆ ಮೌನವಾಗಿರಬೇಕು. ಹೊರ ಜಗತ್ತಿನೊಂದಿಗೆ ಯಾವ ಸಂಪರ್ಕವನ್ನೂ ಮಾಡುವಂತಿಲ್ಲ. ಓದುವುದು, ಬರೆಯುವುದು, ಫೋನ್ ಬಳಸುವಂತಿಲ್ಲ, ಬೇರೆ ರೀತಿಯ ಸಾಧನಾ ವಿಧಿಗಳು, ಹಾಗೂ ಯಾವುದೇ ಬಗೆಯ ಧಾರ್ಮಿಕ ವ್ರತಾಚಾರಣೆ ಮತ್ತು ನಿತ್ಯಾಚರಣೆಗಳನ್ನು ಹತ್ತು ದಿನಗಳ ಕಾಲ ಮಾಡುವಂತಿಲ್ಲ. ಸರಳವಾದ, ಮೈ ಮುಚ್ಚುವ, ಸಡಿಲವಾದ ತೋಳಿರುವ ಹಾಗೂ ಪಾರದರ್ಶಕವಲ್ಲದ ಉಡುಪುಗಳನ್ನೇ ಬಳಸಬೇಕು. ಸರಳ, ಆರೋಗ್ಯಕರವಾದ, ಸಸ್ಯಾಹಾರವನ್ನು ಒದಗಿ ಸಲಾಗುವುದು.
ಇದು ಸಂಪೂರ್ಣ ಉಚಿತ ಶಿಬಿರ ವಾಗಿರುತ್ತದೆ.