ಜಗಳೂರು ಕೆರೆಯಲ್ಲಿ ಅಕ್ರಮಣ್ಣು ಸಾಗಾಟ -: ಭೂ ಗಣಿ ವಿಜ್ಞಾನ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ.!
ಸಂಜೆವಾಣಿ ವಾರ್ತೆ
ಜಗಳೂರು.ಏ.೬:- ಪಟ್ಟಣದ ಕೆರೆ ಒಡಲಿನಲ್ಲಿ ಇತ್ತೀಚೆಗೆ ಅಕ್ರಮವಾಗಿ ಮಣ್ಣು ಅಗೆದು ಸಾಗಾಟಮಾಡಿಕೊಂಡು ನಿವೇಶನ ಸಮತಟ್ಟುಮಾಡಿಕೊಳ್ಳಲಾಗಿದೆ.ಸ್ಥಳಕ್ಕೆ ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅಧಿಕಾರಿ ನೇತೃತ್ವದ ತಂಡ ಭೇಟಿ ನೀಡಿ ಮಹಜರು ಮಾಡಲಾಯಿತು.ದಿನಾಂಕ -28-3-2024 ರಂದು ಸಂಜೆವಾಣಿ ದಿನ ಪತ್ರಿಕೆ ಯಲ್ಲಿ ಅನುಮತಿ ಪಡೆಯದೆ ಸಾವಿರಾರು ಲೋಡ್ ಮಣ್ಣು ಸಾಗಾಟ ” ಕೆರೆ ಒಡಲು ಅಗೆತದಿಂದ ಅಪಾಯದ ಸ್ಥಿತಿಯಲ್ಲಿ” ಎಂಬ ತಲೆಯಬರಹದಡಿಯಲ್ಲಿ ವರದಿ ಪ್ರಕಟಿಸಲಾಗಿತ್ತು ಈ ವರದಿಯನ್ನು ಆಧರಿಸಿ  ಭೂ ಗಣಿ ವಿಜ್ಞಾನ ಇಲಾಖೆ ಯ ಸಹಾಯಕ ನಿರ್ದೇಶಕರಾದ ಚೈತ್ರ.ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ರಾಘವೇಂದ್ರ ರವರು ಭೇಟಿ ನೀಡಿ ಕೆಲ‌ದಿನಗಳ‌ ಹಿಂದೆ ಖಾಸಗಿ ಜಮೀನು ಒಂದರ ಮಧ್ಯದಲ್ಲಿ ಭೂ ಸಮತಟ್ಟುಮಾಡಲು ಜೆಸಿಬಿ ಯಂತ್ರಗಳ ಮೂಲಕ ಕೆರೆಯ ಅಂಚಿನ ಒಡಲ ಭಾಗದಲ್ಲಿ ಸುಮಾರು ಪ್ರಮಾಣದ ಸಾವಿರಾರು ಲೋಡು ಮಣ್ಣನ್ನು ಅಕ್ರಮವಾ ಗಿ ಸಾಗಾಟ ಮಾಡಲಾಗಿದ್ದ ಖಾಸಗಿ ಜಮೀನಿಗೆ ಭೇಟಿ ನೀಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಭೂ ಗಣಿ ಇಲಾಖೆ ಮತ್ತು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಇದೀಗ ಮುಂದಾಗಿದ್ದಾರೆ .ಈ ಬಗ್ಗೆ ಕಂದಾಯ ಇಲಾಖೆ,ಪೊಲೀಸ್ ಇಲಾಖೆ,ಹಾಗೂ ಸಣ್ಣ ನೀರಾವರಿ ಇಲಾಖೆಯ.ಅಧಿಕಾರಿಗಳು ಕೆರೆಸಮಿತಿ ಸದಸ್ಯರು.ಸಾರ್ವಜನಿಕರು.ದಿನವಿಡೀ ಕಾದು ಕೆರೆ ಮಣ್ಣಿನ ಸಂರಕ್ಷಣೆ ಮಾಡಲಾಗಿತ್ತು. ಆದರೆ ರಾತ್ರೋ ರಾತ್ರಿ ಖಾಸಗಿ ಜಮೀನಿನಲ್ಲಿ ಖಾಸಗಿ ರಿಯಲ್ ಎಸ್ಟೇಟ್ ಮಾಲೀಕರು ಭಾರಿ ಪ್ರಮಾಣದ ಯಂತ್ರಗಳ ನ್ನು ಉಪಯೋಗಿಸಿ ಕೆರೆಯ ಒಡಲು ಅಗೆದು,ಸಾವಿರಾರು ಲೋಡ್ ಮಣ್ಣನ್ನು ಸಾಗಾಟಮಾಡಿ 4 ಎಕರೆ ಪ್ರದೇಶದ ನಿವೇಶನದ ಲೇಔಟ್ ನ್ನು ಸಮತಟ್ಟುಮಾಡಲಾಗಿದೆ.ಈ ಬಗ್ಗೆ ವರದಿ ಪ್ರಕಟಿಸ ಲಾಗಿತ್ತು ವರದಿಯನ್ವಯ ಸಂಬಂಧಿಸಿದ ಇಲಾಖೆ ಅಧಿ ಕಾರಿಗಳು ಭೇಟಿ ನೀಡಿ ಪರಿಶೀಲನಾ ವರದಿ ತಯಾರಿಸಿದರು.ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅಧಿಕಾರಿ ಚೈತ್ರಾ ಅವರು ಮಾತನಾಡಿ,ನಮಗೆ ಎಷ್ಟು ಪ್ರಮಾಣದ ಮಣ್ಣು ನಿವೇಶನದಲ್ಲಿ ಬಳಕೆಮಾಡಲಾಗುವುದು ಎಂಬುದು ನಿಖರ ಸಾಕ್ಷಿ ಆಧಾರಿತ ಮಾಹಿತಿ ದೊರೆತಿಲ್ಲ.ಮೂಕ ಸಾಕ್ಷಿಯ ಆಧಾರದ ಮೇಲೆ ಅಂದಾಜು ಪ್ರಮಾಣದ ಮಣ್ಣಿನ ವರದಿ ತಯಾರಿಸಲಾಗಿದೆ. ಕೂಡಲೇ ರಾಯಲ್ಟಿ (ರಾಜ ಧನ) ದಂಡ ವಿಧಿಸಲು ಕ್ರಮಕೈ ಗೊಳ್ಳಲಾಗು ವುದು” ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಕಸಬಾ ಹೋಬಳಿ ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ಧನಂಜಯ್,ಗ್ರಾಮಲೆಕ್ಕಾಧಿಕಾರಿ ಪ್ರದೀಪ್ ಕುಮಾರ್ ಸೇರಿದಂತೆ ಇದ್ದರು.
