ಮಟ್ಕಾ ನಡೆಸಲು ಲಂಚ ಪಡೆಯುವಾಗ ಎಎಸ್ಐ ಲೋಕಾ ಬಲೆಗೆ

ಸಂಜೆವಾಣಿ ವಾರ್ತೆ
ಶಿವಮೊಗ್ಗ, ಏ. ೬: ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯ ಎಎಸ್ಐ ರೆಹಮಾನ್ ಇಂದು ಲೋಕಾಯುಕ್ತ ದಾಳಿಯಲ್ಲಿ ಸೆರೆಯಾಗಿದ್ದಾರೆ.ಮಟ್ಕಾ ದಂಧೆ ನಡೆಸಲು ಹಣ ಪಡೆಯುವಾಗ ಲೋಕಾದಾಳಿಯಲ್ಲಿ ಸಿಕ್ಕಿಬಿದ್ದಿದ್ದಾರೆ.ಸೈಬರ್ ಕ್ರೈಂ ಪೊಲೀಸ್ ಠಾಣೆಯ ಎಎಸ್ ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ರೆಹಮಾನ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಆರ್ ಎಂ ಎಲ್ ನಗರದಲ್ಲಿರುವ ಅವರ ಮನೆಯ ಬಳಿಯೇ ರಫಿಕ್ ಎಂಬುವರಿಂದ 1 ಲಕ್ಷ ರೂ ಲಂಚ ಪಡೆಯುತ್ತಿರುವಾಗ ರೆಡ್ ಹ್ಯಾಂಡ್ ಆಗಿ ಎಎಸ್ ಐ ರೆಹಮಾನ್ ಬಿಕ್ಕಿ ಬಿದ್ದಿದ್ದಾರೆ.ಲೋಕಾಯುಕ್ತ ಎಸ್ ಪಿ ವಾಸುದೇವ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಮಟ್ಕಾ ದಂಧೆ ನಡೆಸುವವರಿಂದ ರೂ.1,20,000 ಹಣಕ್ಕೆ ರೆಹಮಾನ್ ಬೇಡಿಕೆ ಇಟ್ಟಿದ್ದು ಇಂದು ಒಂದು ಲಕ್ಷ ರೂ ಹಣಪಡೆಯುವ ವೇಳೆ ದಾಳಿ ನಡೆದಿದೆ.