ಎಡ-ಬಲ ಒಂದಾಗದಿದ್ದರೆ ಅಪಾಯ ತಪ್ಪಿದ್ದಲ್ಲ
ಸಂಜೆವಾಣಿ ನ್ಯೂಸ್
ಮೈಸೂರು: ಏ.06:- ಪ್ರಸ್ತುತ ದೇಶದಲ್ಲಿ ಎಡ ಹಾಗೂ ಬಲ ಸಮುದಾಯಗಳು ಒಂದಾಗದಿದ್ದರೆ ಅಪಾಯ ತಪ್ಪಿದ್ದಲ್ಲ. ಇದನ್ನು ತಳ ಸಮುದಾಯ ಅರ್ಥಮಾಡಿಕೊಳ್ಳಬೇಕೆಂದು ಪತ್ರಕರ್ತ ಕೆ.ದೀಪಕ್ ಹೇಳಿದರು.
ಮೈಸೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ನಡೆದ ಬಾಬು ಜಗಜೀವನ ರಾಮ್ ಅವರ ಜಯಂತಿ ಅಂಗವಾಗಿ ಬಾಬು ಜಗಜೀವನ ರಾಮ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು. ದೇಶದಲ್ಲಿ ಎಡ ಹಾಗೂ ಬಲ ಸಮುದಾಯ ಒಗ್ಗಾಟದರೆ ದೇಶದಲ್ಲಿ ನಮ್ಮ ಶಕ್ತಿ ಮತ್ತಷ್ಟು ಹೆಚ್ಚಾಗಲಿದೆ. ಇಲ್ಲದಿದ್ದರೆ ಅನ್ಯ ಸಮುದಾಯಗಳಿಂದ ತುಳಿತಕ್ಕೆ ಒಳಗಾಗುವುದು ಸಹಜವಾಗಲಿದ್ದು, ಇದನ್ನು ಅರ್ಥ ಮಾಡಿಕೊಳ್ಳಬೇಕು. ಪಾರ್ಲಿಮೆಂಟ್‍ಗೂ ಮೀಸಲಾತಿ ಪರಿಚಯಿಸದವರು ಮೈಸೂರು ಅರಸರು ಅವರ ಕುಡಿ ಸಂವಿಧಾನ ವಿರೋಧಿಗಳ ಪಕ್ಷದಲ್ಲಿರುವುದು ಬೇಸರದ ಸಂಗತಿಯಾಗಿದೆ. ಅರಸರು ಅರಮನೆಯಲ್ಲಿರ ಬೇಕು. ಸಾಮಾನ್ಯ ಪ್ರಜೆಯಾದ ಎಂ.ಲಕ್ಷ ್ಮಣ್ ಪಾರ್ಲಿಮೆಂಟ್‍ನಲ್ಲಿದ್ದರೆ ನಮ್ಮೆಲ್ಲರ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಜನರಿಗೆ ಚುನಾವಣೆಯು ಸುಳ್ಳು, ಜಾತಿ, ಧರ್ಮ, ಹಣ ಇವುಗಳು ಮಾನದಂಡಗಳಾಗಿವೆ. ದೇಶ, ಸಂಸ್ಕೃತಿ, ಸಂವಿಧಾನ ಇವುಗಳು ಮಾನದಂಡಗಳಾಗಿಲ್ಲ. ಸಂವಿಧಾನದ ಹೆಸರಿನಲ್ಲಿ, ಪ್ರಜಾಪ್ರಭುತ್ವದ ಹೆಸರಿನಲ್ಲಿ ಚುನಾವಣೆಯನ್ನು ಗೆಲ್ಲಲು ಸಾಧ್ಯವಿಲ್ಲ ಚುನಾವಣೆಯನ್ನು ಚುನಾವಣೆಯಾಗಿಯೇ ಗೆಲ್ಲಬೇಕು. ಸಂವಿಧಾನವನ್ನು ಉಳಿಸುವ ವಿಚಾರದಲ್ಲಿ ನಾವು ಎಲ್ಲಿ ವಿಫಲರಾಗಿದ್ದೇವೆ ಎಂಬುದನ್ನು ಅರಿತುಕೊಳ್ಳಬೇಕು. ಸಂವಿಧಾನದ ವಿರೋಧಿಗಳು 20-30 ವರ್ಷದ ಹಿಂದೆ ದುರ್ಬಲರಾಗಿದ್ದರು. ಆದರೆ ಪ್ರಸ್ತುತದಲ್ಲಿ ಸಂವಿಧಾನ ವಿರೋಧಿಗಳು ಪ್ರಬಲ ಮತ್ತು ಬಲಾಢ್ಯರಾಗಿದ್ದಾರೆ. ಹಾಗಾಗಿ ಇವುಗಳನ್ನು ಅರಿತುಕೊಂಡು ಸಂವಿಧಾನ ಉಳಿಸುವಂತಹ ಕೆಲಸವನ್ನು ನಾವೆಲ್ಲರೂ ಮಾಡಬೇಕು ಎಂದು ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ ್ಮಣ್ ಮಾತನಾಡಿ, ಹಿಂದುಳಿದ ಸಮುದಾಯ ವಾಸ್ತವ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಪ್ರಸ್ತುತ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯದಲ್ಲಿದೆ ಎಂದು ನ್ಯೂಯಾರ್ಕನ ಪತ್ರಿಕೆಯೊಂದು ವರದಿ ಮಾಡಿದ್ದು, ಅದರ ವಿರುದ್ಧ ಬಿಜೆಪಿ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಧಾವೆ ಹೂಡಿದ್ದಾರೆ. ಹೀಗಾಗಿ ದೇಶದಲ್ಲಿ ಸಂವಿಧಾನದ ಆಶಯಗಳ ಮೇಲೆ ನಿರಂತರವಾಗಿ ದಾಳಿ ನಡೆಸುವ ಪ್ರಕ್ರಿಯೆಗಳು ನಡೆಯುತ್ತಲೇ ಇದ್ದು, ಇದನ್ನು ಹೋಗಲಾಡಿಸಲು ಕಾಂಗ್ರೆಸ್ ಅವಕಾಶ ಕೊಡಿ ಎಂದು ಮನವಿ ಮಾಡಿದರು.
ಕಾರ್ಯಕ್ರದಲ್ಲಿ ವಿಧಾನಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಮಾಜಿ ಮೇಯರ್ ನಾರಾಯಣ್, ಗ್ರಾಮಾಂತರ ಅಧ್ಯಕ್ಷರಾದ ಡಾ.ಬಿ.ಜೆ.ವಿಜಯ್‍ಕುಮಾರ್, ಮಾಜಿ ಜಿ.ಪಂ.ಅಧ್ಯಕ್ಷ ಬಿ.ಎಂ.ರಾಮು, ಡಿಸಿಸಿ ಪ್ರದಾನ ಕಾರ್ಯದರ್ಶಿಗಳಾದ ಎಂ.ಶಿವಣ್ಣ, ಈಶ್ವರ್ ಚಕ್ಕಡಿ, ಶಿವಪ್ರಸಾದ್ ಸೇರಿ ಇನ್ನಿತರರು ಉಪಸ್ಥಿತರಿದ್ದರು.