ಕಮಲಾಪುರ: ಮತದಾರರ ಜಾಗೃತಿ ಜಾಥಾ
ಕಲಬುರಗಿ,ಏ. 6: ಜಿಲ್ಲೆಯ ಕಮಲಾಪುರ ಪಟ್ಟಣದಲ್ಲಿ ತಾಲೂಕ ಸ್ವೀಪ್ ಸಮಿತಿ ವತಿಯಿಂದ ಮತದಾರರ ಜಾಗೃತಿ ಜಾಥಾ ಅಭಿಯಾನ ಹಮ್ಮಿಕೊಳ್ಳಲಾಯಿತು.
ತಾಲೂಕಿನ ತಹಶೀಲ್ದಾರ ಮಹ್ಮದ ಮೊಹಷಿನ ಮತ್ತು ತಾಪಂಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
್ತ ಕಾಲೇಜು ವಿದ್ಯಾರ್ಥಿಗಳು ಮತ್ತು ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಲೂಕ ಪಂಚಾಯತಿಯ ಸಿಬ್ಬಂದಿ ವರ್ಗದವರು ಗ್ರಾಮ ಪಂಚಾಯಿತಿಯ ಸಿಬ್ಬಂದಿ ವರ್ಗದವರು .ತಹಶೀಲ್ದಾರ ಕಾರ್ಯಾಲಯ, ಇತರ ಇಲಾಖೆಯ ಸಿಬ್ಬಂದಿಗಳೆಲ್ಲರೂ ಸೇರಿ ಕಮಲಾಪುರ ಪಟ್ಟಣದ ಜನನಿಬಿಡ ಪ್ರದೇಶಗಳಲ್ಲಿ ಜಾಥ ಮಾಡಲಾಯಿತು. ತಾಲೂಕ ಪಂಚಾಯತ ಕಾರ್ಯಲಯದವರೆಗೆ ಕಡ್ಡಾಯ ಮತದಾನ ಅದರ ಮಹತ್ವ ಕುರಿತು ಘೋಷಣೆ, ಹಾಗೂ ಸ್ಲೋಗನ್ ಗಳನ್ನು ಪ್ರದರ್ಶಿಸಲಾಯಿತು. ನಂತರ ತಾಲೂಕ ಪಂಚಾಯತ ಕಾರ್ಯಾಲಯದ ಹತ್ತಿರ ಮತದಾನದ ಕುರಿತು ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು.