ಡಾ. ಬಾಬೂಜಿ ಸಾಮಾಜಿಕ ಪರಿವರ್ತನೆಯ ರೂವಾರಿಗಳು : ತಹಶೀಲ್ದಾರ ವಾಣಿ ಯು.
ಅಥಣಿ :ಏ.6: ಹಸಿರು ಕ್ರಾಂತಿಯ ಹರಿಕಾರ, ಸಾಮಾಜಿಕ ಪರಿವರ್ತನೆಯ ರೂವಾರಿ, ದೇಶದ ಉಪ ಪ್ರಧಾನಿಯಾಗಿ ವಿವಿಧ ಕ್ಷೇತ್ರಗಳಲ್ಲಿ ಅನೇಕ ಅಭಿವೃದ್ಧಿಯ ಯೋಜನೆಗಳನ್ನು ಜಾರಿಗೆ ತಂದಿರುವ ಡಾ.ಬಾಬು ಜಗಜೀವನ್ ರಾಮ ಅವರು ದೇಶಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ ಎಂದು ತಹಸಿಲ್ದಾರ ವಾಣಿ. ಯು ಹೇಳಿದರು.
ಅವರು ಶುಕ್ರವಾರ ತಾಲೂಕ ಆಡಳಿತ, ತಾಲೂಕ ಪಂಚಾಯತ, ಪುರಸಭೆ,ಸಮಾಜ ಕಲ್ಯಾಣ ಇಲಾಖೆ ಹಾಗೂ ಹರಳಯ್ಯ ಸಮಾಜ ವತಿಯಿಂದ ಲೀಡ್ಕರ್ ಕಾಲೋನಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಹಸಿರು ಕ್ರಾಂತಿಯ ಹರಿಕಾರ ಸಾಮಾಜಿಕ ಪರಿವರ್ತನೆಯ ರೂವಾರಿ ಡಾ. ಬಾಬು ಜಗಜೀವನ್ ರಾಮ ಅವರ 117ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಂದಿನ ಸಮಾಜದಲ್ಲಿನ ಅಸ್ಪೃಶ್ಯತೆಯನ್ನು ಹೋಗಲಾಡಿಸುವಲ್ಲಿ ಡಾ ಬಾಬು ಜಗಜೀವನ್ ರಾಮ ಅವರ ಕೊಡುಗೆ ಅಪಾರವಾಗಿದೆ. ಜಾತಿ ವ್ಯವಸ್ಥೆಯನ್ನು ತೊಡೆದುಹಾಕಿ ಎಲ್ಲರಲ್ಲೂ ಸಮಾನತೆ ತರುವುದು ಅವರ ಮುಖ್ಯ ಉದ್ದೇಶವಾಗಿತ್ತು. ದೇಶದಲ್ಲಿ ಸಮರ್ಪಕವಾಗಿ ಎಲ್ಲರಿಗೂ ಆಹಾರ ದೊರೆಯದೇ ಇದ್ದಾಗ ಕೇಂದ್ರದಲ್ಲಿ ಕೃಷಿ ಸಚಿವರಾಗಿ ಕೃಷಿಯಲ್ಲಿ ಗಣನೀಯ ಬದಲಾವಣೆ ತಂದರು. ಹಸಿರು ಕ್ರಾಂತಿ ರೂಪಿಸಿ ರೈತರನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿಸಿದರು. ಆಹಾರ ಉತ್ಪಾದನೆ ಹೆಚ್ಚಿಸಿದರು ಎಂದು ಹೇಳಿದರು.
ಜಾದವಜಿ ಶಿಕ್ಷಣ ಸಂಸ್ಥೆಯ ಶಿಕ್ಷಕ ಎಸ್ ಎನ್ ಕಾಂಬಳೆ ಉಪನ್ಯಾಸ ನೀಡಿದರು.
ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯ ಹಿನ್ನೆಲೆಯಲ್ಲಿ ಬಾಬೂಜಿ ಅವರ ಜಯಂತಿ ಸಂಭ್ರಮಾಚರಣೆಯನ್ನು ತಾಲೂಕ ಆಡಳಿತದಿಂದ ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಯುವ ಮುಖಂಡ ಚಿದಾನಂದ ಸವದಿ, ಪುರಸಭಾ ಸದಸ್ಯರಾದ ರಾವಸಾಬ ಐಹೊಳೆ, ವಿಲೀನರಾಜ್ ಯಲಮಲ್ಲೆ, ಅನಿಲ ಸೌದಗರ, ದಿಲೀಪ ಕಾಂಬಳೆ, ಪಾಂಡುರಂಗ ಐಹೊಳೆ, ಸದಾಶಿವ ಸಿಕ್ರೆ, ನಾರಾಯಣ ಹೊನಕಾಂಡಿ, ಶಿವಾನಂದ ಸೌದಾಗರ, ಶಶಿ ಸಾಳ್ವೆ, ರವಿ ಕಾಂಬಳೆ, ಸಮಾಜ ಕಲ್ಯಾಣ ಅಧಿಕಾರಿ ಬಸವರಾಜ ಯಾದವಾಡ, ಅಭಿಯಂತರ ಶ್ರೀಕಾಂತ ಮಾಕಾಣಿ, ತಾ. ಪಂ ಅಧಿಕಾರಿ ಶಿವಾನಂದ ಕಲ್ಲಾಪುರ, ಉಪ ನೋಂದಣಿ ಅಧಿಕಾರಿ ಕಲಾವತಿ ಮಲವಾಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಎಸ್ ಬಿ ಹೊಸಮನಿ, ತಾಲೂಕ ವೈದ್ಯಾಧಿಕಾರಿ ಡಾ.ಬಸನಗೌಡ ಕಾಗೆ, ಅಭಿಯಂತರ ವೀರಣ್ಣ ವಾಲಿ, ದೈಹಿಕ ಶಿಕ್ಷಣ ಅಧಿಕಾರಿ ಎಂ ಆರ್ ಹಲಸಂಗಿ, ಪಿಎ??? ಪ್ರೇಮಾ ಹುಚ್ಚಬಾಳೆ ಸೇರಿದಂತೆ ತಾಲೂಕಾ ಮಟ್ಟದ ಅಧಿಕಾರಿಗಳು ಹಾಗೂ ಹರಳಯ್ಯ ಸಮಾಜದ ಮುಖಂಡರು ಉಪಸ್ಥಿತರಿದ್ದರು. ಬಸವರಾಜು ಯಾದವಾಡ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗಮೇಶ ಹಚ್ಚಡದ ಕಾರ್ಯಕ್ರಮ ನಿರೂಪಿಸಿದರು. ಓ. ಐ ಅರಟಾಳ ವಂದಿಸಿದರು.