ಜಗದ್ಗುರು ತೋಂಟದಾರ್ಯ ಶಾಲೆಯಲ್ಲಿ ಪಾಲಕರ ಸಭೆ
ಜೇವರಗಿ,ಏ 6: ಪಟ್ಟಣದ ಜಗದ್ಗುರು ತೋಂಟದಾರ್ಯ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಪಾಲಕರ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಶಿವನಗೌಡ ಪಾಟೀಲ ಹಂಗರಗಿ ಪಾಲಕರ ಸಲಹೆಗಳನ್ನು ಸ್ವೀಕರಿಸಿ ಮಾತನಾಡಿ ಮಕ್ಕಳು ಬೇಸಿಗೆಯಲ್ಲಿ ಕಾಲಹರಣ ಮಾಡದೆ ನಮ್ಮ ಶಾಲೆಯಲ್ಲಿ ಮಕ್ಕಳಿಗೆ ವಿಶೇಷವಾದ ಆಟವಾಡುತ್ತ ಕಲಿ ಬೇಸಿಗೆ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ ಇದರ ಸದುಪಯೋಗವನ್ನು ಜೇವರ್ಗಿ ನಗರ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು. ಕಾರ್ಯದರ್ಶಿ ವಿಜಯಕುಮಾರ್ ಮಾಲಗಿತ್ತಿ ಮಾತನಾಡಿ ಶಾಲೆಯ ಮುಂದಿನ ಅಭಿವೃದ್ಧಿ ಯೋಜನೆಗಳ ಕುರಿತು ವಿವರಿಸಿದರು. ಅನಿಲ್ ಸಕ್ರಿ, ಶಿವಸಾಯಿ ಮಮದಾಪುರ್, ಕವಿತಾ, ಲಕ್ಷ್ಮಿ , ಸುಷ್ಮಾ, ದೇವಿಂದ್ರ ವಿಶ್ವಕರ್ಮ ಸೇರಿ ಮುಂತಾದವರು ಹಾಜರಿದ್ದರು