ಉತ್ತಮ ಶಿಕ್ಷಣಕ್ಕಾಗಿ ಪ್ರಯತ್ನ ಮಾಡೋಣ:ಕಾಶಪ್ಪ
ಸೈದಾಪುರ:ಏ.6:ಕ್ರಾಂತಿಕಾರಿ ಯೋಜನೆಗಳ ಮೂಲಕ ಸ್ವಾಲಂಬನೆ ಬದುಕಿಗೆ ಮಹತ್ವ ನೀಡಿದ ಡಾ.ಬಾಬು ಜಗಜೀವನರಾಮ ಅವರ ವಿಚಾರದಾರೆಗಳು ನಮ್ಮಲ್ಲಿ ಕಂಡು ಕೊಳ್ಳುವಂತಾಗಲು ಉತ್ತಮ ಶಿಕ್ಷಣಕ್ಕಾಗಿ ಪ್ರಯತ್ನ ಮಾಡೋಣ ಎಂದು ಮಾದಿಗ ದಂಡೋರ ಹೊರಾಟ ಸಮಿತಿ ಜಿಲ್ಲಾಧ್ಯಕ್ಷ ಕಾಶಪ್ಪ ಹೆಗ್ಗಣಗೇರಾ ಅಭಿಪ್ರಾಯಟ್ಟರು.
ಪಟ್ಟಣದಲ್ಲಿ ಆಯೋಜಿಸಲಾದ ಡಾ.ಬಾಬು ಜಗಜೀವನರಾಂ ರವರ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಅದ್ದೂರಿ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದರು. ಉತ್ತಮ ಗುಣಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಒಳ್ಳೆಯ ನಾಗರಿಕರು ನಾವಾಗುತ್ತವೆ. ಈ ದಿಸೆಯಲ್ಲಿ ಡಾ.ಜಗಜೀವನರಾಮ ಅವರ ತತ್ವ ಸಂದೇಶಗಳನ್ನು ಜೀವನದಲ್ಲಿ ಅಳವಸಿಕೊಂಡು ಆ ಮೂಲಕ ಅಭಿವೃದ್ದಿ ಸಾಧಿಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗುರುಮಠಕಲ್ ತಾಲೂಕಾ ಅಧ್ಯಕ್ಷ ರಾಜು ಮೇತ್ರೆ ಕಡೇಚೂರು, ವಲಯ ಅಧ್ಯಕ್ಷ ಅರ್ಜುನ್ ಚಿಗನೂರು, ಮಲ್ಲಪ್ಪ ಕೂಡ್ಲೂರು, ವಾಬಣ್ಣ ಕಡೇಚೂರು, ಸಾಬಣ್ಣ ಸೈದಾಪುರ, ಅನಿಲ್, ಮಹದೇವಪ್ಪ, ಮಂಜುನಾಥ್, ಶಾಂತಪ್ಪ, ದೇವು ಲಿಂಗೇರಿ, ಮಲ್ಲು ಬೆಳಗೇರಿ, ಶರಣಪ್ಪ ವಡಿಗೇರಿ, ವಿಲ್ಸನ್, ಬಸರಾಜ ಬಾಡಿಯಾಳ್, ಅಶೋಕ್ ಅಜಾಲಾಪುರ, ಕುಮಾರ ತುಮಕೂರ, ಕಿರಣ ವಡಗೇರಾ ಸೇರಿದಂತೆ ಇತರರಿದ್ದರು.