ಸಿಯುಕೆಯಲ್ಲಿ ಡಾ. ಬಾಬು ಜಗಜೀವನರಾಮ ಜಯಂತಿ ಆಚರಣೆ
ಕಲಬುರಗಿ:ಏ.05:“ಡಾ. ಬಾಬು ಜಗಜೀವನರಾಮ ಅವರು ಸರಕಾರದ ಎಲ್ಲಾ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ದೇಶದ ಏಳಿಗೆಗೆ ಶ್ರಮಿಸಿದ್ದಾರೆ” ಎಂದು ನಿವೃತ್ತ ಐಆರ್ ಎಸ್ ಅಧೀಕಾರಿ ಶ್ರೀ ಎಚ್ ಆರ್ ಬೀಮಾಶಂಕರ ಅವರು ಹೇಳಿದರು.
ಅವರು ಇಂದು ಸಿಯುಕೆಯಲ್ಲಿ ಡಾ. ಬಾಬು ಜಗಜೀವನರಾಮ ಅವರ ಜಯಂತಿ ಆಚರಣೆಯ ಸಂದರ್ಭದಲ್ಲಿ ಮುಖ್ಯ ಅಥಿತಿಗಳಾಗಿ ಮಾತನಾಡಿದರು. ಅವರು ಮುಂದುವರೆದು ಮಾತನಾಡಿ “ಸರಕಾರಗಳು ಪ್ರತಿ ವರ್ಷ ಎಸ್ ಸಿ ಪಿ – ಟಿ ಎಸ್ ಪಿ ಯೋಜನೆಗಳ ಅಡಿಯಲ್ಲಿ ಸುಮಾರು 3 ಲಕ್ಷ ಕೋಟಿಗಳಷ್ಷಟು ರೂಪಾಯಿಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಏಳಿಗೆಗಾಗಿ ನೀಡುತ್ತವೆ. ತಾವುಗಳು ಇದರ ಸದುಪಯೋಗ ಪಡೆದುಕೊಂಡು ತಮ್ಮ ಭವಿಷ್ಯ ನಿರ್ಮಾಣ ಮಾಡಿಕೊಳ್ಳಬೇಕು. ದುರದೃಷ್ಟವಶಾತ ಅನೇಕ ವಿದ್ಯಾವಂತರಿಗೆ ಈ ಯೋಜನೆಗಳ ಸರಿಯಾದ ತೀಳುವಳಿಕೆಯಿಲ್ಲ. ಆದ್ದರಿಂದ ಸರಕಾರದ ಈ ಯೋಜನೆಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಸರಿಯಾಗಿ ತಲುಪುತ್ತಿಲ್ಲ. ಅದಕ್ಕಾಗಿ ತಾವುಗಳ ಇವುಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ ಮತ್ತು ಇತರರಿಗೆ ತಿಳಿಸುವ ಮೂಲಕ ಸ್ವಾವಲಂಬಿಗಳಾಗಬೇಕು” ಎಂದು ತಿಳಿಸಿದರು.
ಮಾನ್ಯ ಕುಲಪತಿಗಳಾದ ಪೆÇ್ರ. ಬಟ್ಟು ಸತ್ಯನಾರಾಯಣ ಅವರು ಕಾರ್ಯಕ್ರಮದ ಅ್ಯಯಕ್ಷತೆಯನ್ನು ವಹಿಸಿ ಮಾತನಾಡಿ “ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಸರಕಾರದ ಎಲ್ಲಾ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ರಾಷ್ಟ್ರ ನೀರ್ಮಾಣದ ಹಾದಿಯಲ್ಲಿ ಡಾ. ಬಾಬು ಜಗಜೀವನರಾಮ ಅವರ ಹಾದಿಯಲ್ಲಿ ನಡೆಯಬೇಕೆಂದು” ಹೇಳಿದರು.
ಈ ಸಂದರ್ಭದಲ್ಲಿ ಕುಲಸಚಿವರಾದ ಪೆÇ್ರ. ಆರ್ ಆರ್ ಬಿರಾದಾರ, ಪೆÇ್ರ. ಬಸವರಾಜ ಪಿ ಡೋಣೂರ, ಪೆÇ್ರ. ಪಿ ರಾಗವಯ್ಯ, ಪೆÇ್ರ. ಗಿ ಆರ್ ಅಂಗಡಿ, ಪೆÇ್ರ. ಬಿ ಬಿ ಪೂಜಾರ ಅವರು ಉಪಸ್ಥಿತರಿದ್ದರು. ಡಾ. ಡಿ ಗೌತಮ ಅವರು ಎಲ್ಲರನ್ನೂ ಸ್ವಾಗತಿಸಿದರು, ಡಾ. ನಿತಿನ ಬಿ ಅವರು ಕಾರ್ಯಕ್ರಮ ನೀರೂಪಿಸಿದರು, ಕಾರ್ಯಕ್ರಮದ ಸಂಯೋಜಕರಾದ ಡಾ. ಸಂಜೀವರಾಯಪ್ಪ ಎನ್ ಸಿ ಅವರು ವಂದಿಸಿದರು.