ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿ
ಕಲಬುರಗಿ:ಏ.05:ಲೋಕಸಭೆ ಚುನಾವಣೆ-2024ರ ಹಿನ್ನೆಲೆಯಲ್ಲಿ ಸ್ವೀಪ್ ಸಮಿತಿಯಿಂದ 2019ರ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತದಾನವಾದ 45-ಉತ್ತರ ಗುಲಬರ್ಗಾ ವಿಧಾನಸಭಾ ಮತಕ್ಷೇತ್ರದ ಭಾಗ ಸಂಖ್ಯೆ-190 ಬ್ರಹ್ಮಪೂರ ಬಡಾವಣೆಯ ಧನಗರಗಲ್ಲಿಯಲ್ಲಿ ಗುರುವಾರ ಎಲ್ಲರಿಗೂ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸಲಾಯಿತು.
ಮತದಾನ ದಿನದಂದು ಮತಗಟ್ಟೆಗೆ ತೆರಳಿ ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಬೇಕು. ಮತದಾನದಿಂದ ಸದೃಢ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ತಾವು ಮತ ಚಲಾಯಿಸುವುದರೊಂದಿಗೆ ತಮ್ಮ ಕುಟುಂಬದ ಸದಸ್ಯರು ಹಾಗೂ ನೆರೆಹೊರೆಯವರನ್ನು ಮತ ಚಲಾಯಿಸಲು ಪ್ರೇರೇಪಿಸಬೇಕು ಎಂದು ಅರಿವು ಮೂಡಿಸಲಾಯಿತು.
ಕಲಬುರಗಿ ಮಹಾನಗರಪಾಲಿಕೆ ಸ್ವೀಪ್ ನೋಡಲ್ ಅಧಿಕಾರಿ ಅಬ್ದುಲ್ ರಹೆಮಾನ್, ಕಂದಾಯ ಅಧಿಕಾರಿ ಸಂತೋಷ, ಸೆಕ್ಟರ್ ಅಧಿಕಾರಿ ಅಬ್ದುಲ್ ಸಮದ್, ಬಿ.ಎಲ್.ಓ. ಗಳಾದ ಶಾಂತು, ಮಲ್ಲಮ್ಮ, ಆರೋಗ್ಯ ನಿರೀಕ್ಷಕರಾದ ಶರಣು ತೆಂಗಳಿ, ಕಲ್ಲಯ್ಯ ಸ್ವಾಮಿ ಹಾಗೂ ಕಂದಾಯ ನಿರೀಕ್ಷಕರಾದ ಜಗದೇವ ಸ್ವಾಮಿ, ರಾಘವೇಂದ್ರ ಕುಲಕರ್ಣಿ, ಮಹೇಶ ಜಗದಾಳ, ಶಾಲಾ ಶಿಕ್ಷಕರು, ಪಾಲಿಕೆ ಸಿಬ್ಬಂದಿ, ಅಧಿಕಾರಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.