ನೇತ್ರದಾನ ಮಾಡಿ ಅಂಧರ ಬಾಳಿಗೆ ಬೆಳಕಾಗಿ:ವಳಕೇರಿ
ಕಲಬುರಗಿ:ಸೆ.19: ನೇತ್ರದಾನ ಮಾಹಾದಾನ, ಪ್ರತಿಯೊಬ್ಬರೂ ತಮ್ಮ ನೇತ್ರದಾನ ಮಾಡುವುದರೊಂದಿಗೆ ಅಂಧರ ಬಾಳಿಗೆ ಬೆಳಕಾಗಬೇಕು ಎಂದು ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೇ ಅನಿತಾ ಪವನಕುಮಾರ ವಳಕೇರಿ ಹೇಳಿದರು.
ಅವರು ಜೇವರ್ಗಿ ತಾಲೂಕಿನ ಮದರಿ ಗ್ರಾಮದಲ್ಲಿ ಶ್ರೀ ವೆಂಕಟಗಿರಿ ಗ್ರಾಮೀಣಾಭಿವೃದ್ಧಿ ಸೌಹಾರ್ದ ಸಹಕಾರ ನಿಯಮಿತ ನಂದಿಕೂರ್ ಹಾಗೂ ಅನುಗ್ರಹ ಕಣ್ಣಿನ ಆಸ್ಪತ್ರೆಯ ಮತ್ತು ಸಂಝಿಸ್ ಆಸ್ಪತ್ರೆ ಕಲಬುರ್ಗಿ ಸಹಯೋಗದಲ್ಲಿ ಆಯೋಜಿಸಿದ ನೇತ್ರ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದ ಅವರು, ನಾವು ಸತ್ತ ಮೇಲೆ ನಮ್ಮ ಕಣ್ಣುಗಳು ಮಣ್ಣು ಪಾಲು ಮಾಡುವುದಕ್ಕಿಂತ ಸಾಯುವುದಕ್ಕಿಂತ ಮುಂಚೆ ನೇತ್ರದಾನ ಮಾಡುವುದಾಗಿ ಆಯಾ ಆಸ್ಪತ್ರೆಗಳಲ್ಲಿ ಹೆಸರುಗಳನ್ನು ನೊಂದಾಯಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸುಮಾರು 90ಕ್ಕಿಂತಲೂ ಹೆಚ್ಚು ಜನರು ತಮ್ಮ ನೇತ್ರ ತಪಾಷಣೆ ಮಾಡಿಸಿಕೊಂಡಿದ್ದು, ಸುಮಾರು 26 ಜನರಿಗೆ ನೇತ್ರ ಶಸ್ತ್ರಚಿಕಿತ್ಸೆ 20ಸೆಪ್ಟೆಂಬರ್ ಮಾಡುವುದಾಗಿ ವೈದ್ಯರು ಭರವಸೆ ನೀಡಿದರು.
ಈ ಶಿಬಿರದಲ್ಲಿ ಜೇವರ್ಗಿ ಸರ್ಕಾರಿ ಆಸ್ಪತ್ರೆಯ ವೈದ್ಯರು ಹಾಗೂ ಅನುಗ್ರಹ ಕಣ್ಣಿನ ಆಸ್ಪತ್ರೆಯ ವೈದ್ಯರು ಉಪಸ್ಥಿತರಿದ್ದರು.
ಇದೇ ಕಾರ್ಯಕ್ರಮದಲ್ಲಿ ಸಾಮಾಜಿಕ ಚಿಂತಕ ಪವನಕುಮಾರ ವಳಕೇರಿ ಅವರು ಮಾತನಾಡಿ, ಶಿಬಿರದ ಇನ್ನೊಂದು ಭಾಗದಲ್ಲಿ ಮುಂದಿನ ತಿಂಗಳ ಮೊದಲನೆ ವಾರದಲ್ಲಿ ಮತ್ತೆ ನೇತ್ರ ತಪಾಸಣಾ ಶಿಬಿರವನ್ನು ಆಯೋಜಿಸಲಾಗುವುದು ಎಂದು ಹೇಳಿದರು.
ಪ್ರಮೋದಕುಮಾರ್ CHO, ಸಂಪಾಟಕುಮಾರ, ಕುಮಾರ ಬಿರೆದರ, ಪ್ರಭು ಗಡಗಿ PDO ಮದರಿ, ಅಂಗನವಾಡಿ ಆಶಾ ಕಾರ್ಯಕರ್ತರು ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ಉಪಸ್ಥಿತರಿದ್ದರು.