ನರೇಗಾ ಕಾಮಗಾರಿ ಸ್ಥಳದಲ್ಲಿ ನೀರು, ನೆರಳು ಮತ್ತು ಆರೋಗ್ಯ ಕಿಟ್ ವ್ಯವಸ್ಥೆ ಕಲ್ಪಿಸಿ:ಚಿದಂಬರ ಪಾಟೀಲ
ಕಲಬುರಗಿ :ಏ.5: ದಿನದಿಂದ ದಿನಕ್ಕೆ ಬೇಸಿಗೆ ಬಿಸಿಲಿನ ತಾಪ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಗ್ರಾಮ ಪಂಚಾಯತಿಗಳು ಕೂಲಿಕಾರರ ಆರೋಗ್ಯದ ಹಿತದೃಷ್ಟಿಯಿಂದ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೈಗೆತ್ತಿಕೊಂಡರುವ ಕಾಮಗಾರಿ ಸ್ಥಳಗಳಲ್ಲಿ ಬೇಸಿಕ್ ಸೌಲಭ್ಯಗಳು ಕಲ್ಲಿಸಿಕೊಡಬೇಕೆಂಬ ಸರ್ಕಾರದ ನಿರ್ದೇಶನದಂತೆ.
ಜೇವರ್ಗಿ ತಾಲೂಕ ಐಇಸಿ ಸಂಯೋಜಕ ಚಿದಂಬರ ಪಾಟೀಲ ಅವರು ಶುಕ್ರವಾರ ತಾಲೂಕಿನ ಹಿಪ್ಪರಗಾ ಎಸ್.ಎನ್ ಗ್ರಾಮ ಪಂಚಾಯತಿಯಲ್ಲಿ ನರೇಗಾದಡಿ ಕೈಗೆತ್ತಿಕೊಂಡಿರುವ ಕ್ಯಾನಲ್ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಗ್ರಾಮ ಪಂಚಾಯತಿ ಕೂಲಿಕಾರರಿಗೆ ಕುಡಿಯುವ ನೀರಿನ ವ್ಯವಸ್ಥೆ, ವಿಶ್ರಾಂತಿಗಾಗಿ ನೆರಳಿನ (ಟೆಂಟ್) ವ್ಯವಸ್ಥೆ, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಮತ್ತು ORS ಪಾಕೆಟ್ ವ್ಯವಸ್ಥೆ ಕಲ್ಪಿಸಿರುವ ಬಗ್ಗೆ ಪರಿಶೀಲಿಸಿದರು.
ಇದೇ ವೇಳೆ ಅವರು ಮಾತನಾಡಿ, ಕಳೆದ ವರ್ಷಕ್ಕಿಂತ ವರ್ಷ ಬೆಸಿಗೆ ಬಿಸಿಲಿನ ಪ್ರಮಾಣ ಹೆಚ್ಚಾಗಿರುವ ಕಾರಣ ಕುಡಿಯುವ ನೀರು, ನೆರಳು (ಟೆಂಟ್) ಮತ್ತು ಆರೋಗ್ಯ ಕಿಟ್ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ ಎಂದರು.
ಮುಂದುವರೆದು‌ ಮಾತನಾಡಿದ ಅವರು, ಹಿರಿಯ‌ ನಾಗರಿಗರು, ವಿಶೇಷ ಚೇತನರು‌, ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಲೀಗಾಗಲೇ ಕೆಲಸದ ಪ್ರಮಾಣದಲ್ಲಿ ಶೇ.50 ರಷ್ಟು ರಿಯಾಯಿತಿ ನೀಡಲಾಗಿದ್ದು, ಇದೀಗ ಬೆಸಿಗೆ ಬಿಸಿಲಿನ ತಾಪ ಹೆಚ್ಚಾಗಿರುವ ಕಾರಣ ರಾಜ್ಯ ಸರ್ಕಾರ ಕೆಲಸ ನಿರ್ವಹಿಸುವ ಕೂಲಿಕಾರರಿಗೆ ನಿಗದಿತ ಕೂಲಿ ಪಡೆಯಲು ನಿಗದಿಪಡಿಸಿದ ಕೆಲಸದ ಪ್ರಮಾಣದಲ್ಲಿ‌ ಏಪ್ರಿಲ್ ನಿಂದ ಮೇ ತಿಂಗಳ ಅಂತ್ಯದವರೆಗೆ ಶೇ.30ರಷ್ಟು ಮತ್ತು ಜೂನ್ ತಿಂಗಳಲ್ಲಿ ಶೇ.20 ರಷ್ಟು ರಿಯಾಯಿತಿ ನೀಡಿದ್ದು, ಇದರ ಲಾಭ ಪಡೆದುಕೊಳ್ಳುವಂತೆ ಕೂಲಿಕಾರರಿಗೆ ಸಲಹೆ ನೀಡಿದರು.
ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು ನರೇಗಾದಡಿ‌ ಕೆಲಸ ನಿರ್ವಹಿಸುವ ಅಕುಶಲ ಕೂಲಿಕಾರ್ಮಿಕರ ಕೂಲಿದರ ಪರಿಷ್ಕರಣೆ ಮಾಡಿ ಏಪ್ರಿಲ್-1ರಿಂದ ಅನ್ವಯವಾಗುವಂತೆ 349 ರೂಪಾಯಿಗೆ ಹೆಚ್ಚಳ ಮಾಡಿ ಆದೇಶ ಹೊರಡಿಸಿರುತ್ತದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಡಿಇಓ ಚನ್ನಪ್ಪಗೌಡ ಪಾಟೀಲ, ಕರವಸೂಲಿಗಾರ ಜಗದೀಶ್ ಗೌಡ, ಸಿಪಾಯಿ ಪರಶುರಾಮ ಕಾಯಕ ಬಂಧುಗಳಾದ ಮಕ್ತುಮ್ ಪಟೇಲ, ಶ್ರೀಶೈಲ, ದೇವಕಿ, ಜಯಶ್ರೀ ಮತ್ತು ಕೂಲಿ ಕಾರ್ಮಿಕರು ಹಾಜರಿದ್ದರು.