ವಿದ್ಯೆ,ಕಲೆ ಎಂಬುವುಗಳು ದೇವರು ಕೊಟ್ಟದ್ದು : ಕೈಲಾಸಪೇಠಶ್ರೀ
ತಾಳಿಕೋಟೆ:ಏ.5: ಮನುಷ್ಯನಿಗೆ ದೇವರು ವಿದ್ಯೆ, ಕಲೆಯೆಂಬುದನ್ನು ಕೊಟ್ಟಿದ್ದಾನೆ ಅವುಗಳನ್ನು ಬೆಳೆಸಿಕೊಳ್ಳುವ ಶಕ್ತಿ ನಮ್ಮಲ್ಲಿ ಬರಬೇಕೆಂದು ಕೈಲಾಸಪೇಠೆಯ ಶ್ರೀಗಳಾದ ಶ್ರೀ ಬಸವಪ್ರಭುದೇವರು ನುಡಿದರು.
ಗುರುವಾರರಂದು ಸ್ಥಳೀಯ ಶ್ರೀ ವಿರಕ್ತೇಶ್ವರ ಭರತನಾಟ್ಯ ಸಂಸ್ಥೆಯ ವತಿಯಿಂದ ಏರ್ಪಡಿಸಲಾದ ಉಚಿತ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಶ್ರೀಗಳು ವಿದ್ಯೆಯೆಂಬುದು ದೇವರು ಕೊಟ್ಟಿದ್ದಾನೆ ನಾವು ಮಾತನಾಡುವುದು ವಿದ್ಯೆಗೆ ಸಹಕಾರಿಯಾಗುವ ಭಾಷೆಯಾಗಿದೆ ಎಂದರು. ವಿದ್ಯೆಯನ್ನು ಸಕಾರದಿಂದ ಕಲೆಗೆ ಪ್ರೋತ್ಸಾಹ ಸಿಕ್ಕರೆ ತಾನೇ ಬೆಳೆಯುತ್ತದೆ ದೇವರು ಕೊಟ್ಟ ವಿದ್ಯೆಗೆ ಜನಪ್ರೀಯತೆಯೆಂಬುದು ಹೆಚ್ಚಿಗೆ ಇರುತ್ತದೆ ಆದರೆ ನಾವು ಪಡೆದುಕೊಂಡಿದ್ದಕ್ಕೆ ಜನಪ್ರೀಯ ಆಗುವುದಿಲ್ಲವೆಂದರು. ಜನಪ್ರೀಯವೆಂಬುದು ದೈವದ ಒಲುಮೆಯಾಗಿದೆ ದೇವರ ಒಲುಮೆಯಿಂದ ಬಂದದ್ದು ಜನಪ್ರೀಯವಾಗುತ್ತದೆ ಎಂದರು ಅಂತಹ ಮಹತ್ವದ ಕಲೆಯನ್ನು ಮಕ್ಕಳಲ್ಲಿ ಬೆಳೆಸಬೇಕೆಂಬ ಪ್ರಯತ್ನಮಾಡುತ್ತಾ ಸಾಗಿರುವ ವಿರಕ್ತೇಶ್ವರ ಭರತನಾಟ್ಯ ಸಂಸ್ಥೆಯ ಅಧ್ಯಕ್ಷರಾದ ವಿನೋದಕುಮಾರ ಚಿಕ್ಕಮಠ ಅವರ ಕಾರ್ಯ ಶ್ಲ್ಯಾಘನೀಯವಾಗಿದೆ ಎಂದು ಹೇಳಿದ ಶ್ರೀಗಳು ಅವರು ಬೆಳೆಸುವ ಆ ಕಾರ್ಯಕ್ಕೆ ಪ್ರೋತ್ಸಾಹ ಸಹಕಾರ ಅಗತ್ಯವಾಗಿದೆ ಎಂದು ಚಿಕ್ಕ ಕಥೆಯೊಂದನ್ನು ಹೇಳಿದ ಶ್ರೀಗಳು ಭರತನಾಟ್ಯದ ಕಲೆ ಹೂವಾಗಿ ಅರಳಿದಂತಾಗಬೇಕೆಂದು ಸಲಹೆ ನೀಡಿದರು.
ಇನ್ನೋರ್ವ ಹಿರಿಯ ಪತ್ರಕರ್ತರಾದ ಜಿ.ಟಿ. ಘೋರ್ಪಡೆ ಅವರು ಮಾತನಾಡಿ ಭರತನಾಟ್ಯವೆಂಬುದು ದೇವಾದಿ ದೇವತೆಗಳ ಕಾಲದಿಂದ ಬಂದಂತಹ ಈ ನಾಟ್ಯ ಕಲೆಯಾಗಿದೆ ತಾಳಿಕೋಟೆಯ ಶ್ರೀ ಖಾಸ್ಗತ ಶಿವಯೋಗಿಗಳೂ ಸಹ ಈ ನಾಟ್ಯವನ್ನು ಮಾಡಿ ಪ್ರದರ್ಶಿಸಿದ್ದಾರೆಂಬುದು ಹಿರಿಯರ ವಾಡಿಕೆಯಿಂದ ಗೊತ್ತಾಗಿದೆ ಆದರೂ ಇತ್ತೀಚೆಗೆ ಅದೇ ಮಠದ ಭರತನಾಟ್ಯ ಕಲೆಯ ಹಿರಿಯ ಶಿಕ್ಷಕ ಸಂಗಯ್ಯ ವಿರಕ್ತಮಠ ಅವರೂ ಸಹ ಅನೇಕ ವಿದ್ಯಾರ್ಥಿಗಳಿಗೆ ತಮ್ಮ ವಿದ್ಯಾಧಾನವನ್ನು ಮಾಡಿ ಇಹಲೋಕ ತ್ಯಜಿಸಿದ್ದಾರೆ ಆದರೂ ಶ್ರೀ ವಿರಕ್ತೇಶ್ವರ ಭರತನಾಟ್ಯ ಸಂಸ್ಥೆಯ ಸಂಸ್ಥಾಪಕ ವಿನೋದಕುಮಾರ ಅವರೂ ಸಹ ದಿ. ಸಂಗಯ್ಯನವರಿಂದ ಕಲೆಯನ್ನು ಕರಗತಮಾಡಿಕೊಂಡಿದ್ದವರಲ್ಲಿ ಅವರೊಬ್ಬರಾಗಿದ್ದಾರೆ ಆ ಮಹತ್ವದ ಕಲೆಯನ್ನು ಮುಂದುವರೆಸಿಕೊಂಡು ಸಾಗುವದರೊಂದಿಗೆ ಶ್ರೀ ವಿರಕ್ತೇಶ್ವರ ಎಂಬ ಭರತನಾಟ್ಯ ಸಂಸ್ಥೆಯನ್ನು ಇನ್ನೂ ಹೆಮ್ಮರವಾಗಿ ಬೆಳೆಸಬೇಕೆಂಬುದರ ಕುರಿತು ಒತ್ತಿಹೇಳಿದ ಘೋರ್ಪಡೆ ಅವರು ರಾಜ್ಯಮಟ್ಟಕ್ಕೂ ಮೀರಿ ಈ ಸಂಸ್ಥೆಯಲ್ಲಿ ಪ್ರಶಸ್ತಿಯನ್ನು ಪಡೆದಂತಹ ಕುಮಾರಿ ಪೃಥ್ವಿ ಹೆಗಡೆ ಈಗ ಇದೇ ಸಂಸ್ಥೆಯ ಶಿಕ್ಷಕಿಯಾಗಿ ತರಬೇತಿ ನೀಡುತ್ತಿರುವುದು ಸಂತಸ ತಂದಿದೆ ಎಂದು ಸಂಸ್ಥೆಯ ಕಾರ್ಯಚಟುವಟಿಕೆಗಳ ಕುರಿತು ಗುಣಗಾನ ಮಾಡಿದರು.
ಇನ್ನೋರ್ವ ಪುರಸಭಾ ಸದಸ್ಯರಾದ ಜಯಸಿಂಗ್ ಮೂಲಿಮನಿ ಅವರು ರಾಜ್ಯಪ್ರಶಸ್ತಿವಿಜೇತ ಕುಮಾರಿ ಪೃಥ್ವಿ ಹೆಗಡೆ ಅವರಿಗೆ ಹಾಗೂ ಸಂಸ್ಥೆಯ ಸಂಸ್ಥಾಪಕ ವಿನೋದಕುಮಾರ ಅವರಿಗೆ ಸನ್ಮಾನಿಸಿ ಮಾತಾಡಿದ ಅವರು ದುಡ್ಡಿಗಾಗಿ ದುಡಿಯುವಂತಹ ಈ ವಿರಕ್ತೇಶ್ವರ ಭರತನಾಟ್ಯ ಸಂಸ್ಥೆ ಇದಲ್ಲಾ ಮಕ್ಕಳಲ್ಲಿ ಕಲೆ, ಸಾಹಿತ್ಯ, ಸಂಸ್ಕøತಿಯನ್ನು ಬಿಂಬಿಸುವಂತಹ ಕಾರ್ಯವನ್ನು ಈ ಸಂಸ್ಥೆ ಮಾಡುತ್ತಾ ಸಾಗಿದೆ ಕಾರಣ ಈ ಸಂಸ್ಥೆಗೆ ನಾವು ಬೆನ್ನೆಲುಬಾಗಿ ಶ್ರಮಿಸುತ್ತೆವೆಂದು ಸಂಸ್ಥೆಯ ಕಾರ್ಯಚಟುವಟಿಗೆಳ ಕುರಿತು ಗುಣಗಾನ ಮಾಡಿದರು.
ವೇದಿಕೆಯ ಮೇಲೆ ಪುರಸಭಾ ಮಾಜಿ ಸದಸ್ಯ ಮಾನಸಿಂಗ್ ಕೊಕಟನೂರ, ಹಾಗೂ ವಿರಕ್ತೇಶ್ವರ ಭರತನಾಟ್ಯ ಸಂಸ್ಥೆಯ ಕಾರ್ಯದರ್ಶಿ ಮಂಜುನಾಥ ಹೆಗಡೆ ಮಾತನಾಡಿದರು.
ಇದೇ ಸಮಯದಲ್ಲಿ ಶ್ರೀಗಳಿಗೆ ಅತಿಥಿ ಮಹೋದಯರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಸಂಸ್ಥೆಯ ಅದ್ಯಕ್ಷ ವಿನೋದಕುಮಾರ ಚಿಕ್ಕಮಠ, ಶಿಕ್ಷಕ ಬಿ,ವಾಯ್, ಚವನಬಾವಿ, ಗಾಯಕ ಕಾಶೀನಾಥ ಕಾರಗನೂರ ಇವರೆಲ್ಲರಿಗೂ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಮಾನಸಾ ಹೂಗಾರ ಭರತನಾಟ್ಯ ಕಲೆಯನ್ನು ಪ್ರದರ್ಶಿಸಿ ತರಬೇತಿ ಕಾರ್ಯಾಗಾರ ಚಾಲನೆ ಅನುವು ಮಾಡಿಕೊಟ್ಟರು.
ಕಾಶೀನಾಥ ಸ್ವಾಗತಿಸಿ ವಂದಿಸಿದರು.