ಅಬಕಾರಿ ದಾಳಿ: 12.960 ಲೀಟರ್ ಮದ್ಯ ಜಪ್ತಿ
ಯಾದಗಿರಿ,ಏ.5-ಅಬಕಾರಿ ಇಲಾಖೆ ಅಧಿಕಾರಿಗಳು ಶಹಾಪುರ ತಾಲ್ಲೂಕಿನ ಗೋಗಿ ಗ್ರಾಮದ ಹೊಸಕೇರಾ ಕ್ರಾಸ್ ಹತ್ತಿರ ದಾಳಿ ನಡೆಸಿ ಗೋಗಿ (ಪಿ) ಗ್ರಾಮದ ರಾಜೇಶಗೌಡ ಯಲ್ಲಣ್ಣಗೌಡ ಕಲಾಲ್ ಎಂಬಾತನನ್ನು ಬಂಧಿಸಿ 12.960 ಲೀಟರ್ ಮದ್ಯ ಜಪ್ತಿ ಮಾಡಿದ್ದಾರೆ.
ಕಲಬುರಗಿ ವಿಭಾಗದ ಅಬಕಾರಿ ಜಂಟಿ ಆಯುಕ್ತರು, ಯಾದಗಿರಿಯ ಅಬಕಾರಿ ಉಪ ಆಯುಕ್ತರ ನಿರ್ದೇಶನದಂತೆ ಶಹಾಪುರ ಅಬಕಾರಿ ಉಪ ಅಧೀಕ್ಷಕರ ಮಾರ್ಗದರ್ಶನದಲ್ಲಿ ಶಹಾಪುರ ವಲಯದ ಅಬಕಾರಿ ಉಪ ನಿರೀಕ್ಷಕ ಅನಿಲ್ ಎಮ್ ಪತ್ತಾರ್, ಅಬಕಾರಿ ಪೇದೆ ಬಸಪ್ಪ, ವಾಹನ ಚಾಲಕರಾದ ಗೋಪಾಲ ರೆಡ್ಡಿ ಮತ್ತು ಗೃಹ ರಕ್ಷಕ ಸಿಬ್ಬಂದಿಯಾದ ಸೂರ್ಯಕಾಂತ ಅವರು ಈ ದಾಳಿ ನಡೆಸಿ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಯಾದಗಿರಿ ಅಬಕಾರಿ ಉಪ ಆಯುಕ್ತೆ ಶಾರದಾ ಸಿ.ಕೋಲಕಾರ ತಿಳಿಸಿದ್ದಾರೆ.