ಅಪಘಾತದಲ್ಲಿ ಬೈಕ್ ಸವಾರ ಸಾವು
ಕಲಬುರಗಿ,ಏ.5-ನಗರದ ರಾಜಾಪುರದಿಂದ ಆಳಂದ ಕಾಲೋನಿಗೆ ಬೈಕ್ ಮೇಲೆ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡು ಬೈಕ್ ಸವಾರನೊಬ್ಬ ಮೃತಪಟ್ಟ ಘಟನೆ ರಿಂಗ್ ರಸ್ತೆಯ ರಾಮ ನಗರದ ಪೂಜಾರಿ ಚೌಕ್ ಬಳಿ ನಡೆದಿದೆ.
ಮೃತನನ್ನು ಪ್ರದೀಪ್ ಅಲಿಯಾಸ್ ಪ್ರದೀಪ್ ಕುಮಾರ ಮಳಗೆ (42) ಎಂದು ಗುರುತಿಸಲಾಗಿದೆ.
ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರದೀಪ್ ಚಿಕ್ಕಪ್ಪನ ಮಗನ ಮದುವೆಗೆಂದು ಕಲಬುರಗಿಗೆ ಬಂದಿದ್ದ ಎಂದು ತಿಳಿದುಬಂದಿದೆ.
ಈ ಸಂಬಂಧ ನಾಗೇಶ ಸಿದ್ಧಾರೂಢ ಮಳಗೆ ಎಂಬುವವರು ಸಂಚಾರಿ ಪೊಲೀಸ್ ಠಾಣೆ-2ರಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.