ಏ.6, 7 ರಂದು ಕಣ್ವ ಪರಿಷತ್ ರಾಷ್ಟ್ರೀಯ ಸಭೆ
ಕಲಬುರಗಿ,ಏ.5: ಅಖಿಲ ಭಾರತೀಯ ಶುಕ್ಲಯಜುರ್ವೇದೀಯ ಕಣ್ವ ಪರಿಷತ್ತಿನ ರಾಷ್ಟ್ರೀಯ ಸಭೆಯನ್ನು ಶ್ರೀ ಸಂತಜ್ಞಾನೇಶ್ವರ ಮಹಾರಾಜ ಮಂದಿರ, ಅಳಂದಿ, ಪೂನಾ, ಮಹಾರಾಷ್ಟ್ರ ದಲ್ಲಿಏಪ್ರಿಲ್ 6 ಮತ್ತು 7ರಂದು ಆಯೋಜಿಸಲಾಗಿದೆ ಎಂದು ಪರಿಷತ್ತಿನ ರಾಜ್ಯ ಸಂಘಟನಾ ಕಾರ್ಯದರ್ಶಿವಿನುತ ಜೋಶಿ ತಿಳಿಸಿದ್ದಾರೆ.
ಕಣ್ವ ಪರಿಷತ್ತಿನ ರಾಷ್ಟ್ರೀಯ ಸಭೆಯ ರಾಷ್ಟ್ರಾಧ್ಯಕ್ಷ ಮನೋಹರ ಮಡಿಗೇರಿಯವರ ನೇತೃತ್ವದಲ್ಲಿ ನಡೆಯಲಿದ್ದು ದೇಶದ ವಿವಿಧ ರಾಜ್ಯಗಳ ಅಧ್ಯಕ್ಷರು, ಉಪಾಧ್ಯಕ್ಷರು, ಹಿರಿಯ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಮುಂದಿನ ವರ್ಷದಲ್ಲಿ ಪರಿಷತ್ತಿನ ಕಾರ್ಯಚಟುವಟಿಕೆ, ಮಹಾಅಧಿವೇಶನ, ವಿಪ್ರರ ಸಂಘಟನೆ, ಹಲವು ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಯಲಿದೆ.
ಸಂಚಾಲಕರಾದ ಕಲಬುರಗಿಯ ಭೀಮಸೇನರಾವ್ ಸಿಂಧಗೇರಿ, ಭೀಮರಾವ್ ಆರ್ ಕುಲಕರ್ಣಿ, ಹಿರಿಯರಾದ ವೆಂಕಟೇಶ್ ಕುಲಕರ್ಣಿ ಸೇರಿದಂತೆ ವಿವಿಧ ಜಿಲ್ಲೆಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.