ಡಾ.ಬಾಬು ಜಗಜೀವನರಾಮ್ ಜಯಂತಿ ಆಚರಣೆ
ಸೇಡಂ, ಎ, 05: ತಾಲೂಕಿನ ಮಳಖೇಡ ಗ್ರಾಮದ ನಿಜಲಿಂಗಪ್ಪ ನಗರದಲ್ಲಿಂದು ಹಸಿರು ಕ್ರಾಂತಿಯ ಹರಿಕಾರ ಭಾರತದ ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನರಾಮ್ ರವರ 117ನೇ ಜಯಂತೋತ್ಸವ ನಿಮಿತ್ಯವಾಗಿ ದಲಿತ ಮಾದಿಗ ಸಮನ್ವಯ ಸಮಿತಿಯ ಗ್ರಾಮ ಘಟಕದ ವತಿಯಿಂದ ಜಯಂತೋತ್ಸವ ಆಚರಿಸಲಾಯಿತು. ಬಾಬೂಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಮಿತಿ ಅಧ್ಯಕ್ಷ ಕೀರ್ತಿ ಕುಮಾರ್ ಮಾಳಗಿ ಮಾತನಾಡಿದರು. ಈ ವೇಳೆಯಲ್ಲಿ ಗ್ರಾಮ ಘಟಕದ ಅಧ್ಯಕ್ಷ ಭಗವಾನ್ ಬೋಚಿನ್,ಮಾಜಿ ಗ್ರಾಪಂ ಅಧ್ಯಕ್ಷ ಕಲ್ಯಾಣಿ ಮಂಗ, ಗ್ರಾಪಂ ಸದಸ್ಯ ಅಂಬರೀಶ್ ಎಮ್ ಗುಡಿ ,ಶ್ರೀಧರ ದಿವಾಕರ್ ದೇವರಾಜ್ ಮಂಗ, ಪೀರಪ್ಪ ದಂಡೋತಿ, ರಜನಿಕಾಂತ್ ಇದ್ದರು.