ಡಾ.ಬಾಬು ಜಗಜೀವನರಾಮ ಜಯಂತಿ ಆಚರಣೆ
ಚಿಟಗುಪ್ಪ:ಏ.5: ತಾಲೂಕಿನ ತಾಳಮಡಗಿ ಗ್ರಾಮದ ಗ್ರಾಮ ಪಂಚಾಯತನಲ್ಲಿ ಶುಕ್ರವಾರ ಭಾರತದ ಮಾಜಿ ಉಪ ಪ್ರಧಾನಿ,ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಮ ಅವರ 117ನೇ ಜಯಂತಿಯನ್ನು ಅವರ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಸರಳವಾಗಿ ಆಚರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಅಮೃತರಾವ ಮರಕಲಿ,ಗ್ರಾಮ ಪಂಚಾಯತ ಕಾರ್ಯದರ್ಶಿ ಜನಾರ್ಧನ ರೆಡ್ಡಿ,ಕರವಸೂಲಿಗಾರ ರೇವಣಪ್ಪ ಚಿನಕೇರಿ,ತಿಪ್ಪಣ್ಣ ಸಿಬ್ಬಂದಿಗಳಾದ ವೀರಯ್ಯ ಸ್ವಾಮಿ,ಕಾಶೇಪ್ಪ,ಬೀರಮ್ಮ,ಗ್ರಾಮ ಪಂಚಾಯತ ಸದಸ್ಯ ರಾಜಕುಮಾರ ಡೇಬ್ಬಿ,ಮಾದಿಗ ದಂಡೋರ ತಾಲೂಕ ಉಪಾಧ್ಯಕ್ಷ ಸುಧಾಕರ ಗಡ್ಡದೋರ,ಗ್ರಾಮ ಪಂಚಾಯತ ಮಾಜಿ ಸದಸ್ಯ ರಮೇಶ ವಾಡೇಕರ್,ಮುಖಂಡರಾದ ಧೂಳಪ್ಪ ರತ್ನಾಕರ,ಬಾಬು ಹಿರೇಭಾವಿ,ಜೈಶಿಲ್ ವಗ್ಗೆನೋರ,ರಾಜಕುಮಾರ ವಾಡೇಕರ,ಯುವಕರಾದ ತುಕಾರಾಮ ಬಾಜೋಳಗಿ,ಗೌರೀಶ,ಶಿವಕುಮಾರ ಮೋಳಕೆರಿ ಸೇರಿದಂತೆ ಮಾದಿಗ ಸಮುದಾಯದವರಮತ್ತು ಗ್ರಾಮದ ಗಣ್ಯರು ಉಪಸ್ಥಿತರಿದ್ದರು.