ನಮ್ಮ ಮತ ನಮ್ಮ ಹಕ್ಕು : ಜ್ಯೋತಿ ಸಾಗರ
ಕಲಬುರಗಿ:ಏ.5:ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಶ್ರೇಷ್ಠ ಕಾರ್ಯ, ಪ್ರತಿಯೊಬ್ಬರು ಮತದಾನ ಮಾಡುವ ಮೂಲಕ ತಮ್ಮ ಜವಾಬ್ದಾರಿ ತೋರಬೇಕು, ನಮ್ಮ ಮತ ನಮ್ಮ ಹಕ್ಕು, ದೇಶದ ಅಭಿವೃದ್ಧಿಗಾಗಿ ಮತ ಚಲಾಯಿಸುವುದು ನಮ್ಮ ಕರ್ತವ್ಯವಾಗಿದೆ, ಪ್ರತಿಯೊಬ್ಬರು ಮತದಾನ ಮಾಡಿ ನಿಮ್ಮ ಸುತ್ತುಮುತ್ತಲಿನ ಜನರು ಕೂಡ ಮತದಾನದಿಂದ ಹಿಂದೆ ಉಳಿಯದಂತೆ ನೋಡಿಕೊಳ್ಳಿ, ನಮ್ಮ ಒಂದು ಮತ ನಮ್ಮ ಮುಂದಿನ ಭವಿಷ್ಯ ಬದಲಾಯಿಸಬಹುದು. ಅತೀ ಹೆಚ್ಚು ಮತದಾನ ಆಗುವುದರಿಂದ ಸದೃಢ ಪ್ರಜಾಪ್ರಭುತ್ವ ಕಟ್ಟಲು ಸಾಧ್ಯ. ಆ ದಿಸೆಯಲ್ಲಿ ಸಂವಿಧಾನಾತ್ಮಕ ಹಕ್ಕಾದ ಮತದಾನ ಕಾರ್ಯದಲ್ಲಿ ತಪ್ಪದೇ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಜನರಲ್ಲಿ ಮತದಾನದ ಮಹತ್ವವನ್ನೂ ನರೇಗಾ ತಾಲೂಕು ಮಾಹಿತಿ ಶಿಕ್ಷಣ ಸಂವಹನ ಸಂಯೋಜಕಿ ಜ್ಯೋತಿ ಸಾಗರ ತಿಳಿಸಿದರು.
ತಾಲೂಕ ಆಡಳಿತ ಕಾಳಗಿ, ತಾಲೂಕ ಸ್ವೀಪ್ ಸಮಿತಿ ಹಾಗೂ ತಾಲೂಕ ಪಂಚಾಯತ್ ಕಾಳಗಿ ಮತ್ತು ಓಖಐಒ ವತಿಯಿಂದ ಇಂದು ಕಾಳಗಿ ತಾಲೂಕಿನ ಗೋಟೂರು ಗ್ರಾಮ ಪಂಚಾಯಿತಿಯ ಮುಖ್ಯ ಸರ್ಕಲ್ ನಲ್ಲಿ “ಮತದಾನ ಜಾಗೃತಿ ಜಾಥಾ ಅಭಿಯಾನ” ಅಂಗವಾಗಿ ಕ್ಯಾಂಡಲ್ ಮರ್ಜ್ ಜಾಥಾವನ್ನು ಉದ್ದೇಶಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಾಲು ಮರದ ತಿಮ್ಮಕ ಸಂಜೀವಿನಿ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ವಿಮಲಾಬಾಯಿ ಬಸವರಾಜ, ಸಂಘದ ಮಹಿಳೆಯರಾದ ಶಿವಲೀಲಾ, ಶರಣಮ್ಮ, ಶಾಂತಾ, ಸಂಗಮ್ಮ, ಫಾತಿಮಾ, ಸವಿತಾ ಮತ್ತು ಗ್ರಾಮಸ್ಥರು ಇದ್ದರು.