ಯೋಗ ಸಾಧನೆಯಿಂದ ಆರೋಗ್ಯ, ಆಯುಷ್ಯ ವೃದ್ಧಿ
ಕಲಬುರಗಿ:ಏ. 5: ಮಾನವ ಜೀವನ ಯಾಂತ್ರಿಕವಾಗಿದ್ದು ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾನೆ, ಕ್ರಮ ವರಿತು ನಿತ್ಯ ಯೋಗ ಸಾಧನೆ ಮಾಡಿದರೆ ಆರೋಗ್ಯ ಮತ್ತು ಆಯುಷ್ಯ ವೃದ್ಧಿಸುತ್ತದೆ ಎಂದು ವಿ.ಕೆ. ಸಲಗರದ ದ್ವಿತಿಯ ಸಾಂಭಶಿವಾಚಾರ್ಯ ಸ್ವಾಮಿಗಳು ನುಡಿದರು.
ಅವರು ಜೆ.ಆರ್. ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಯೋಗಶಿಬಿರ ಉದ್ಘಾಟಿಸಿ ಮಾತನಾಡುತ್ತ ಆಧ್ಯಾತ್ಮ ಜೀವನ ಸಾಧನೆಗೆ ಯೋಗದ ಕೊಡುಗೆ ದೊಡ್ಡದು, ಮಾನಸಿಕ ಸ್ವಾಸ್ಥ್ಯೆ ಬೆಳವಣಿಗೆಗೂ ಸಹಕಾರಿಯಾಗಿರೆ, ಮನಶಾಂತಿ ಮತ್ತು ರೋಗನಿರೋಧಕ ಬೆಳೆಯುತ್ತದೆ. ದಿನಿತ್ಯ ಯೋಗ ಸಾಧನೆ ಮಾಡಿದರೆ ರೋಗ ರುಜಿನಿಗಳು ದೂರವಾಗುತ್ತವೆಂದು ನುಡಿದರು. ಅಂತರರಾಷ್ಟ್ರಿಯ ಯೋಗ ಗುರು ರಾಜ್ಯ ಪ್ರಭಾರಿ ಪತಂಜಲಿ ಯೋಗಪೀಠದ ಶ್ರೀ ಭವರ್‍ಲಾಲ್ ಆರ್ಯ ಇವರು ದಿವ್ಯ ಸಾನಿಧ್ಯವಹಿಸಿ ಯೋಗದ ಬಗ್ಗೆ ಅರಿವು ಮೂಡಿಸಿದರು. ಬಸವರಾಜ ನೀಲೂರ, ಹೆಚ್. ಸುಭಾಸ, ಪರಮೇಶ್ವರ ಹಳಿಜೋಳ, ಸಿದ್ದಲಿಂಗ ದುರ್ಗೆ, ಬಸವರಾಜ ಮಾಡ್ಯಾಳ, ಇರಸಂಗಪ್ಪ ಬುಳ್ಳಾ, ವೀರಣ್ಣ ತಡಕಲ್ ಇದ್ದರು. ಶಿವಾನಂದ ಸಾಲಿಮಠ ಎಲ್ಲರೀಗೂ ಸ್ವಾಗತಿಸಿ ನಿರೂಪಿಸಿದರು. ವಿವಿಧ ತಾಲೂಕಿನಿಂದ ಆಗಮಿಸಿದ ಯೋಗಶಿಕ್ಷಕರಿಗೆ ಸಮಿತಿಯ ವತಿಯಿಂದ ಸತ್ಕರಿಸಲಾಯಿತು.