ರಾಷ್ಟ್ರದ ಆರ್ಥಿಕಾಭಿವೃದ್ಧಿಯಲ್ಲಿ ಕಡಲಗಳ ಪಾತ್ರ ಅನನ್ಯ
ಕಲಬುರಗಿ:ಏ.5: ವಿಶ್ವದ ಅರ್ಧದಷ್ಟು ಜನರು ಕರಾವಳಿಯ ಪ್ರದೇಶದಲ್ಲಿ ವಾಸಿಸುತ್ತಿದ್ದು ಅವರಿಗೆ ಜೀವನಾಧಾರವೆಂದರೆ ಸಮುದ್ರ, ಸಾಗರಗಳಾಗಿವೆ. ಶೇ.95ರಷ್ಟು ವ್ಯಾಪಾರವು ಸಮುದ್ರದ ಮೂಲಕ ಜರಗುತ್ತಿದ್ದು ಕಡಿಮೆ ವೆಚ್ಚದ ಜಲಸಾರಿಗೆಯಾಗಿದೆ. ಮೀನುಗಾರಿಕೆ ಪ್ರಮುಖ ಉದ್ಯೋಗವಾಗಿದ್ದು, ಜೊತೆಗೆ ಉಪ್ಪು, ಚಿಪ್ಪು, ಮುತ್ತು, ವಜ್ರ, ವೈಡುರ್ಯ, ಪೆಟ್ರೋಲಿಯಂಗಳಂತಹ ಅಮೂಲ್ಯವಾದ ಸಂಪತ್ತನ್ನು ಒದಗಿಸಿಕೊಡುವ ಮೂಲಕ ಕಡಲುಗಳು ರಾಷ್ಟ್ರದ ಆರ್ಥಿಕಾಭಿವೃದ್ಧಿಯಲ್ಲಿ ಅನನ್ಯವಾದ ಪಾತ್ರವನ್ನು ವಹಿಸಿವೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‍ನಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶುಕ್ರÀÀವಾರ ಜರುಗಿದ ‘ರಾಷ್ಟ್ರೀಯ ಕಡಲ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಡಲ ಸಾವಿರಾರು ಜೀವಿಗಳ ಒಡಲಾಗಿದೆ. ಮೀನುಗಳು, ಕಪ್ಪೆ, ಹಾವು, ಮೊಸಳೆ, ಆಮೆ ಸೇರಿದಂತೆ ಅನೇಕ ಜೀವಿಗಳು ಬದುಕುತ್ತವೆ. ಸಸ್ಯ ಸಂಪತ್ತುಗಳಿಂದ ಆಕ್ಷಿಜನ್ ದೊರೆತು ಜೀವಿಗಳು ಉಸಿರಾಡಿಸಲು ಸಾಧ್ಯವಾಗುತ್ತದೆ. ವಾತಾವರಣದಲ್ಲಿ ಕಾರ್ಬನ್ ಡೈಆಕ್ಷೈಡ್ ಪ್ರಮಾಣ ಕಡಿಮೆ ಮಾಡಿ ಪರಿಸರವನ್ನು ಸ್ವಚ್ಚವಾಗಿಡಲು ಸಹಕಾರಿಯಾಗಿವೆ. ಮಾನವನಿಗೆ ಅವಶ್ಯಕವಾಗಿ ಬೇಕಾಗುವ ನೀರನ್ನು ಪೂರೈಸುವ ಸಾಗರಗಳು ಅಮೂಲ್ಯವಾದ ನೈಸರ್ಗಿಕ ಸಂಪತ್ತಾಗಿವೆ. ಭೂಮಿಯ ಮೇಲೆ ಒಟ್ಟು ಶೇ.97ರಷ್ಟು ನೀರನ್ನು ಹಿಡಿದಿಟ್ಟುಕೊಂಡು ಮಳೆಯ ರೂಪದಲ್ಲಿ ಭೂಮಿಯ ಮೇಲೆ ಸುರಿಯುವ ಮೂಲಕ ಸಸ್ಯ ಮತ್ತು ಪ್ರಾಣಿ ಸಂಪತ್ತನ್ನು ಉಳಿಸುತ್ತವೆ. ಪರಿಸರವನ್ನು ಸಮತೋಲ ಸ್ಥಿತಿಯಲ್ಲಿರಲು ಸಾಗರ ಹಾಗೂ ಸಮುದ್ರಗಳು ತುಂಬಾ ಅವಶ್ಯಕವಾಗಿವೆ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್.ಬಿರಾದಾರ, ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಸಿಬ್ಬಂದಿ ನಿಲೊಫರ್ ಶೇಖ್, ಪೂಜಾ ಜಮಾದಾರ, ಸೋಹೆಲ್ ಶೇಖ್ ಸೇರಿದಂತೆ ಇನ್ನಿತರರಿದ್ದರು.