ಬಂಜಾರಾ ಸಮುದಾಯದವರಿಗೆ ಕಡೆಗಣನೆ ಮಾಡಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ಖಂಡನೆ
ಬೀದರ:ಏ.5:2024ರ ಲೋಕಸಭಾ ಚುನಾವಣೆಗೆ ಬಂಜಾರಾ ಜನಾಂಗದ ಅಭ್ಯರ್ಥಿಯನ್ನ ಆಯ್ಕೆ ಮಾಡದೇ ಇರುವುದನ್ನು ಖಂಡಿಸಿ ಕಾಂಗ್ರೇಸ್ ಪಕ್ಷದ ವಿರುದ್ಧ ಗೋರ್ ಸೇನಾ ಜಿಲ್ಲಾಧ್ಯಕ್ಷ ಉತ್ತಮ ಜೈಸಿಂಗ್ ಜಾಧವ ತಮ್ಮ ಅಸಮಾಧಾನ ಹೊರಹಾಕಿದರು. ರಾಜ್ಯಾದ್ಯಂತ 50 ಲಕ್ಷಕ್ಕೂ ಹೆಚ್ಚು ಜನಸಂಖ್ಯೆವುಳ್ಳ ಬಂಜಾರಾ ಸಮುದಾಯ ಕಾಂಗ್ರೇಸ್ ಪಕ್ಷದ ಕಣ್ಣಿಗೆ ಕಾಣದೆ ಇರುವುದು ವಿಪರ್ಯಾಸ ಎಂದು ತಿಳಿಸಿದರು.
ಅಲ್ಲದೇ ಬಿಜಾಪುರದ ಹಾಲಿ ಸಂಸದರಾದ ರಮೇಶ ಜಿಗಜಿಣಗಿ ಇತ್ತಿಚಿನ ತಮ್ಮ ಚುನಾವಣಾ ಪ್ರಚಾರದಲ್ಲಿ ಬಂಜಾರಾ ಜನಾಂಗದವರು ಯಾರಿಗಾದರೂ ಮತ ನೀಡಲಿ. ಅವರ ಮತ ನಾವೇನೂ ಕೇಳಿಲ್ಲ. ಅವರ ಮತ ನಮಗೆ ಬೇಕಾಗಿಲ್ಲ ಎಂದು ಅಸಡ್ಡೆಯಿಂದ ಹೇಳಿಕೆ ನೀಡಿರುವುದು ಖಂಡನೀಯ ಎಂದು ತಮ್ಮ ಆಕ್ರೋಶ ಹೊರಹಾಕಿದರು. ಜಿಗಜಿಣಗಿ ಅವರು ಕೂಡಲೇ ಬಂಜಾರಾ ಸಮಾಜದ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಚುನಾವಣೆಯಲ್ಲಿ ನಷ್ಟ ಅನುಭವಿಸಲು ಸಿದ್ಧರಾಗಿರಿ ಎಂದು ಹೇಳಿದ್ರು.
ಒಂದು ಕಡೆ ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರು ಬಂಜಾರಾ ಸಮುದಾಯವನ್ನು ಗೌರವಿಸುತ್ತಾರೆ. ಇನ್ನೊಂದು ಕಡೆ ಅವರದ್ದೇ ಪಕ್ಷದ ಸಂಸದರು ನಿಮ್ಮ ಮತಗಳ ಅವಶ್ಯಕತೆಯಿಲ್ಲ ಎಂದು ಹೇಳುತ್ತಿರುವುದು ಖಂಡನೀಯ. ಈ ವಿಡಿಯೋ ಇತ್ತಿಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಎಂದು ಗೋರ್ ಸೇನಾ ಪದಾಧಿಕಾರಿಗಳು ಸುದ್ದಿಗೋಷ್ಟಿಯಲ್ಲಿ ತಮ್ಮ ಅಸಮಾಧಾನ ಹೊರಹಾಕಿದರು.
ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ ಗೋರ್ ಸೇನಾ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ನೀಲಕಂಠ ರಾಠೋಡ್, ಬೀದರ ತಾಲೂಕಾ ಅಧ್ಯಕ್ಷ ವಿಕ್ರಮ ಪವಾರ, ರಮೇಶ ರಾಠೋಡ್ ಸೇರಿದಂತೆ ಇತರರು ಉಪಸ್ಥಿತರಿದ್ದರು.