ಏ. 10 ಮರಾಠಾ ಸಮಾಜದ ಬೃಹತ್ ಬಹಿರಂಗ ಸಮಾವೇಶ
ಬೀದರ್ ಏ 05 : ಇದೆ ತಿಂಗಳ ಏಪ್ರೀಲ್ 10 ರಂದು ಸಂಜೆ 4 ಗಂಟೆಗೆ ಭಾಲ್ಕಿ ಪಟ್ಟಣದ ಹತ್ತಿರ, 15 ಏಕರೆ ಭೂಮಿಯಲ್ಲಿ ಸಕಲ ಮರಾಠಾ ಸಮಾಜದಿಂದ ಬೃಹತ್ ಬಹಿರಂಗ ಸಮಾವೇಶ ಏರ್ಪಡಿಸಲಾಗುವುದೇಂದು ಸಮಾಜದ ಮುಖಂಡರಾದ ಪದ್ಮಾಕರ್ ಪಾಟೀಲ್ ಮತ್ತು ಡಾ.ದಿನಕರ್ ಮೋರೆ ಅವರುಗಳು ಗುರುವಾರ ಮಧ್ಯಾನ ಬೀದರ ನಗರದ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಈ ಬೃಹತ್ ಮರಾಠಾ ಸಮಾವೇಶದಲ್ಲಿ ಸುಮಾರು 1 ಲಕ್ಷ ಸಮಾಜ ಬಾಂಧವರು ಸೇರಲಿದ್ದಾರೆ. ರಾಜಕೀಯ ರಹಿತವಾದಂತಹ ಈ ಸಮಾವೇಶದ ಮೂಲಕ ಮರಾಠಾ ಸಮುದಾಯಕ್ಕೆ 2ಎ ದಲ್ಲಿ ಸೇರಿಸುವಂತೆ ಮತ್ತು ಸಮಾಜಕ್ಕೆ ಸೂಕ್ತ ಪ್ರಾತಿನಿದ್ಯ ನೀಡುವಂತೆ ಒತ್ತಾಯಿಸಲಾಗುವುದು.
ಸಮಾಜದ ಸಾಮಾಜಿಕ ಆರ್ಥಿಕ ಶೈಕ್ಷಣಿಕ ರಾಜಕೀಯ ಸೇರಿದಂತೆ ಸರ್ವಾಂಗೀಣ ಅಭಿವೃದ್ದಿಗಾಗಿ ಮಾಡಬೇಕಾಗಿರುವ ಹೋರಾಟ ಸಂಘರ್ಷ ಮುಂದಿನ ರೂಪರೇಷಗಳ ಬಗ್ಗೆ ಈ ಸಮಾವೇಶದಲ್ಲಿ ನೆರೆ ರಾಜ್ಯ ಮಹಾರಾಷ್ಟ್ರದ ಧೀಮಂತ ಹೋರಾಟಗಾರ ಮನೋಜ ಜಾರಂಗೆ ಪಾಟೀಲ್ ರವರು ಪ್ರಮುಖ ಭಾಷಣ ಮತ್ತು ಮಾರ್ಗದರ್ಶನ ಮಾಡಲಿದ್ದಾರೆ. ಮುಂದಿನ ಹೋರಾಟದ ಪ್ರಮುಖ ನಿರ್ಧಾರದ ಬಗ್ಗೆ ಏಪ್ರೀಲ್ 12 ರಂದು ಬೀದರನಲ್ಲಿ ಸೇರಲಿರುವ ಸಭೆ ಮೂಲಕ ಘೋಷಿಸಲಾಗುವುದು ಎಂದು ಪಾಟೀಲ್ ಮತ್ತು ಮೋರೆ ವಿವರಿಸಿದರು.
ಕಳೆದ 8 ವರ್ಷಗಳಿಂದ ಮರಾಠಾ ಸಮುದಾಯದ ಸರ್ವಾಂಗೀಣ ಅಭಿವೃದ್ದಿಗಾಗಿ ಮತ್ತು ಮೀಸಲಾತಿಗಾಗಿ ಆಗ್ರಹಿಸುತ್ತಾ ಬಂದಿರುವೇವು ಈ ಹಿಂದೆ ಬೀದರ ನಗರದಲ್ಲಿ ಎಕ್ ಮರಾಠಾ ಲಾಖ್ ಮರಾಠಾ” ಬೃಹತ್ ಮೇರವಣಿಗೆ ಮತ್ತು ಸಮಾವೇಶ ಮಾಡಿರುವುದು ಇಲ್ಲಿ ಸ್ಮರಣೀಯ ವಿಷಯವಾಗಿದೆ ಎಂದು ಹಿರಿಯ ಮುಖಂಡರಾದ ವಿಜಯಕುಮಾರ ಪಾಟೀಲ್ ಕಣಜಿ, ಜನಾರ್ಧನ್ ಬಿರಾದಾರ್, ನಾರಾಯಣ ಗಣೇಶ ವಕಿಲರು ಮತ್ತು ಅಂಗದರಾವ್ ಜಗತಾಪ್ ಬಸವಕಲ್ಯಾಣರವರು ತಿಳಿಸಿದರು.
ಹಿಂದುಳಿದ ಒಬಿಸಿ ಜನ ಸಮುದಾಯ ಮತ್ತು ಮರಾಠಾ ಸಮುದಾಯದವರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಅವರುಗಳು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ವಸಂತ ಪಾಟೀಲ್, ಸುನೀಲ ಸಿಂಧೆ, ಅಮರ ಜಾಧವ್, ರಾವ್‍ಸಾಹೇಬ್ ಬಿರಾದಾರ್, ಅನೀಲಕಾಳೆ ಅವರುಗಳು ಉಪಸ್ಥಿತರಿದ್ದರು.