ಭಾರತೀಯ ನೌಕಾಪಡೆ ಜೊತೆ ಗುರು ನಾನಕ ಗ್ರೂಪ್ ಆಫ್ ಇನ್‍ಸ್ಟಿಟ್ಯೂಷನ್ಸ್ ಒಪ್ಪಂದ
ಬೀದರ:ಏ.5: ನವದೇಹಲಿಯಲ್ಲಿ ನಡೆದ ಒಂದು ಐತಿಹಾಸಿಕ ಸಮಾರಂಭದಲ್ಲಿ, ಗುರು ನಾನಕ ಗ್ರೂಪ್ ಆಫ್ ಇನ್‍ಸ್ಟಿಟ್ಯೂಷನ್ಸ್ ಮತ್ತು ಭಾರತೀಯ ನೌಕಾಪಡೆಯೊಂದಿಗೆ ಎಂ.ಓ.ಯು.ಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ಭಾರತೀಯ ನೌಕಾಪಡೆ ಮತ್ತು ಗುರು ನಾನಕ ಗ್ರೂಪ್ ಆಫ್ ಇನ್‍ಸ್ಟಿಟ್ಯೂಷನ್ಸ್ ಗೌರವಾನ್ವಿತ ಅಧ್ಯಕ್ಷ ಡಾ.ಎಸ್.ಬಲಬೀರ ಸಿಂಗ್‍ಜಿ ಮತ್ತು ನೌಕಾಪಡೆಯ ನಿರ್ದೇಶಕರಾದ ಕಮೋಡೋರ್ ಜಿ.ರಾಮಬಾಬು, ಸಿಎಂಡಿ (ಎನ್‍ಇ), NWWA ನ ಅಧ್ಯಕ್ಷೆ ಶ್ರೀಮತಿ ಕಲಾ ಹರಿ ಕುಮಾರ ಮತ್ತು ಗುರು ನಾನಕ್ ಸಮೂಹ ಸಂಸ್ಥೆಗಳ ಉಪಾಧ್ಯಕ್ಷೆ ಡಾ. ರೇμÁ್ಮ ಕೌರ್ ಅವರ ಉಪಸ್ಥಿತಿಯಲ್ಲಿ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಲಾಯಿತು ಮತ್ತು ಡಾಕ್ಯುಮೆಂಟ್ ಹಸ್ತಾಂತರ ಸಮಾರಂಭದಲ್ಲಿ ಎಂಒಯು ವಿನಿಮಯ ಮಾಡಿಕೋಳ್ಳಲಾಯಿತು. ಈ ಎಂಒಯುಗೆ ಸಹಿ ಹಾಕುವ ಮೂಲಕ ಎರಡೂ ಸಂಸ್ಥೆಗಳು ಶೈಕ್ಷಣಿಕ ಮತ್ತು ಸಂಶೋಧನಾ ಚಟುವಟಿಕೆಗಳಲ್ಲಿ ಉತ್ಕೃಷ್ಟತೆಯನ್ನು ಸಾಧಿಸಲು ಕೈ ಜೋಡಿಸಿವೆ.
ಈ ಸಂದರ್ಭದಲ್ಲಿ ಡಾ. ರೇಷ್ಮಾ ಕೌರ ಅವರು ಮಾತನಾಡುತ್ತ ಇಲ್ಲಿನ ಗುರು ನಾನಕ ಸಮೂಹ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. ಇದರಿಂದ ಆಗುವ ಸೌಲಭ್ಯಗಳನ್ನು ವಿವರಿಸುತ್ತ ವಿದ್ಯಾರ್ಥಿಗಳಿಗೆ ನೌಕಾಪಡೆಯವರು ತರಬೇತಿ ಮೂಲಕ ಕಾರ್ಯಗಾರ ಕೊಡುತ್ತಾರೆ, ವಿದ್ಯಾರ್ಥಿಗಳಿಗೆ ನೌಕಾಪಡೆಯಲ್ಲಿ ಸೇವೆ ಮಾಡಲು ಅನುಕೂಲವಾಗುತ್ತದೆ ಎಂದು ಹೇಳಿದರು.