ತಂದೆ ತಾಯಿ ಎರಡನೇ ದೇವರು: ಮಣಿಯಾರ
ತಾಳಿಕೋಟೆ:ಏ.5: ನಾವು ವಲುಮೆ ಪಡೆಯಲು ಪಾರಂಪರಿಕ ಸಾಗಿಬಂದ ದೇವ ಒಬ್ಬನನ್ನ ಪ್ರೀತಿಸುತ್ತಾ ಹಾಗೂ ನಮಿಸುತ್ತಾ ನಮ್ಮ ಬೇಕು ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಮುಂದಾದ ನಾವು ದೇವ ಮೊದಲನೇಯ ದೇವರಾಗಿದ್ದರೂ ಎರಡನೇ ದೇವರು ತಂದೆತಾಯಿಯಾಗಿದ್ದಾರೆಂದು ಮಣಿಯಾರ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರಾದ ಅಯೂಬ್ ಮಣಿಯಾರ ಅವರು ನುಡಿದರು.
ಗುರುವಾರರಂದು ಸ್ಥಳೀಯ ಆಲಾಮಶೀದ್ ದಲ್ಲಿಯ ಸಭಾಭವನದಲ್ಲಿ ತಮ್ಮ ತಂದೆತಾಯಿಯ ಸವಿನೆನಪಿಗಾಗಿ ರಂಜಾನ್ ಹಬ್ಬದ ಪ್ರಯುಕ್ತ ಬಡ ಕುಟುಂಬದವರಿಗಾಗಿ ಏರ್ಪಡಿಸಲಾದ ಉಚಿತ ಕಿಟ್ ಗಳನ್ನು ವಿತರಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು ಕಳೆದ 16 ವರ್ಷಗಳಿಂದ ತಾಳಿಕೋಟೆ, ಮುದ್ದೇಬಿಹಾಳ, ನಾಲತವಾಡ, ಗುರಗುಂಟಾ ಈಕ್ಷೇತ್ರಗಳಲ್ಲಿ ರಂಜಾನರ ಹಬ್ಬದ ಪ್ರಯುಕ್ತ ಈ ಹಿಂದಿನಿಂದಲೂ ಕುಟ್ ಗಳನ್ನು ಬಡಜನತೆಗೆ ಮಾಡುತ್ತಾ ಸಾಗಿಬಂದಿದ್ದೇನೆ ಈ ನಾಲ್ಕು ಊರು ಒಳಗೊಂಡು ಸುಮಾರು 800 ಕಿಟ್ ಗಳನ್ನು ವಿತರಿಸುವ ಕಾರ್ಯ ಪ್ರತಿವರ್ಷ ಮಾಡುತ್ತಾ ಸಾಗಿಬಂದಿದೆ ಎಂದು ಹೇಳಿದ ಮಣಿಯಾರ ಅವರು ತಂದೆ ತಾಯಿಯ ಭಗ್ಗೆ ನಿರ್ಲಕ್ಷ್ಯ ಬೇಡ ಅವರನ್ನು ದೇವರಂತೆ ಕಂಡರೆ ನಮ್ಮ ಬೇಕುಬೇಡಿಕೆಗಳ ಈಡೇರಿಸಲು ಸಾಧ್ಯವೆಂದ ಅವರು ತಂದೆ ತಾಯಿ ನಮ್ಮನ್ನು ಕೈಬಿಟ್ಟುಹೋದ ನಂತರ ಸಹೋದರ ಸಹೋದರಿಯರಿದ್ದರೂ ತಂದೆತಾಯಿಯ ಪ್ರೀತಿ ಅಂತಹದರಲ್ಲಿ ಸಿಗುವದಿಲ್ಲ ಕಾರಣ ಆಯಾ ಕುಟುಂಬಗಳಲ್ಲಿ ಯಾವ ರೀತಿ ಸಂಸ್ಕಾರವಿರುತ್ತದೆಯೋ ಆರೀತಿ ಮುಂದುವರೆಯುತ್ತದೆ ಎಂದರು.
ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಿಮಿಸಿದ ಮೌಲಾನಾ ಅಯೂಬ ನದವಿ ಅವರು ಮಾತನಾಡಿ ದೇವರು ನಮಗೆ ಜನ್ಮನೀಡಿದ್ದಾನೆ ಕೆಲವರಿಗೆ ಶಕ್ತಿಯುತರನ್ನಾಗಿ ಮಾಡಿದ್ದಾನೆ ಇವೆಲ್ಲವೂ ನಾವು ಮಾಡತಕ್ಕಂತಹ ದಾನಧರ್ಮ ಪರೋಪಕಾರದಿಂದ ಈ ಸೇವಾಕಾರ್ಯ ದೊರೆಯಲಿದೆ ಎಂದರು. ನಮ್ಮ ನೀತಿ ನಡತೆ ಒಳ್ಳೆಯದಿರದೇ ಬಡಬಗ್ಗರ ಭಗ್ಗೆ ನಿರಾಕರಿಸುವ ಕಾರ್ಯ ಮಾಡಿದರೆ ಭಗವಂತ ಒಲಿಯುವದಿಲ್ಲಾ ನಮ್ಮ ದುಡುಮೆಯಲ್ಲಿ ಮೂರು ಭಾಗಗಳನ್ನಾಗಿ ಮಾಡಿ ಒಂದು ಮನೆತನಕ್ಕೆ ಎರಡನೆಯದ್ದು ಬಡಬಗ್ಗರ ದಾನಕ್ಕಾಗಿ ಮೂರನೇಯದ್ದು ನಾವು ಮಾಡತಕ್ಕಂತಹ ಉದ್ದಿಮೆಗಾಗಿ ಮೀಸಲಿಟ್ಟರೆ ನಮ್ಮ ಬಾಳ್ವೆ ಎಂಬುದು ವ್ಯವಸ್ಥಿತವಾಗಿ ನಡೆಯಲಿದೆ ಎಂದು ಕಿರು ಕಥಎಯೊಂದನ್ನು ಹೇಳಿದ ಅವರು ಜೀವನದಲ್ಲಿ ಮರಣ ಯೆನ್ನುವುದು ತಪ್ಪಿದ್ದಲ್ಲ ಕಾರಣ ಇರುವ ಅವಧಿಯಲ್ಲಿ ದೇವನು ನೀಡಿದ ನಮ್ಮ ಉತ್ಪನ್ನ ಸಂಪತ್ತುದಲ್ಲಿ ಬಡ ಜನತೆಯನ್ನು ಎತ್ತಿಹಿಡಿಯುವ ಕಾರ್ಯ ವಾಗಬೇಕೆಂದು ಕಿರುಕಥೆಯೊಂದನ್ನು ಹೇಳಿ ಮನವರಿಕೆ ಮಾಡಿದರು.
ಇನ್ನೋರ್ವ ಪುರಸಭಾ ಮಾಜಿ ಸದಸ್ಯರಾದ ಇಬ್ರಾಹಿಂ ಮನ್ಸೂರ ಅವರು ಮಾತನಾಡಿ ಅಯೂಬ್ ಮಣಿಯಾರ ಅವರು ಬಡವರನ್ನು ಗುರುತಿಸಿ ರಂಜಾನ್ ಹಬ್ಬದಲ್ಲಿ ಪ್ರತೀ ವರ್ಷದಂತೆ ಈ ಸಲವೂ ಹಬ್ಬದ ಕಿಟ್ ಗಳನ್ನು ವಿತರಿಸಲು ಸಂತಸ ತಂದಿದೆ ಇವರು ಮಾಡುವ ಸೇವಾ ಕಾರ್ಯ ಪೋಸ್ಟ್ ಮನ್ ರಂತೆ ಬಡವರನ್ನು ಹಾಗೂ ನಿರ್ಗತಿಕರನ್ನು ಹುಡುಕಿ ಅವರಿಗೆ ಹಬ್ಬದ ಸಂಬಂದಿಸಿದ ಕಿಟ್ ಗಳನ್ನು ವಿತರಿಸುತ್ತಾ ಸಾಗಿರುವುದು ಜನಮೆಚ್ಚುಗೆಗೆ ಪಾತ್ರವಾಗಿದೆ ಎಂದರು. ಅಯೂಬ್ ಮಣಿಯಾರ ಅವರ ಭಗ್ಗೆ ಎಷ್ಟು ಹೊಗಳಿದರೂ ಸಾಲದು ಅವರ ಭಗ್ಗೆ ನಮಗೆ ಅಭಿಮಾನವಿದೆ ದೇವನು ಹೇಳಿದಂತೆ ಪ್ರಾಮಾಣೀಕವಾಗಿ ಮಾನವೀಯತೆ ತೋರುವದರೊಂದಿಗೆ ತಮ್ಮ ಸಾಮಾಜಿಕ ಸೇವಾಕಾರ್ಯವನ್ನು ಮುಂದುವರೆಸಿಕೊಂಡು ಸಾಗಿದ್ದಾರೆ ಅವರ ಮಾಡುತ್ತಿರುವ ಸಾದನೆ ಕುರಿತು ಹಾಗೂ ದೇವನ ಕುರಿತು ಮಕ್ಕಳಿಗೂ ತಿಳುವಳಿಕೆ ನೀಡಿ ಅವರನ್ನು ಸನ್ಮಾರ್ಗಕ್ಕೆ ಕೊಂಡ್ಯೋಯ್ಯುವ ಕಾರ್ಯ ಮಾಡಿರಿ ಎಂದು ಉಪಸ್ತಿತ ಮಾತಾಪಿತರಿಗೆ ತಿಳಿಹೇಳಿದರು.
ಇನ್ನೋರ್ವ ಅತಿಥಿ ಜಾಮಿಯಾ ಮಸೀದಿಯ ಅಧ್ಯಕ್ಷರಾದ ಅಲ್ಲಾಭಕ್ಷ ನಮಾಜಕಟ್ಟಿ ಅವರು ಮಾತನಾಡಿ ಅಯೂಬ್ ಮಣಿಯಾರ ಅವರು ತಂದೆತಾಯಿಯ ಮೇಲಿಟ್ಟ ಪ್ರೀತಿ ಸಾಮಾನ್ಯವಲ್ಲ ಅವರು ಕೈಬಿಟ್ಟು ಹೋದರೂ ಅವರು ಇನ್ನೂ ಇದ್ದಾರೆಂಬ ಭಾವನೆಯೊಂದಿಗೆ ಮುನ್ನಡೆದ ಅವರ ಸೇವಾ ಕಾರ್ಯಕ್ಕೆ ಭಗವಂತ ಮೆಚ್ಚುಗೆ ವ್ಯಕ್ತಪಡಿಸಿ ಶ್ರೀರಕ್ಷೆಯಾಗಿ ಮಾರ್ಪಟ್ಟಿದ್ದಾನೆ ಕಾರಣ ನನ್ನದು ಎಂಬ ಹಪ್ಯಾಪಿತನ ಬಿಟ್ಟು ಅದು ದೇವನದ್ದು ಎಂಬ ಭಕ್ತಿಯ ಮಾರ್ಗದಿಂದ ತಿಳುವಳಿಕೆ ನೀಡುತ್ತಾ ಸಾಗಿದ ಕೀರ್ತಿ ಅಯೂಬ್ ಮಣಿಯಾರ ಅವರಿಗೆ ಸಲ್ಲುತ್ತದೆ ಇನ್ನೂ ಅವನಿಗೆ ಭಗವಂತ ಹೆಚ್ಚಿಗೆ ಆಯುಷ್ಯ ಆರೋಗ್ಯ ದಯಪಾಲಿಸಲಿ ಎಂದು ಆಶಿಸಿದರು.
ವೆದಿಕೆಯ ಮೇಲೆ ಹಿರಿಯರಾದ ಜನಾಬ್ ಮಹ್ಮದ ಕಾಶಿಮ್ ನಮಾಜಕಟ್ಟಿ, ಮಾಲಗಲ್ಲಿ ಜಮಾತ್ ಅಧ್ಯಕ್ಷರಾದ ಹಸನ್ ಕೊರಕಿ, ಆಲಾಮಶೀದ್ ಅಧ್ಯಕ್ಷ ಅಬ್ದುಲ್ ಕರೀಮ್ ಭಾಗವಾನ, ಈದ್ಗಾಕಮೀಟಿ ಕಾರ್ಯದರ್ಶಿ ಎ.ಡಿ. ಎಕಿನ್, ಉದ್ಯಮಿ ಆಫ್ತಾಬ್ ಮಣಿಯಾರ ಗಣ್ಯರಾದ ಬಾಬಾ ಎಕಿನ್, ಮಹಿಬೂಬ್ ಎಕಿನ್, ನಿವೃತ್ತ ಪ್ರಾಂಶುಪಾಲರಾದ ಆಯ್ ಎಲ್ ಮಮದಾಪೂರ, ಜೆ.ಮಾ.ಈ ಟಿಎಲ್ ಕೆಯ ಕಾರ್ಯದರ್ಶಿ ಇಲಿಯಾಸ ಚೌಧ್ರಿ, ಮಶಾಕ್ ಸಾಬ್ ನಗಾರ್ಚಿ, ಮನ್ನು ನಮಾಜಕಟ್ಟಿ ಮೊದಲಾದವರು ಉಪಸ್ತಿತರಿದ್ದರು.
ಕುರಾನ್ ಫಠಣದೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಲೋಟಸ್ ಕಾಲೇಜ್ ಅಧ್ಯಕ್ಷ ಮುಜಾಹಿದ್ ನಮಾಜಕಟ್ಟಿ ಸ್ವಾಗತಿಸಿ ನಿರೂಪಿಸಿದರು. ಇಲಿಯಾಸ್ ಚೌದ್ರಿ ವಂದಿಸಿದರು.