ಬೆಳಗಲ್ ಚೆಕ್‌ಪೋಸ್ಟ್ಗೆ ಬೇಟಿನೀಡಿದ; ಸಿ.ಇ.ಒ ರಾಹುಲ್ ಎಸ್ ಸಂಕನೂರು
ಸಂಜೆವಾಣಿ ವಾರ್ತೆ
ಸಿರುಗುಪ್ಪ, ಏ.05: ತಾಲೂಕಿನ ಗಡಿಭಾಗದ ಕೆ.ಬೆಳಗಲ್ ಗ್ರಾಮದಲ್ಲಿ ಲೋಕಸಭೆ ಚುನಾವಣೆ ಅಂಗವಾಗಿ ಸ್ಥಾಪಿಸಲಾಗಿರುವ ಚೆಕ್‌ಪೋಸ್ಟ್ಗೆ ಜಿ.ಪಂ. ಸಿ.ಇ.ಒ. ರಾಹುಲ್ ಎಸ್ ಸಂಕನೂರು ಬೇಟಿನೀಡಿ ದಾಖಲೆಗಳನ್ನು ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ನಂತರ ಮಾತನಾಡಿದ ಅವರು ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ದಾಖಲೆ ಇಲ್ಲದೆ ಯಾವುದೇ ವಸ್ತುಗಳು ಬಂದರೆ ಅದನ್ನು ವಶಪಡಿಸಿಕೊಳ್ಳಬೇಕು, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವ ಉದ್ದೇಶದಿಂದ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದೆ, ಚೆಕ್‌ಪೋಸ್ಟ್ನಲ್ಲಿ ಕರ್ನಾಟಕದಿಂದ ಸೀಮಾಂಧ್ರ ಪ್ರದೇಶಕ್ಕೆ, ಸೀಮಾಂಧ್ರ ಪ್ರದೇಶದಿಂದ ಕರ್ನಾಟಕಕ್ಕೆ ಬರುವ ಪ್ರತಿಯೊಂದು ವಾಹನವನ್ನು ಪರಿಶೀಲನೆ ಮಾಡಬೇಕು, ದಾಖಲೆ ಇಲ್ಲದ ಯಾವುದೇ ವಸ್ತುವಾಗಲಿ, ಹಣವಾಗಲಿ ದೊರೆತರೆ ಅದನ್ನು ವಶಕ್ಕೆ ಪಡೆದುಕೊಳ್ಳಬೇಕು.
ಮತದಾರರಿಗೆ ಆಮಿಷ ಒಡ್ಡಲು ಕೆಲವರು ವಿವಿಧ ವಸ್ತುಗಳನ್ನು ಖರೀದಿಸಿರುತ್ತಾರೆ. ಅಂತಹ ವಸ್ತುಗಳು ಚೆಕ್‌ಪೋಸ್ಟ್ನಲ್ಲಿ ಕಂಡರೆ ತಕ್ಷಣವೇ ವಶಪಡಿಸಿಕೊಂಡು ಈ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸಿ ಪ್ರಕರಣ ದಾಖಲಿಸಬೇಕೆಂದು ಸೂಚಿಸಿದರು.
ತಾ.ಪಂ.ಇ.ಒ. ಪವನ್‌ಕುಮಾರ್, ಜಿ.ಪಂ.ಇಂಜಿನಿಯರಿಂಗ್ ಉಪವಿಭಾಗದ ಎ.ಇ.ಇ. ತಿಪ್ಪೇಸ್ವಾಮಿ ಮತ್ತು ಚೆಕ್‌ಪೋಸ್ಟ್ ಸಿಬ್ಬಂದಿ ಇದ್ದರು.
One attachment • Scanned by Gmail