ದಲಿತರ ಏಳಿಗೆಗಾಗಿ ಶ್ರಮಿಸಿದ ಮಹಾನ್ ಚೇತನ ಡಾ. ಬಾಬು ಜಗಜೀವನ್ ರಾಮ್: ತಹಸಿಲ್ದಾರ್ ಶಿವಾನಂದ್ ಮೇತ್ರೆ
ಸೇಡಂ,ಎ,05: ವೈವಿಧ್ಯಮಯ ಭಾರತದಲ್ಲಿ ವರ್ಣಶ್ರಮದ ಮಧ್ಯದಲ್ಲಿ ಜಾತೀಯತೆ ಎಂಬ ಬೀಜವನ್ನು ಕಾಲಕಾಲಕ್ಕೆ ತೊಲಗಿಸುವಂತಹ ಪ್ರಯತ್ನ ನಡಿತಾ ಇತ್ತು, ಅದರಲ್ಲಿ 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಅದಾದ ನಂತರ ಅನೇಕ ಮಹಾನ ಪುರುಷರು, ಜನ್ಮ ತಾಳಿ ಮಾನವ ಕುಲ ಒಂದೇ, ಹೆಣ್ಣು ಗಂಡು ಸಮಾನರು ಎಂಬ ಭಾವನೆ ಜನರಲ್ಲಿ ಮೂಡುವಂತಹ ಮನೋಭಾವನೆ ಜನರಲ್ಲಿ ಬೆಳವಣಿಗೆ ತರುವಲ್ಲಿ, ಹಾಗೂ ತಮಗೆ ಆದಂತಹ ಅಪಮಾನ ನಮ್ಮವರಿಗೆ ಆಗದಂತೆ ನೋಡಿಕೊಳ್ಳುವಂತಹ ಜವಾಬ್ದಾರಿ ತಮ್ಮ ತಲೆಯ ಮೇಲೆ ಹೊತ್ತುಕೊಂಡು ನಿಯಂತ್ರಿಸಿ ದಲಿತರ ಏಳಿಗೆಗೆ ಶ್ರಮಿಸಿದ ಮಹಾನ್ ಚೇತನ ಹಸಿರು ಕ್ರಾಂತಿ ಹರಿಕಾರ,ಸ್ವಾತಂತ್ರ್ಯ ಭಾರತದ ಪ್ರಥಮ ಕಾರ್ಮಿಕ ಸಚಿವ ಉಪ ಪ್ರಧಾನಿ ಡಾ. ಬಾಬು ಜಗಜೀವನ್ ರಾಮ್ ಅವರಿಗೆ ಸಲ್ಲುತ್ತದೆ ಎಂದು ತಹಶೀಲ್ದಾರ್ ಶಿವಾನಂದ್ ಮೇತ್ರೆ ಅಭಿಪ್ರಾಯಪಟ್ಟರು. ತಾಲೂಕಾ ಆಡಳಿತ ಸೌಧದ ತಹಸಿಲ್ದಾರ್ ಕಾರ್ಯಾಲಯದಲ್ಲಿಂದು ಹಸಿರು ಕ್ರಾಂತಿಯ ಹರಿಕಾರ ಭಾರತದ ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನರಾಮ್ ರವರ 117ನೇ ಜಯಂತೋತ್ಸವ ಅಂಗವಾಗಿ ಭಾವಚಿತ್ರಕ್ಕೆ ತಹಸಿಲ್ದಾರ್ ಶಿವಾನಂದ್ ಮೇತ್ರೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.ಈ ವೇಳೆಯಲ್ಲಿ ಗ್ರೇಡ್ 2 ತಹಸಿಲ್ದಾರ್ ಸಿದ್ಧರಾಮ ನಾಚವರ, ಸಮಾಜ ಕಲ್ಯಾಣ ಇಲಾಖೆಯ ವಿಜಯಕುಮಾರ್, ಪತ್ರಕರ್ತ ಬಿಜನಳ್ಳಿ ಸುರೇಶ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಇದ್ದರು.