ಕೂಡ್ಲಿಗಿಯಲ್ಲಿಂದು ಚುನಾವಣಾ ವೆಚ್ಚ ಕುರಿತಾದ ತರಬೇತಿ ಕಾರ್ಯಕ್ರಮ.
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಏ.5 :- ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಗುರುವಾರ  ಬೆಳಿಗ್ಗೆ 11ಗಂಟೆಗೆ ಲೋಕಸಭಾ ಚುನಾವಣೆಯ ಕೂಡ್ಲಿಗಿ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ  ಡಾ.ಹೆಚ್.ಎನ್.ರಘು ರವರ ಅಧ್ಯಕ್ಷತೆಯಲ್ಲಿ ಚುನಾವಣಾ ವೆಚ್ಚ ಕುರಿತಾದ ತರಬೇತಿ ಕಾರ್ಯಕ್ರಮ ಜರುಗಿತು.
ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮಾರ್ಚ್ 16ರಿಂದ ಭಾರತ ಚುನಾವಣಾ ಆಯೋಗವು ಮಾದರಿ ನೀತಿ ಸಂಹಿತೆ ಜಾರಿಗೆ ತಂದಿರುವ ಹಿನ್ನಲೆಯಲ್ಲಿ ಚುನಾವಣಾ ವೆಚ್ಚದ ತರಬೇತಿಯನ್ನು ವಿಜಯನಗರ ಜಿಲ್ಲೆಯ ಜಿಲ್ಲಾ ಪಂಚಾಯತಿಯ  ಲೆಕ್ಕಾಧಿಕಾರಿ ರಿಯಾಜ್ ಅವರು ಚುನಾವಣೆಗೆ ಸಂಬಂದಿಸಿದ ಕೂಡ್ಲಿಗಿ ವಿಧಾನಸಭಾ ಕ್ಷೇತ್ರಗಳ ಎಇಓ, ಎಟಿ, ಇಎಸ್ ಟಿ, ವಿಎಸ್ ಟಿ,ವಿವಿಟಿ, ಎಸ್ ಎಸ್ ಟಿ, ಎಂಸಿಎಂ ತಂಡಗಳಿಗೆ ತರಬೇತಿ ನೀಡಿದರು.
ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲೆಯ ಜಿ ಪಂ  ಮುಖ್ಯ ಲೆಕ್ಕಾಧಿಕಾರಿ  ಶ್ರೀನಿವಾಸ್,  ಕೂಡ್ಲಿಗಿ ತಹಸೀಲ್ದಾರ್ ರಾಜು ಫಿರಂಗಿ, ಕೂಡ್ಲಿಗಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ  ವೈ.ರವಿಕುಮಾರ್, ಕೊಟ್ಟೂರು  ತಹಶೀಲ್ದಾರ ಅಮರೇಶ್ ಇವರುಗಳು  ಉಪಸ್ಥಿತರಿದ್ದರು.
One attachment • Scanned by Gmail