ಮತದಾನ ಕೇಂದ್ರಕ್ಕೆ ಭೇಟಿ, ವ್ಯವಸ್ಥೆ ಪರಿಶೀಲನೆ
ಔರಾದ :ಏ.5: ಲೋಕಸಭೆ ಚುನಾವಣೆಗೆ ಮೇ 7ರಂದು ಚುನಾವಣೆ ನಡೆಯಲಿರುವ ಹಿನ್ನಲೆಯಲ್ಲಿ ಗುರುವಾರ ತಹಸೀಲ್ದಾರ್ ನಾಗಯ್ಯ ಹಿರೇಮಠ ತಾಲೂಕಿನ ಆಲೂರ(ಕೆ) ಕೌಠಾ(ಬಿ), ಗಡಿಕುಶನುರು, ಲಾಧಾ, ಮುಸ್ತಾಪೂರ, ಧೂಪತ್ಮಹಗಾಂವ್ ಮತಗಟ್ಟೆ ಕೇಂದ್ರಗಳಿಗೆ ಭೇಟಿ ನೀಡಿ , ಮತಗಟ್ಟೆಗಳಲ್ಲಿ ವಿದ್ಯುತ್ ಸೌಲಭ್ಯ, ಬೆಳಕಿನ ಸೌಲಭ್ಯ, ಶೌಚಾಲಯಗಳ ವ್ಯವಸ್ಥೆಯ ಕುರಿತು ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಬಾಲಾಜಿ ನೈಕವಾಡೆ, ಆಡಳಿತಾಧಿಕಾರಿ ನಕುಶಾ, ಸಲಾವುದ್ದಿನ್, ಪಂಡಿತ್ ಶಿಂಧೆ ಇತರರಿದ್ದರು.