ಬಿಜೆಪಿ ಜಿಲ್ಲಾ ಎಸ್.ಸಿ ಮೋರ್ಚಾದಿಂದ ಡಾ|| ಬಾಬು ಜಗಜೀವನ್ ರಾಮ್ ಜಯಂತಿ ಆಚರಣೆ
ಬಳ್ಳಾರಿ ಜಿಲ್ಲಾ ಬಿ.ಜೆ.ಪಿ. ಎಸ್.ಸಿ. ಮೋರ್ಚಾದಿಂದ ಉಪ ಪ್ರಧಾನಿ ಡಾ|| ಬಾಬು ಜಗಜೀವನ್ ರಾಮ್ ರವರ 117ನೇ ಜನ್ಮ ದಿನಾಚರಣೆಯನ್ನು ಬಳ್ಳಾರಿ ಜಿಲ್ಲೆಯ ಡಾ|| ಬಾಬು ಜಗಜೀವನ್ ರಾಮ್ ರವರ ಭವನದಲ್ಲಿ ಆಚರಣೆ ಮಾಡಲಾಯಿತು.
ಡಾ|| ಬಾಬು ಜಗಜೀವನ್ ರಾಮ್ ರವರು ದಲಿತ ಸಮುದಾಯದಲ್ಲಿ ಹುಟ್ಟಿ, ಅತ್ಯಂತ ಉನ್ನತ ಮಟ್ಟಕ್ಕೆ ಬೆಳೆದರು. ಅವರು ಶಾಸಕರಿಂದ ಉಪ ಪ್ರಧಾನಿಯಾಗಿ ಸೇವೆಯನ್ನು ಸಲ್ಲಿಸಿದರು. ಅವರು ತುರ್ತು ಪರಿಸ್ಥಿತಿಯಲ್ಲಿ ನಮ್ಮ ದೇಶವನ್ನು ರಕ್ಷಣೆ ಮಾಡುವಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸಿದರು ಮತ್ತು ಡಾ|| ಬಾಬು ಜಗಜೀವನ್ ರಾಮ್ ರವರು ನಮ್ಮ ದೇಶಕ್ಕೆ ಹಸಿರು ಕ್ರಾಂತಿ ಹರಕಾರವೆಂದೇ ಹೆಸರುವಾಸಿಯಾದವರು. ಇಂದಿನ ಪೀಳಿಗೆಯು ಅವರ ತತ್ವ, ಆದರ್ಶ, ಸಿದ್ಧಾಂತಗಳನ್ನು ಅಳವಡಿಸಿಕೊಳ್ಳಬೇಕು.
ಈ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರಾದ ಮೇಕಲಿ ವೀರೇಶ, ಪ್ರಧಾನ ಕಾರ್ಯದರ್ಶಿಯಾದ ಅರುಣಚಲಂ.ವೈ, ವಿ.ಶಂಕರ್, ಉಪಾಧ್ಯಕ್ಷರಾದ ಚೌದರಿ ಶ್ರೀನಿವಾಸ್, ವಿ.ಗಾದಿಲಿಂಗಪ್ಪ, ಕಾರ್ಯದರ್ಶಿಗಳಾದ ಎಂ.ನರಸಪ್ಪ, ಹೆಚ್‍ಮಾರೆಣ್ಣ, ವೆಂಕಟಪ್ಪ ಶಂಕರಬಂಡೆ, ಹೆಚ್. ಹೊನ್ನೂರಪ್ಪ, ನಗರಾಧ್ಯಕ್ಷರಾದ ಬಿ.ಇ. ರಾಜೇಶ್, ತಾಲೂಕು ಅಧ್ಯಕ್ಷರಾದ ಆರ್.ಶಿವಶಂಕರ್, ಹೆಚ್.ಮಲ್ಲಯ್ಯ, ಜಿಲ್ಲಾ ಕಾರ್ಯಕಾರಣಿ ಸದಸ್ಯರಾದ ಬಿ.ಕೆ.ಮಲ್ಲಿಕಾರ್ಜುನ, ಕಮ್ಮರಚೇಡು ಹುಲುಗಪ್ಪ, ಹೆಚ್. ತಿಪ್ಪೇಸ್ವಾಮಿ ಹಲಕುಂದಿ, ವಿಶ್ವನಾಥಶರ್ಮ ಕಾರೇಕಲ್ಲು, ಷಣ್ಮುಖ ಹಾಗೂ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.