ಹಿಂದೂ, ಮುಸ್ಲಿಂ ಎನ್ನುವ ವ್ಯತ್ಯಾಸವಿಲ್ಲ  ಎಲ್ಲಾ ಭಾರತೀಯರು ಒಂದೇ: ಶ್ರೀರಾಮುಲು
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.05 : ಪ್ರಧಾನಿ ನರೇಂದ್ರ ಮೋದಿ ಅವರಿಗೆ  ಹಿಂದೂ, ಮುಸ್ಲಿಂ ಎನ್ನುವ ವ್ಯತ್ಯಾಸವಿಲ್ಲ ಎಲ್ಲಾ ಭಾರತೀಯರು ಒಂದೇ ಎಂದು ಆಡಳಿತ ನಡೆಸಿದ್ದಾರೆಂದು ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಹೇಳಿದ್ದಾರೆ.
ಅವರು ನಿನ್ನೆ ಸಂಜೆ ನಗರದಲ್ಲಿ  ಹಮ್ಮಿಕೊಂಡಿದ್ದ ಕೆಆರ್ಪಿ ಮತ್ತು ಬಿಜೆಪಿ ಕಾರ್ಯಕರ್ತರ ಸಮ್ಮಿಲನದ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ದೇಶದಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ ಆಳಿದ
ಕಾಂಗ್ರೆಸ್ ಮತ್ತು ಮೋದಿ ಅವರ ಆಳ್ವಿಕೆ ವ್ಯತ್ಯಾಸ ಬಗ್ಗೆ ತಿಳಿಸಿದ ಶ್ರೀರಾಮುಲು. ಕಾಂಗ್ರೆಸ್ ಆಳ್ವಿಕೆಯಲ್ಲಿ ಬಯೋತ್ಪಾದಕರು ನಮ್ಮ ದೇಶದ ಮೇಲೆ ಸಾವಿರಕ್ಕೂ ಹೆಚ್ಚು ಬಾರಿ ದಾಳಿ ಮಾಡಿ ವಿಧ್ವಂಸಕ ಕೃತ್ಯ ಮಾಡಿದ್ದಾರೆ. ಆದೇ ಮೋದಿ ಅವರ ಆಳ್ವಿಕೆಯಲ್ಲಿ ಭಾರತಕ್ಕೆ  ಬರಲು ಅವರು ನಡುಗುತ್ತಾರೆ,
ಬಂದ್ರೇ ವಾಪಸ್ ಹೋಗುವ ಗ್ಯಾರಂಟಿ ಅವರಿಗಿಲ್ಲ ಎಂದರು.
ಈ ದೇಶದ ಯುವ ಸಮೂಹ ಮೈಯಲ್ಲಿ ದೇವರು ಬಂದಾಗ ಕುಣಿದಂಗೆ ಮೋದಿ ಮೋದಿ ಎಂದು ಕುಣಿಯುತಿದ್ದಾರೆ. ರಾಜ್ಯದ
ಸಚಿವರೊಬ್ವರು ಮೋದಿ ಅಂದವರಿಗೆ ಕಾಳಕ್ಕೆ ಹೊಡೆಯಿರಿ ಅಂತಾರೆ. ಈ ಚುನಾವಣೆಯಲ್ಲಿ ಜನರೇ ಅವರ ಪಕ್ಷದ ಅಭ್ಯರ್ಥಿಗೆ ಓಟಿನ ಮೂಲಕ  ಹೊಡೆಯುತ್ತಾರೆಂದರು.
ಜನಾರ್ದನ ರೆಡ್ಡಿ ಹೊಸ ಪಕ್ಷ ಕಟ್ಟಿದಾಗ ಅವರ ಜೊತೆಗೆ ಹೋದ ಎಲ್ಲಾ ಕಾರ್ಯಕರ್ತರ ಬಗ್ಗೆ ಹೆಗ್ಗಳಿಕೆ ಮಾತನಾಡಿದ ಶ್ರೀರಾಮುಲು. ಬಳ್ಳಾರಿ ನಗರದಲ್ಲಿ ಲಕ್ಷ್ಮೀ ಅರುಣ ಮತ್ತು ಸೋಮಶೇಖರ್ ರೆಡ್ಡಿ  ಸ್ಪರ್ಧೆಯಿಂದ ಕಾಂಗ್ರೆಸ್ ಗೆಲ್ಲುವಂತಾಯ್ತು ಎಂದ ಅವರು  ಚಾಣಿಕ್ಯರ ಬುದ್ಧಿವಂತಿಕೆ ಹೊಂದಿರೋ ಜನಾರ್ದನ ರೆಡ್ಡಿ. ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು‌ ಕಾರಣರಾದರು. ಯಡಿಯೂರಪ್ಪ ಜೊತೆಗೆ ಸೇರಿ ಮೊದಲ ಬಾರಿಗೆ ಸರ್ಕಾರ ರಚನೆ ಮಾಡಿದ್ರು.
ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ, ಆನಂದ ಸಿಂಗ್, ನಾನು ಸೇರಿ ಯಡಿಯೂರಪ್ಪ ಜೊತೆಗೆ ಪಂಚ ಪಾಂಡವರಂತೆ ಕೆಲಸ ಮಾಡಿದ್ದೇವೆ. ಜನಾರ್ದನ ರೆಡ್ಡಿ ಜೊತೆಗೆ ಮೂವತ್ತೈದು ವರ್ಷ ರಾಜಕೀಯ ಮಾಡಿದ್ದೇನೆ. ಕಳೆದ ಚುನಾವಣೆಯಲ್ಲಿ ರೆಡ್ಡಿ ಸಹೋದರರು ಮತ್ತು ನಾವು ಒಡೆದು ಬೇರೆಯವರಿಗೆ ಲಾಭ ಮಾಡಿಕೊಟ್ಟಿದ್ದೇವೆ ಈಗ ಹಾಗೆ ಹಾಗಲ್ಲ. ಏನಿದ್ದರೂ ನಮ್ಮದೇ ಗೆಲುವು ಎಂದರು.
ಸಮಾರಂಭದಲ್ಲಿ ಪಕ್ಷದ ಮುಖಂಡ ರವಿಕುಮಾರ್, ಕೆಆರ್ಪಿ ಮತ್ತು ಬಿಜೆಪಿಯ ಮುಖಂಡರು ಪಾಲ್ಗೊಂಡಿದ್ದರು.
ಸೋಮಶೇಖರ ರೆಡ್ಡಿ ಗೈರು
ನಗರದ ಮಾಜಿ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಅವರು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ತಮ್ಮ ಸೋಲಿಗೆ. ಸೊಸೆ ಲಕ್ಷ್ಮೀ ಅರುಣಾ ಸ್ಪರ್ಧೆಯೇ ಕಾರಣ ಎಂಬ ನೋವಿನಿಂದ ನಿನ್ನೆ ಲಕ್ಷ್ಮೀ ಅರುಣ ಅವರು ಪಾಲ್ಗೊಂಡ ಎರೆಡೂ ಸಮಾರಂಭಗಳಲ್ಲಿ ಗೈರು ಜಾಹರಾಗಿದ್ದರಲ್ಲದೆ ಅವರ ಕಟ್ಟಾ ಬೆಂಬಲಿಗರು ಸಹ ಕಂಡು ಬರಲಿಲ್ಲ.