ಜನಾರ್ಧನರೆಡ್ಡಿ  ಬಗ್ಗೆ ಹಗುರವಾಗಿ  ಮಾತನಾಡಬೇಡಿ ಸಚಿವ ನಾಗೇಂದ್ರಗೆ ಲಕ್ಷ್ಮೀ ಅರುಣ ಎಚ್ಚರಿಕೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.05: ನಿಮಗೆ ರಾಜಕೀಯ ಕಲಿಸಿ ಕೊಟ್ಟಿರೋ ಜನಾರ್ಧನರೆಡ್ಡಿ  ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ. ನಿಮ್ಮ ನಾಲಿಗೆಯನ್ನು ಬಿಗಿ ಹಿಡಿತದಲ್ಲಿ ಇಟ್ಟುಕೊಂಡು ಮಾತಾಡಿ ಎಂದು ಸಚಿವ ನಾಗೇಂದ್ರ ಅವರಿಗೆ ಲಕ್ಷ್ಮೀ ಅರುಣ ಅವರು ಎಚ್ಚರಿಕೆಯ ಮಾತುಗಳನ್ನಾಡಿದ್ದಾರೆ.
ಅವರು ನಿನ್ನೆ ಸಂಜೆ ನಗರದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಹಾಗು ಕೆಆರ್ಪಿ ಕಾರ್ಯಕರ್ತರ ಸಮ್ಮಿಲನದ ಸಭೆಯಲ್ಲಿ ಮಾತನಾಡುತ್ತಿದ್ದರು. 
ಕೇಸ್ ಗಳಿಗೆ ಹೆದರಿ ಜನಾರ್ದನ ರೆಡ್ಡಿ ಬಿಜೆಪಿ ಸೇರಿದ್ದಾರೆ ಎಂದಿದ್ದೀರಿ. ಹಾಗಿದ್ದರೆ, ಅಂದೇ
ಯುಪಿಎ ಜೊತೆಗೆ ಅಡ್ಜಸ್ಟ್ ಮಾಡಿಕೊಳ್ಳುತ್ತಿದ್ರು.
ನಾಗೇಂದ್ರ ಅವರೇ ಕೇಸ್ ಗೆ ಹೆದರಿಕೊಂಡು ನೀವೇ  ಬಿಜೆಪಿಗೆ ದ್ರೋಹ ಮಾಡಿ ಪಕ್ಷೇತರರಾಗಿ ಸ್ಪರ್ಧೆ ಮಾಡಿ,  ಬಳಿಕ ಕಾಂಗ್ರೆಸ್ ಸೇರ್ಪಡೆಯಾಗಿದ್ದೀರಿ.
ನೂರು ಜನಾರ್ದನ ರೆಡ್ಡಿ ಬಂದ್ರು ಎನು ಮಾಡೋಕೆ ಅಗಲ್ಲ ಎಂದಿದ್ದೀರಿ, ಜನಾರ್ದನ ರೆಡ್ಡಿ ಅಲ್ಲ, ಅವರ  ಅಭಿಮಾನಿ ಯೊಬ್ವರೇ ನೂರು ಕಾಂಗ್ರೆಸ್ ನಾಯಕರಿಗೆ ಸಮ‌. ಜನಾರ್ಧನರೆಡ್ಡಿ ಅವರ ಬಗ್ಗೆ ಸಣ್ಣತನದ ಮಾತುಗಳಾಡಿದ್ರೆ,  ಜನರೇ ನಿಮಗೆ ಬುದ್ಧಿ ಕಲಿಸ್ತಾರೆಂದರು.
ಸಚಿವ ನಾಗೇಂದ್ರ ಅವರು ತಮ್ಮ ಸಹೋದರ ವೆಂಕಟೇಶ್ ಪ್ರಸಾದ್ ಕಾಂಗ್ರೆಸ್ ಅಭ್ಯರ್ಥಿ ಎಂದು ಮೊದಲು ಪ್ರಚಾರ   ಮಾಡಿದ್ರು. ಯಾವಾಗ ಜನಾರ್ದನ ರೆಡ್ಡಿ ಬಿಜೆಪಿ ಸೇರಿದ ಬಳಿಕ ಸೋಲಿನ ಭಯಕ್ಕೆ ಹಿಂದೆ ಸೇರಿದ್ರು ಎಂದರು.
ಸೋತ್ರೆ ಮಂತ್ರಿ. ಗೆದ್ರೇ ಎಂಪಿ ಎಂದು ಸಂಡೂರು ಶಾಸಕ ತುಕಾರಾಂ ಅವರನ್ನು ಕ್ಯಾಂಡೇಟ್ ಮಾಡಿದ್ದಾರೆ. ಈ ಕಂಡಿಷನ್ ಹಾಕಿದ ಬಳಿಕವೇ ತುಕಾರಾಂ ಅಭ್ಯರ್ಥಿಯಾಗಿದ್ದಾರೆ. ತುಕಾರಾಂ ಗೆದ್ರೇ ಜಿಲ್ಲೆಗೆ ಯಾವುದೇ ಲಾಭವಿಲ್ಲ, ಕಾರಣ ಅವರ ಪಕ್ಷ ಅಧಿಕಾರಕ್ಕೆ ಬರೋದಿಲ್ಲ. ತುಕಾರಾಂಗೆ ಮತ ಹಾಕಿದ್ರೇ ಮತ ವೆಸ್ಟ್ ಆಗ್ತದೆ. ಸೂರ್ಯ ಚಂದ್ರ ಇರೋದು ಎಷ್ಟು ಸತ್ಯವೋ ಮೋದಿ ಪ್ರಧಾನಿ ಆಗೋದು ಸತ್ಯ ಎಂದ ಅವರು, ನಾನು ಇಂದು ಬಿಜೆಪಿಗೆ ಮರಳಿದಾಗ ಮನೆ ಮಗಳಂತೆ ಸ್ವಾಗತ ಮಾಡಿರೋದು ಖುಷಿಯಾಗಿದೆ.ಕೆಅರ್ಪಿಪಿ ಪಕ್ಷ ಬಿಜೆಪಿಯಲ್ಲಿ ವಿಲೀನ ಮಾಡಿದ್ದೇವೆ ನಾವೇಲ್ಲ ಈಗ ಒಂದೇ ಎಂದರು.
ಬಿಜೆಪಿ ರಾಷ್ಟ್ರೀಯ, ರಾಜ್ಯದ ನಾಯಕರನ್ನು ಹಾಡಿ ಹೊಗಳಿದ ಲಕ್ಷ್ಮೀ ಅರುಣ ಜನಾರ್ದನ ರೆಡ್ಡಿ ಶ್ರೀರಾಮುಲು ರಾಜಕೀಯ ಜೀವನದ ಬಗ್ಗೆ ಉಲ್ಲೇಖಿಸಿದರು.
One attachment • Scanned by Gmail