ದಾನಂ ನಾಗೇಂದ್ರ ಗೆಲುವಿಗೆ ತಂತ್ರಗಾರಿಕೆ
ರಾಯಚೂರು.ಏ.೦೫- ಮುನ್ನೂರು ಕಾಪು ಬಲಿಜ ಸಮಾಜದ ಮುಖಂಡರು, ಹುಟ್ಟು ಕಾಂಗ್ರೆಸಿಗ, ಆರು ಬಾರಿ ಗೆಲುವು ಸಾಧಿಸಿದ ಸಿಕಿಂದ್ರಾಬಾದ್ ಲೋಕ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ದಾನಂ ನಾಗೇಂದ್ರ ಅವರು ಹಾಗೂ ಕರ್ನಾಟಕ ರಾಜ್ಯ ಕಾಂಗ್ರೆಸ್ ಯುವ ಮುಖಂಡರಾದ ರವಿ ಬೋಸರಾಜು ಅವರು ತೆಲಂಗಾಣ ಮುಖ್ಯಮಂತ್ರಿ ರೇವಂತ ರಡ್ಡಿ ಅವರನ್ನು ಭೇಟಿ ಮಾಡಿ ಚುನಾವಣಾ ಗೆಲುವಿನ ತಂತ್ರಗಾರಿಕೆ ಕುರಿತು ಸುಧೀರ್ಘವಾಗಿ ಮಾತನಾಡಿದರು.
ರಾಜ್ಯದಲ್ಲಿ ಜನಪರ ಕಾಂಗ್ರೆಸ್ ಆಡಳಿತ ಮೆಚ್ಚಿ ದಾನಂ ನಾಗೇಂದ್ರ ಅವರು ಬಿಆರ್‌ಎಸ್ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದರು. ಇವರ ನಾಯಕತ್ವ ಮೆಚ್ಚಿ, ಮುನ್ನೂರು ಕಾಪು ಸಮಾಜ ಹಾಗೂ ಹಿಂದುಳಿದ ನಾಯಕತ್ವ ಬಲವರ್ಧನೆಗಾಗಿ ಕಾಂಗ್ರೆಸ್ ಪಕ್ಷ ಸಿಕಿಂದ್ರಾಬಾದ್ ಲೋಕಸಭೆ ಟಿಕೆಟ್ ನೀಡಿದೆ.
ಈ ಚುನಾವಣೆಯ ಗೆಲುವಿಗಾಗಿ ಸಿಎಂ ರೇವಂತ ರಡ್ಡಿ ಅವರನ್ನು ರಾಜ್ಯ ಯುವ ರವಿ ಬೋಸರಾಜು ಭೇಟಿಯಾಗಿ ಚುನಾವಣಾ ತಂತ್ರಗಾರಿಕೆ ಕುರಿತು ಚರ್ಚಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಶಬ್ಬೀರ್ ಅಲೀ ಸೇರಿ ಮುನ್ನೂರು ಕಾಪು ಬಲಿಜ ಸಮಾಜದ ಮುಖಂಡರು ಇದ್ದರು.