ವಿದ್ಯುತ್ ಲೈನ್ ಕೆಳಗಡೆ ಬೆಂಕಿ ಹಚ್ಚ ಬೇಡಿ: ಅವಘಡಕ್ಕೆ ಆಹ್ವಾನ
ಸಂಜೆವಾಣಿ ವಾರ್ತೆ
ಸಿಂಧನೂರು.ಏ.೦೫- ವಿದ್ಯುತ್ ತಂತಿಗಳ ಕೆಳಗಡೆ ಹುಲ್ಲು, ಕಸ, ಕಡ್ಡಿ ಹಾಕಿ ಬೆಂಕಿಹಚ್ಚ ಬೇಡಿ ಅಪಾಯಕ್ಕೆ ಆಹ್ವಾನ ಕೊಟ್ಟಂತಾಗುತ್ತದೆಂದು ಪವರ್ ಗ್ರೀಡ್ ಮುಖ್ಯ ವ್ಯವಸ್ಥಾಪಕರಾದ ವಿ.ರಾಜೇಶ ಸಂಗಣ್ಣ ಪತ್ರಿಕಾ ಪ್ರಕಟಣೆ ಮೂಲಕ ರೈತರಲ್ಲಿ ಮನವಿ ಮಾಡಿಕೊಂಡರು.
೪೦೦ ಲೈನ್ ಕೆ.ವಿ.ಚೆನ್ನಳ್ಳಿ, ಕಾರಟಗಿ, ಗಂಗಾವತಿ, ಇಂದ್ರಗಿ, ಹಿರೇ ಬೆಣಕಲ್, ಸಿದ್ದಾಪುರ, ಶ್ರೀರಾಮ ನಗರ, ಗುಳದಳ್ಳಿ ಹೀಗೆ ಹತ್ತು ನಗರ ಪಟ್ಟಣ, ಗ್ರಾಮಗಳಲ್ಲಿ ವಿದ್ಯುತ್ ಲೈನ್ ಹಾದು ಹೋಗಿರುತ್ತದೆ.
ಈ ನಿಟ್ಟಿನಲ್ಲಿ ರೈತರು ತಾವು ಬೆಳೆಗಳನ್ನು ಬೆಳೆದ ನಂತರದ ತ್ಯಾಜ್ಯ, ಕಸವನ್ನು ವಿದ್ಯುತ್ ದೊಡ್ಡ ಕಂಬಗಳ ಕೆಳಗಡೆ ಹಾಕಿ ಬೆಂಕಿ ಹಚ್ಚುವದರಿಂದ ಲೈನ್ ಟ್ರಿಪ್ ಆಗಿ ವಿದ್ಯುತ್ ಪೂರೈಕೆಯಲ್ಲಿ ಪದೆ ಪದೆ ವ್ಯತ್ಯಯ ಆಗುತ್ತದೆ ಮತ್ತು ದೊಡ್ಡ ಅಪಾಯಗಳು ಸಂಬವಿಸುವ ಸಾದ್ಯತೆ ಇರುತ್ತದೆ. ಈ ಕಾರಣದಿಂದ ಬೆಂಕಿ ಹಚ್ಚುವಾಗ ಕಂಬದ ಸುತ್ತ-ಮುತ್ತಲೂ ಹಚ್ಚದೇ ಜಾಗರೂಕತೆಯಿಂದ ಇರಿ ಎಂದು ರೈತರಿಗೆ ಮನವರಿಕೆ ಮಾಡಿದರು.