ಹೆಚ್.ವಿಶ್ವನಾಥ್‍ಗೆ ತನ್ವೀರ್ ಸೇಠ್ ತಿರುಗೇಟು
ಸಂಜೆವಾಣಿ ನ್ಯೂಸ್
ಮೈಸೂರು: ಏ.05:- ಮೈಸೂರು-ಕೊಡಗು ಬಿಜೆಪಿ ಅಭ್ಯರ್ಥಿ ಯದುವೀರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಬೇಕು ಎಂದು ಹೇಳಿಕೆ ನೀಡಿದ್ದ ವಿಧಾನ ಪರಿಷತ್ ವಿಪಕ್ಷ ನಾಯಕ ಹೆಚ್. ವಿಶ್ವನಾಥ್ ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್ ತಿರುಗೇಟು ನೀಡಿದ್ದಾರೆ.
ವಿಶ್ವನಾಥ್ ಅವರಿಗೆ ವಯಸ್ಸಿನ ಸಮಸ್ಯೆ ಹಾಗಾಗಿ ಏನೇನೋ ಮಾತಾಡುತ್ತಾರೆ. ಅವರ ಮಾತಿಮ ಮೇಲೆ ಅವರಿಗೆ ಗಮನ ಇರಲ್ಲ. ಅವಿರೋಧವಾಗಿ ಹೇಗೆ ಆಯ್ಕೆ ಮಾಡೋಕೆ ಆಗುತ್ತೆ.? ಈಗಾಗಲೇ 15 ಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಲಕ್ಷ್ಮಣ್ ಉಮೇದುವಾರಿಕೆ ವಾಪಾಸ್ ಪಡೆದರೆ ಅವಿರೋಧವಾಗಿ ಆಯ್ಕೆ ಮಾಡಿದಾಗೆ ಆಗುತ್ತಾ.? ಎಂದು ಪ್ರಶ್ನಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಅನ್ನೋದು ಒಂದು ಪ್ರಕ್ರಿಯೆ ನಡೆಯಬೇಕು. ಅವರು ಆಲ್ ಇಂಡಿಯಾ ಟೂರ್ ಹೊಡೆದು ಬಂದರೂ ಇನ್ನೂ ಬುದ್ದಿ ಬಂದಿಲ್ಲ ಅನ್ಸುತ್ತೆ. ಅವರು ಮೊದಲು ಯಾವ ಪಕ್ಷದಲ್ಲಿದ್ದಾರೆ ಎನ್ನುವುದನ್ನು ಸ್ಪಷ್ಟಪಡಿಸಲಿ. ಇವರ ಹೇಳಿಕೆಯಿಂದ ನಮಗೆ ಏನು ಹಿನ್ನಡೆ ಆಗಲ್ಲ. ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಎಲ್ಲಾ ಗೆಲುವಿನ ವಾತಾವರಣ ಇದೆ ಎಂದು ಹೇಳಿದರು.