ಎಂ.ಐ. ವಿಂಗ್ಸ್ ಪ್ರಿ ಸ್ಕೂಲ್ ವಾರ್ಷಿಕೋತ್ಸವ

ಸಂಜೆವಾಣಿ ವಾರ್ತೆ
ದಾವಣಗೆರೆ, ಏ.4; ಇತ್ತೀಚೆಗೆ ನಗರದ ವನಿತಾ ಸಮಾಜ ಸಭಾಂಗಣದಲ್ಲಿ ನಡೆದ ಎಂ.ಐ. ವಿಂಗ್ಸ್ ಶಾಲಾ ವಾರ್ಷಿಕೋತ್ಸವ ದಲ್ಲಿ ಚಿಣ್ಣರು ಕುಣಿದು ಕುಪ್ಪಳಿಸಿದರು. ಮಕ್ಕಳ ನೃತ್ಯ ಪ್ರದರ್ಶನಗಳು ಬಹಳ ಆಕರ್ಷಕವಾಗಿ ಮೂಡಿ ಬಂದವು, ಮಕ್ಕಳ ಹಾಡು, ಭಾಷಣ ಪ್ರೇಕ್ಷಕರಿಗೆ ಮುದವನ್ನು ತಂದಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದಾವಣಗೆರೆಯ ದಕ್ಷಿಣದ ಬಿ ಇ ಓ ಡಾ.ಪುಷ್ಪಲತಾ  ಶಾಲೆಯ ವಿಭಿನ್ನವಾದ ಪರಿಕಲ್ಪನೆಯನ್ನು ಪ್ರಶಂಶಿಸಿದರು ಹಾಗೂ ಪೋಷಕರಿಗೆ ಮಾರ್ಗದರ್ಶನ ನೀಡಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ಛಾಯಾ .ಕೆ .ಎ  ಮಕ್ಕಳ ಆರೋಗ್ಯ ವನ್ನು ಕಾಪಾಡುವುದರ ಬಗ್ಗೆ ಪೋಷಕರಿಗೆ ಹಲವಾರು ವಿಷಯಗಳನ್ನು ತಿಳಿಸಿಕೊಟ್ಟರು. ಶಾಲೆಯ ಸಂಸ್ಥಾಪಕರಾದ ಶ್ರೀಮತಿ ದೀಪ. ಎನ್ .ರಾವ್  ಪ್ರತಿಯೊಂದು ಮಕ್ಕಳ ಮಲ್ಟಿಪಲ್ ಇಂಟಲಿಜೆನ್ಸ್ ನಲ್ಲಿ ಉಂಟಾದ ಬೆಳವಣಿಗೆಗಳ ಬಗ್ಗೆ ತಿಳಿಸಿದರು, ಶಾಲೆಯ ನಿರ್ದೇಶಕರಾದ  ವೆಂಕಟೇಶ .ಬಿ.ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು, ಬಹು ಸುಂದರವಾದ ಪ್ರದರ್ಶನಗಳನ್ನು ಚಿಣ್ಣರು ನೀಡಿದರು, ಹಾಗೂ ಬಹುಮಾನಗಳನ್ನು ಗಳಿಸಿ  ಬೀಗಿದರು.