ನಾಯಕ ಸಮುದಾಯದ ಅಭಿವೃದ್ಧಿಗೆ ಬಿಜೆಪಿ ಕೊಡುಗೆ: ವೆಂಕಟಾಚಲ
ಸಂಜೆವಾಣಿ ವಾರ್ತೆ
ಹನೂರು.ಏ.5:- ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರ ಬಿಜೆಪಿ ಸರ್ಕಾರದ ಜನಪರ ಆಡಳಿತವನ್ನು ಮೆಚ್ಚಿ ನಾಯಕ ಸಮುದಾಯದ ನಾವುಗಳು ಬಿಜೆಪಿ ಬೆಂಬಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತೇವೆ , ನರೇಂದ್ರ ಮೋದಿ ಮತ್ತೊಮ್ಮೆ ಆಯ್ಕೆಗೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಬಾಲರಾಜುಗೆ ಬೆಂಬಲ ಎಂದು ಜಿಲ್ಲಾ ಬಿಜೆಪಿ ಎಸ್.ಟಿ ಮೋರ್ಚಾ ಉಪಾಧ್ಯಕ್ಷ ಹಾಗೂ ಹನೂರು ತಾಲೂಕು ನಾಯಕ ಸಂಘದ ಉಪಾಧ್ಯಕ್ಷ ವೆಂಕಟಾಚಲ (ತಿರುಪತಿ) ಬಂಡಳ್ಳಿ ಅವರು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಮುಖಂಡ ಉದ್ದನೂರು ಸಿದ್ದರಾಜು ಅವರು ತಾವು ಹನೂರು ತಾಲೂಕಿನ ನಾಯಕ ಸಮುದಾಯದ ಉಪಾಧ್ಯಕ್ಷ ಎಂದು ಸುಳ್ಳು ಹೇಳಿಕೆ ನೀಡಿ ಮಾಜಿ ಶಾಸಕ ನರೇಂದ್ರ ಅವರನ್ನು ಓಲೈಸಿ ಕೊಳ್ಳಲು ನಾಯಕ ಸಮುದಾಯ ಎಲ್ಲರೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ತಿಳಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸುತ್ತೇವೆ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಸನ್ಮಾನ್ಯ ನರೇಂದ್ರ ಮೋದಿಯವರು ದೇಶ ಕಂಡಂತಹ ದೀಮಂತ ನಾಯಕರು ನಮ್ಮ ಎಸ್.ಟಿ ಸಮುದಾಯಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಪರಿವಾರ ತಳವಾರ ಎಂಬುದನ್ನು ಎಸ್.ಟಿ ಮಾಡಿದ್ದಾರೆ. ನಾವು ಮತ್ತೊಮ್ಮೆ ನರೇಂದ್ರ ಮೋದಿಯವರು ಪ್ರಧಾನಿಯಾಗಬೇಕು ಈ ದೇಶದ ಅಭಿವೃದ್ಧಿಗಾಗಿ ಬಿಜೆಪಿಯನ್ನು ಬೆಂಬಲಿಸಿ ಚಾಮರಾಜನಗರ ಲೋಕಸಭಾ ಬಿಜೆಪಿ ಅಭ್ಯರ್ಥಿ ಬಾಲರಾಜು ರವರನ್ನು ಗೆಲ್ಲಿಸಲು ಶ್ರಮಿಸುತ್ತೇವೆ.
ಪ್ರತಿಯೊಂದು ಮನೆ ಮನೆ ಬಾಗಿಲಿಗೆ ಜಲ ಜೀವನ ಮಿಷನ್ ಯೋಜನೆ ಅಡಿಯಲ್ಲಿ ಮನೆಮನೆಗೂ ಗಂಗೆ ಯೋಜನೆ ನೀಡಿರುವುದು ನರೇಂದ್ರ ಮೋದಿಯವರು. ಗ್ರಾಮ ಪಂ. ಮೂಲಕ ನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಕೆಲಸ ನೀಡುತ್ತಿರುವುದು ಕೇಂದ್ರ ಸರ್ಕಾರದ ಯೋಜನೆಯಾಗಿದೆ.
ಹೊಸದಾಗಿ ನಿರ್ಮಿಸಲಾದ ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಿ ಉದ್ಘಾಟಿಸಿದ್ದಾರೆ. ದೇಶದ ಅಭಿವೃದ್ಧಿಗಾಗಿ ಜನಪರ ಯೋಜನೆಗಳನ್ನು ನೀಡಿದ್ದಾರೆ. ಜೊತೆಗೆ ಪ್ರತ್ಯೇಕವಾಗಿ ನಮ್ಮ ಸಮಾಜಕ್ಕೆ ಉತ್ತಮವಾದ ಕೊಡುಗೆಗಳನ್ನು ನೀಡಿರುತ್ತಾರೆ
ಸನ್ಮಾನ್ಯ ಯಡಿಯೂರಪ್ಪನವರ ಬಿಜೆಪಿ ಸರ್ಕಾರದ ಆಡಳಿತ ಅವಧಿಯಲ್ಲಿ ವಾಲ್ಮೀಕಿ ದಿನಾಚರಣೆಯ ಮಾಡುವ ಮೂಲಕ ರಜಾ ಘೋಷಣೆ ಮಾಡಿದ್ದಾರೆ. ನಮ್ಮ ನಾಯಕ ಸಮುದಾಯದಕ್ಕೆ ಸಾಕಷ್ಟು ಅನುದಾನ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ. 3 ಪರ್ಸೆಂಟ್ ಇದ್ದಂತಹ ಮೀಸಲಾತಿಯನ್ನು 7 ಕ್ಕೆ ಏರಿಸಿದ್ದಾರೆ. ಶ್ರೀರಾಮುಲು ಅವರು ಸಚಿವರಾಗಿದ್ದಾಗ ಸಮುದಾಯದ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಹನೂರು ಕ್ಷೇತ್ರದ ಕೌದಳ್ಳಿ ಗ್ರಾಮದಲ್ಲಿ ಭವನ ನಿರ್ಮಾಣಕ್ಕೆ 50 ಲಕ್ಷ ರೂ. ಅನುದಾನವನ್ನು ನೀಡಿದ್ದಾರೆ.
ಕ್ಷೇತ್ರದ ಮಾಜಿ ಶಾಸಕಿ ಪರಿಮಳ ನಾಗಪ್ಪ ಅವರು ಕೇವಲ ಮೂರು ವರ್ಷ ಆಡಳಿತ ಅವಧಿಯಲ್ಲಿ ನಮ್ಮ ನಾಯಕ ಸಮುದಾಯಕ್ಕೆ 350 ಕ್ಕೂ ಹೆಚ್ಚು ಬೋರ್ ವೇಲ್ ಕೊರೆಸಿದ್ದಾರೆ. ನಾಯಕ ಸಮುದಾಯದ ಹೆಚ್ಚಾಗಿರುವ ಪಾಳ್ಯ, ಕೌದಳ್ಳಿ, ಬಂಡಳ್ಳಿ, ಶಾಗ್ಯ, ಹುತ್ತೂರು ಗ್ರಾಮಗಳಿಗೆ ಅವರ ಅವಧಿಯಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಸರ್ಕಾರ ಎಸ್ಸಿ ಎಸ್ಟಿ ನಿಗಮ ಹಣವನ್ನು ಗ್ಯಾರೆಂಟಿ ಯೋಜನೆಗಳಿಗೆ ಬಳಸಿಕೊಂಡು ಎಸ್ಸಿ ಎಸ್ಟಿ ಸಮುದಾಯಕ್ಕೆ ಅನ್ಯಾಯ ಮಾಡಿದೆ. ದಿನಸಿ ದಿನ ಬಳಕೆ ಸಾಮಗ್ರಿಗಳ ಬೆಲೆಯನ್ನೂ ಏರಿಕೆ ಮಾಡಿದ್ದಾರೆ. ಆದರೆ ಬಿಜೆಪಿ ಸರ್ಕಾರ ಪ್ರತಿಯೊಂದು ಜನಸಾಮಾನ್ಯರಿಗೂ ಹಲವಾರು ಯೋಜನೆಗಳನ್ನು ನೀಡಿದ್ದಾರೆ. ಹಾಗಾಗಿ ದೇಶದ ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿಗೆ ಮತ ನೀಡಿ ಎಂದು ತಿಳಿಸಿದ್ದಾರೆ.